ತ್ಯಾಗ ಬಲಿದಾನದ ಮೂಲಕ ಸ್ವಾತಂತ್ರ್ಯ: ಸಂಸದ ಕೋಟ

KannadaprabhaNewsNetwork |  
Published : Aug 17, 2024, 12:46 AM IST
ಕೋಟ16 | Kannada Prabha

ಸಾರಾಂಶ

ಸಾಸ್ತಾನದ ಐರೋಡಿಯಲ್ಲಿ ಸ್ವಾತಂತ್ರ್ಯೋತ್ಸವದಂಗವಾಗಿ ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷ ವಿಠಲ್ ಪೂಜಾರಿ ಮನೆಯಂಗಳದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಧ್ವಜಾರೋಹಣ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಕೋಟ

ತ್ಯಾಗ ಬಲಿದಾನದ ಮೂಲಕ ಈ ದೇಶಕ್ಕೆ ಸ್ವಾತಂತ್ರ್ಯ ದೊರಕಿದೆ, ಈಗ ಎಲ್ಲರೂ ಒಂದಾಗಿ ಸುಭದ್ರ ಸಮೃದ್ಧ ಭಾರತವನ್ನು ನಿರ್ಮಿಸೋಣ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕರೆ ನೀಡಿದರು.

ಅವರು ಸಾಸ್ತಾನದ ಐರೋಡಿಯಲ್ಲಿ ಸ್ವಾತಂತ್ರ್ಯೋತ್ಸವದಂಗವಾಗಿ ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷ ವಿಠಲ್ ಪೂಜಾರಿ ಮನೆಯಂಗಳದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ವಿದೇಶರಿಂದ ಸ್ವಾತಂತ್ರ್ಯ ಪಡೆದ ಕಾಲಘಟ್ಟದಿಂದ ಇಂದು ನಾವು ಬಹು ಎತ್ತರಕ್ಕೆ ಬೆಳೆದಿದ್ದೇವೆ. ವಿಶ್ವಮಟ್ಟದಲ್ಲಿ ಭಾರತ ಮಹತ್ತರ ಪಾತ್ರ ವಹಿಸುವ ಕಾಲಘಟ್ಟಕ್ಕೆ ಬಂದು ನಿಂತಿದ್ದೇವೆ. ಮಹಾನ್ ಕ್ರಾಂತಿಕಾರಿಗಳ ಹೋರಾಟದ ಫಲವಾಗಿ ಬಳುವಳಿಯಾಗಿ ಸಿಕ್ಕ ದೇಶದ ಕೀರ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಮಟ್ಟದಲ್ಲಿ ಪಸರಿಸಿದ್ದಾರೆ ಎಂದವರು ಹೇಳಿದರು.ಈ ಸಂದರ್ಭ ಸ್ಥಳೀಯ ಉದ್ಯಮಿ ಎಂ.ಸಿ. ಚಂದ್ರಶೇಖರ್, ಕೋಡಿ ಗ್ರಾ.ಪಂ. ಸದಸ್ಯ ಕೃಷ್ಣ ಪೂಜಾರಿ ಪಿ., ಐರೋಡಿ ಗ್ರಾ.ಪಂ. ಸದಸ್ಯ ನಟರಾಜ್ ಗಾಣಿಗ, ಸಾಲಿಗ್ರಾಮ ಪ.ಪಂ. ಸದಸ್ಯ ಸಂಜೀವ ದೇವಾಡಿಗ, ಪಾಂಡೇಶ್ವರ ಗ್ರಾ.ಪಂ. ಸದಸ್ಯ ಪ್ರತಾಪ್ ಶೆಟ್ಟಿ ಸಾಸ್ತಾನ ಮತ್ತಿತರರು ಉಪಸ್ಥಿತರಿದ್ದರು.

ಪ್ರಶಾಂತ್ ಪುತ್ರನ್ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ವಿಠಲ್ ಪೂಜಾರಿ ವಂದಿಸಿದರು. ನಂತರ ಸಿಹಿ ತಿಂಡಿ ವಿತರಣೆ, ಮಲ್ಲಿಗೆ ಗಿಡಗಳ ವಿತರಣೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸತ್ಸಂಗದಿಂದ ಆಧ್ಯಾತ್ಮಿಕ ಶಕ್ತಿ ಜಾಗೃತಿ: ಬ್ರಹ್ಮಾನಂದ ಸರಸ್ವತಿ ಶ್ರೀ
ಪ್ರತಿಭೆಗಳ ಬೆಳಕಿಗೆ ತರಲು ಸರ್ಕಾರದ ಜೊತೆಗೆ ಪಾಲಕರು ಕೈಜೋಡಿಸಿ-ಶಾಸಕ ಬಸವರಾಜ