ಮಾನಸಿಕ ಆರೊಗ್ಯ ಕಾಯಿಲೆಗೆ ಉಚಿತ ಚಿಕಿತ್ಸೆ

KannadaprabhaNewsNetwork |  
Published : Feb 23, 2024, 01:54 AM IST
ಚಿತ್ತಾಪುರ ಪಟ್ಟಣದಲ್ಲಿ ಜಿಲ್ಲಾ ಮಾನಸಿಕ ಆರೊಗ್ಯ ಕಾರ್ಯಕ್ರಮ ಹಾಗೂ ಡಿ. ಅಸೊಸಿಯೇಷನ್ ಆಫ್ ಪೀಪಲ್ ವಿಥ್ ಡಿಸಬಿಲಿಟಿ ಕಲಬರಗಿ ಆಶ್ರಯದಲ್ಲಿ ಸಮುದಾಯ ಮಾನಸಿಕ ಆರೊಗ್ಯ ಜನಜಾಗೃತಿ ಕಾರ್ಯಕ್ರಮವನ್ನು ತಾಪಂ ಸಹಾಯಕ ನಿರ್ದೆಶಕ ಮಲ್ಲಿಕಾರ್ಜುನ ಉದ್ಘಾಟಿಸಿ ಮಾತನಾಡಿದರು. | Kannada Prabha

ಸಾರಾಂಶ

ಮಾನಸಿಕ ಆರೊಗ್ಯ ಕಾಯಿಲೆಯಿಂದ ಬಳಲುತ್ತಿರುವವರು ತಮ್ಮ ಕಾಯಿಲೆಯನ್ನು ಗುಣಪಡಿಸಿಕೊಳ್ಳಲು ಸರ್ಕಾರವು ಉಚಿತವಾಗಿ ಚಿಕಿತ್ಸೆಯನ್ನು ನೀಡುತ್ತಿದೆ.

ಕನ್ನಡಪ್ರಭ ವಾರ್ತೆ ಚಿತ್ತಾಪುರ

ಮಾನಸಿಕ ಆರೊಗ್ಯ ಕಾಯಿಲೆಯಿಂದ ಬಳಲುತ್ತಿರುವವರು ತಮ್ಮ ಕಾಯಿಲೆಯನ್ನು ಗುಣಪಡಿಸಿಕೊಳ್ಳಲು ಸರ್ಕಾರವು ಉಚಿತವಾಗಿ ಚಿಕಿತ್ಸೆಯನ್ನು ನೀಡುತ್ತಿದ್ದು ಇದರ ಸೌಲಭ್ಯವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದು ತಾಪಂ ಸಹಾಯಕ ನಿರ್ದೆಶಕ ಮಲ್ಲಿಕಾರ್ಜುನ್ ಹೇಳಿದರು.

ಪಟ್ಟಣದ ನಡೆಯುವ ವಾರದ ಸಂತೆಯಲ್ಲಿ ಜಿಲ್ಲಾ ಮಾನಸಿಕ ಆರೊಗ್ಯ ಇಲಾಖೆ, ಹಾಗೂ ಡಿ. ಅಸೊಸಿಯೇಷನ್ ಆಫ್ ಪೀಪಲ್ ವಿಥ್ ಡಿಸಬಿಲಿಟಿ(ಎಪಿಡಿ) ಅವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಮುದಾಯ ಮಾನಸಿಕ ಆರೊಗ್ಯ ಜನಜಾಗೃತಿ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದರು.

ಮಾನಸಿಕ ಆರೊಗ್ಯ ಕಾಯಿಲೆಯನ್ನು ಗುಣಪಡಿಸಲು ಸರ್ಕಾರ ಸುವರ್ಣ ಅವಕಾಶವನ್ನು ಕಲ್ಪಿಸಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತಿ ತಿಂಗಳ ಮೂರನೇ ಮಂಗಳವಾರ ಜಿಲ್ಲಾ ಮನೊವೈದ್ಯರು ಬಂದು ಕಾಯಿಲೆಗೆ ಸೂಕ್ತವಾದ ಚಿಕಿತ್ಸೆ ಮತ್ತು ಉಚಿತವಾಗಿ ಜ್ಞಾಷದಿಗಳನ್ನು ಉಚಿತವಾಗಿ ಒದಗಿಸುತ್ತಾರೆ ಆದ್ದರಿಂದ ತಾಲೂಕಿನಲ್ಲಿ ಮಾನಸಿಕ ಕಾಯಿಲೆ ಉಳ್ಳವರು ಸೂಕ್ತ ಚಿಕಿತ್ಸೆ ಪಡೆಯಬೇಕು ಮತ್ತು ತಮ್ಮ ಸುತ್ತ ಮುತ್ತ ಇಂತಹ ಪ್ರಕರಣ ಹೊಂದಿರುವವರಿಗೆ ಮಾಹಿತಿ ನೀಡಬೇಕು ಎಂದರು.

ಎಪಿಡಿ ಸಂಸ್ಥೆಯ ಮ್ಯಾನೇಜರ್ ಅಲ್ಪಾ, ಯುಆರ್‌ಡಬ್ಲೂನ ಸೂರ್ಯಕಾಂತ, ಸಮಾಜ ಸೇವಕ ಮಾಹಾದೇವಿ ಕಾರ್ಯಕ್ಷೇತ್ರ ಕಾರ್ಯಕರ್ತ ಲಿಂಗಪ್ಪ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ