ಕೊಟ್ಟೂರು: 22ನೇ ವಯಸ್ಸಿನಲ್ಲಿ ಕಾಲೇಜಿನಿಂದ ನಿರ್ಗಮಿಸಿದ ಯುವಕ, ಯುವತಿಯರು ಪುನಃ 30 ವರ್ಷದ ನಂತರ ಒಂದುಗೂಡುತ್ತಾರೆ ಎಂದು ಯಾರೂ ಕನಸು ಮನಸ್ಸಿನಲ್ಲಿ ಅಂದುಕೊಂಡಿರಲಿಲ್ಲ, ವಾಟ್ಸಪ್ ದುರುಪಯೋಗವಾಗುತ್ತಿರುವ ಇಂದಿನ ದಿನಗಳಲ್ಲಿ ವಾಟ್ಸಪ್ಪಿನಿಂದಲೇ ಗುರು, ಶಿಷ್ಯಬಳಗ ಬೆಸೆಯುವ ಮೂಲಕ ಹೊಸ ಮನ್ವಂತರಕ್ಕೆ ಕೊಟ್ಟೂರಿನಲ್ಲಿ ಓದಿರುವ ಹಳೆಯ ವಿದ್ಯಾರ್ಥಿಗಳು ಮುನ್ನುಡಿ ಬರೆದಿದ್ದಾರೆ.
ವಿದ್ಯಾರ್ಥಿಗಳೇ ಈಗ ನಿವೃತ್ತಿಯ ಅಂಚಿನಲ್ಲಿದ್ದರೆ ಅವರಿಗೆ ಪಾಠ ಮಾಡಿದ ಉಪನ್ಯಾಸಕರು ಪೂರ್ಣ ಇಳಿವಯಸ್ಸಿನಲ್ಲಿದ್ದರೂ ವಿದ್ಯಾರ್ಥಿಗಳ ಪ್ರೀತಿಗೆ ಮನಸೋತು ಅವರು ಸ್ನೇಹ ಸಮ್ಮಿಲನ ಕಾರ್ಯಕ್ರಮಕ್ಕೆ ಬಂದು ತಮ್ಮ ವಿದ್ಯಾರ್ಥಿಗಳ ಜತೆಗೆ ಹೆಜ್ಜೆ ಹಾಕಿ ನಮಗೂ ಇನ್ನೂ ಜೀವಚೈತನ್ಯ ಇದೆ ಎಂದು ತೋರಿಸಿಕೊಟ್ಟರು.
ಕಲಬುರಗಿ ವಿಶ್ವವಿದ್ಯಾಲಯದ ವಿಶ್ರಾಂತ ಇತಿಹಾಸ ಉಪನ್ಯಾಸಕ, ಇತಿಹಾಸ ಸಂಶೋಧಕ ಡಾ. ಬಿ.ಸಿ.ಮಹಾಬಲೇಶ್ವರಪ್ಪ ಸ್ನೇಹ ಸಮ್ಮಿಲನ ಉದ್ಘಾಟಿಸಿ ಮಾತನಾಡಿ, 12ನೇ ಶತಮಾನದ ಶರಣರು ಇಡೀ ದೇಶಕ್ಕೆ ಮೊದಲು ಜಾತಿ ವ್ಯವಸ್ಥೆ ಕಿತ್ತೊಗೆದು ಸಮಾನತೆ ತಂದವರು ಅಂತಹ ಶರಣರ ಜೀವನಗಳ ಆದರ್ಶನ ಇಂದಿನ ಮಕ್ಕಳಿಗೆ ನಾವು ನೀವು ಕಲಿಸಬೇಕಾಗಿದೆ ಎಂದರು.ಉಪನ್ಯಾಸಕ ಪೂಜಾರ ಕೊಟ್ರಪ್ಪ, ಸಹದೇವಪ್ಪ, ಪಿ.ಡಿ. ಕೆರೂರ್,ಮಹೇಶ್ವರಮೂರ್ತಿ, ಮಸ್ತಾನಪ್ಪ, ಎಸ್. ಶಶಿಕಿರಣ್, ಜಿ.ಬಿ. ನಾಗನಗೌಡ, ಎಂ.ಕೆ. ಗದ್ದಿಗೇಶ್, ಡಾ. ಕುಸುಮಾ ಸಜ್ಜನ್, ಜೆ.ಬಿ. ಸಿದ್ದನಗೌಡ, ನಿರ್ಮಲ ಶಿವನಗುತ್ತಿ, ಬೋಧಕೇತರ ಸಿಬ್ಬಂಧಿ ಮಂಜುನಾಥ, ಕುಬೇರಪ್ಪ, ದೇವರಮನಿ ಕೊಟ್ರೇಶ್, ಕುಸುಮಾ, ಸೊಕ್ಕೆ ನಾಗರಾಜ್, ಶಂಕರಿ, ವೀರಣ್ಣಗಳಿಗೆ ಗುರುವಂದನೆ ಹಳೆಯ ವಿದ್ಯಾರ್ಥಿಗಳು ಸಲ್ಲಿಸಿದರು.
ಭೀಮಣ್ಣ ಗಜಾಪುರ ಮತ್ತು ಜಯಶ್ರೀ, ಕೌಶಲ್ಯ, ಕೋಡಿಹಳ್ಳಿ ಪ್ರಕಾಶ್ ಕಾಲೇಜ್ ದಿನಗಳ ನೆನಪು ಹಂಚಿಕೊಂಡರು. ಸ್ನೇಹ ಸಮ್ಮಿಲನ ಸಮಿತಿ ಅಧ್ಯಕ್ಷ ಡಾ. ಹರಪನಹಳ್ಳಿ ಕೊಟ್ರೇಶ್, ಕಾರ್ಯದರ್ಶಿ ಎನ್.ಎಂ. ವಾಗೀಶ್, ಸಂಘಟನಾ ಕಾರ್ಯದರ್ಶಿ ಕೋಡಿಹಳ್ಳಿ ಪ್ರಕಾಶ್, ಉಪಾಧ್ಯಕ್ಷ ವಕೀಲ ಸೀತಾರಾಮ್, ಕೆ.ಎಂ. ಸೋಮಶೇಖರ, ಎಂ. ಮೀನಾಕ್ಷಿ, ಖಜಾಂಚಿ ಆರ್. ಶ್ರೀಧರ್, ಸಿ. ಲೋಕೇಶ್, ಸಂಚಾಲಕ ಎನ್. ಕೆಂಚಪ್ಪ, ಓಂಕಾರೇಶ್ವರ ಗೌಡ, ಜಂಬೂರು ಕೊಟ್ರೇಶ್, ಆರ್.ಎಂ. ವೀರಭದ್ರಯ್ಯ, ಸಿ.ಎಂ. ಕೊಟ್ರೇಶ್, ರಂಗನಾಥನಹಳ್ಳಿ ಶ್ರೀನಿವಾಸ್ ಸೇರಿದಂತೆ ನೂರಾರು ಹಳೆಯ ವಿದ್ಯಾರ್ಥಿಗಳು ಹಾಜರಿದ್ದರು.