ಕನ್ನಡಪ್ರಭ ವಾರ್ತೆ ಪಾಂಡವಪುರ
ಬಳಿಕ ಮಾತನಾಡಿದ ಅಧ್ಯಕ್ಷ ಡಾ.ಕೆ.ಆರ್.ಸ್ವಾಮೀಗೌಡ, ಲಯನ್ಸ್ ಸಂಸ್ಥೆಯೂ ಸಮಾಜದಲ್ಲಿ ಸೇವಾ ಮನೋಭಾಗದ ಉದ್ದೇಶದಿಂದ ಕೆಲಸ ಮಾಡುತ್ತಿದೆ. ಶಾಲಾ ಮಕ್ಕಳಿಗೆ ಅನುಕೂಲವಾಗಲು ಸ್ವಾತಂತ್ರ್ಯ ದಿನಾಚರಣೆಯಂದು ತನ್ನ ತವರು ಗ್ರಾಮ ಕುರಹಟ್ಟಿ ಹಾಗೂ ಅಜ್ಜಿ ಮನೆ ಶಂಕನಹಳ್ಳಿ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತವಾಗಿ ಸ್ಕೂಲ್ ಬ್ಯಾಗ್ ವಿತರಿಸಿದ್ದೇನೆ ಎಂದರು.
ಮುಂದಿನ ದಿನಗಳಲ್ಲಿ ತಾಲೂಕಿನ ಮತ್ತಷ್ಟು ಗ್ರಾಮಗಳ ಸರ್ಕಾರಿ ಶಾಲೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗವಂತೆ ಕೆಲಸ ಮಾಡಲಾಗುವುದು. ಪ್ರತಿಯೊಬ್ಬ ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ಕೆಲಸ ಮಾಡಬೇಕು. ದೇಶಭಕ್ತಿ ಮೈಗೂಡಿಸಿಕೊಂಡು ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬೇಕು ಎಂದರು.ಈ ವೇಳೆ ಲಯನ್ಸ್ ಸಂಸ್ಥೆ ಉಪಾಧ್ಯಕ್ಷ ಎಸ್.ಆನಂದ್, ಕಾರ್ಯದರ್ಶಿ ಪುಟ್ಟಬಸವೇಗೌಡ, ಲಯನ್ಸ್ ಡಿ.ಆರ್.ಸುರೇಶ್, ಶಂಕನಹಳ್ಳಿ ಗ್ರಾಪಂ ಸದಸ್ಯೆ ಶಿವಮ್ಮ, ಎಸ್‌ಡಿಎಂಸಿ ಅಧ್ಯಕ್ಷ ಗಣೇಶ್, ಮುಖ್ಯಶಿಕ್ಷಕ ರವಿಕುಮಾರ್, ಯಜಮಾನರಾದ ಸ್ವಾಮೀಗೌಡ, ತಿಮ್ಮೇಗೌಡ, ದಾಳೇಗೌಡ, ಕುರುಹಟ್ಟಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಮಂಜೇಗೌಡ, ಉಪಾಧ್ಯಕ್ಷೆ ರಾಧ, ಡೇರಿ ಅಧ್ಯಕ್ಷೆ ರೋಹಿಣಿ, ಮುಖ್ಯಶಿಕ್ಷಕ ಪುಟ್ಟರಾಜೇಗೌಡ, ಮುಖಂಡರಾದ ಅಪ್ಪುಗೌಡ, ಮಹದೇವು, ಲೋಕೇಶ್ ಸೇರಿದಂತೆ ಶಿಕ್ಷಕರು, ಮುಖಂಡರು ಹಾಜರಿದ್ದರು.