ಸ್ನೇಹ ಸವಿಜೇನು ಇದ್ದಂತೆ: ಆರ್.ಕೆ. ಮಾಳೋದೆ

KannadaprabhaNewsNetwork |  
Published : May 19, 2026, 02:30 AM IST
ಗಜೇಂದ್ರಗಡದ ಎಸ್.ಎಮ್.ಬಿ ಪ್ರೌಢಶಾಲೆಯ ೧೯೮೩ನೇ ಸಾಲಿನ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ಹಾಗೂ ಗುರು ವಂದನೆ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಎಲ್ಲರ ಜೀವನದ ಪುಸ್ತಕದಲ್ಲಿ ಅತ್ಯಂತ ಸುಂದರ ಪುಟಗಳಿದ್ದರೆ ಆತ್ಮೀಯ ಸ್ನೇಹಿತರ ಜತೆಗಿದ್ದ ದಿನಗಳು. ಅಂತಹ ಸುಂದರ ನೆನಪುಗಳನ್ನು ಪದೇ ಪದೇ ಮೆಲುಕು ಹಾಕಿ ಅಂದಿನ ಸುಂದರ ದಿನಗಳನ್ನು ನೆನಪಿಸಿಕೊಳ್ಳುವುದು ಸಹಜ.

ಗಜೇಂದ್ರಗಡ: ನಿಸ್ವಾರ್ಥ ಮನೋಭಾವದ ಸ್ನೇಹಿತರು ಸಿಗುವುದು ಅಪರೂಪ. ಇಂತಹ ದಿನಮಾನಗಳಲ್ಲಿ ಗೆಳೆಯರ ಸಂಬಂಧವನ್ನು ಉಳಿಸಿಕೊಂಡು ಹೋಗುತ್ತಿರುವ ಈ ಸ್ನೇಹ ಸಮ್ಮೇಳನವು ಸವಿಜೇನಿನ ಸಮ್ಮೇಳನ ಎಂದು ನಿವೃತ್ತ ಶಿಕ್ಷಕ ಆರ್.ಕೆ. ಮಾಳೋದೆ ತಿಳಿಸಿದರು.ಪಟ್ಟಣದ ಸಿಂಹಾಸನ ಪ್ಲಾಟಿನ ಈಶ್ವರ ದೇಗುಲದ ಸಮುದಾಯ ಭನವದಲ್ಲಿ ನಡೆದ ಇಲ್ಲಿನ ಎಸ್‌ಎಂಬಿ ಪ್ರೌಢಶಾಲೆಯ ೧೯೮೩ನೇ ಸಾಲಿನ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಸ್ನೇಹ ಸಮ್ಮೇಳನ ಹಾಗೂ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಎಲ್ಲರ ಜೀವನದ ಪುಸ್ತಕದಲ್ಲಿ ಅತ್ಯಂತ ಸುಂದರ ಪುಟಗಳಿದ್ದರೆ ಆತ್ಮೀಯ ಸ್ನೇಹಿತರ ಜತೆಗಿದ್ದ ದಿನಗಳು. ಅಂತಹ ಸುಂದರ ನೆನಪುಗಳನ್ನು ಪದೇ ಪದೇ ಮೆಲುಕು ಹಾಕಿ ಅಂದಿನ ಸುಂದರ ದಿನಗಳನ್ನು ನೆನಪಿಸಿಕೊಳ್ಳುವುದು ಸಹಜ. ಆದರೆ, ಆ ಎಲ್ಲ ಗೆಳೆಯರ ಜತೆ ಸೇರಿ ಹಿಂದಿನ ದಿನಗಳನ್ನು ನೆನೆದು ಹರಟೆ ಹೊಡೆಯುವುದು ಕಷ್ಟ. ಅಂತಹ ಅಮೂಲ್ಯ ಸ್ನೇಹಿತರ ಬಳಗವು ಅದು ೪೩ ವರ್ಷಗಳ ನಂತರ ಸೇರಿರುವುದು ನಿಸ್ವಾರ್ಥ ಸ್ನೇಹಕ್ಕೆ ಮಾದರಿಯಾಗಿದೆ ಎಂದರು. ಕೆ.ಎಸ್. ಗಾರವಾಡ ಹಿರೇಮಠ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲೂ ಸಾವಿರಾರು ಸ್ನೇಹಿತರು ಇರುತ್ತಾರೆ. ಆದರೆ, ಜೀವನದ ಪ್ರಮುಖ ಘಟ್ಟದಲ್ಲಿ ಮುಖ್ಯಪಾತ್ರ ವಹಿಸಿದ ಸ್ನೇಹಿತರು ಕೇವಲ ಬೆರಳಣಿಕೆಯಷ್ಟು. ಅಂತಹ ಅಮೂಲ್ಯ ಸ್ಮೇಹಿತರನ್ನು ಮರೆಯದೇ ಸತತ ೪೬ ವರ್ಷಗಳಿಂದ ಸ್ನೇಹದ ಬಂಧವನ್ನು ಗಟ್ಟಿಗೊಳಿಸುತ್ತಾ ನಡೆಯುತ್ತಿರುವುದು ಯುವಕರಿಗೆ ಮಾದರಿಯಾಗಿದೆ ಎಂದರು.ಈ ವೇಳೆ ನಿವೃತ್ತ ಶಿಕ್ಷಕರಾದ ಆರ್.ಕೆ. ಮಾಳೋದೆ, ಎನ್.ಟಿ. ಶಿವಳ್ಳಿ, ಎಸ್.ಎಸ್. ವಾಲಿ, ವಿ.ಎಸ್. ನವಲಗುಂದ, ಎಸ್.ಬಿ. ಪಾಟೀಲ ಹಾಗೂ ನಿಧನ ಹೊಂದಿರುವ ಶಿಕ್ಷಕರಿಗೆ ಹಾಗೂ ಅಗಲಿದ ವಿದ್ಯಾರ್ಥಿಗಳ ಪರಿವಾರದವರನ್ನು ಗೌರವಿಸಲಾಯಿತು.

ಆರ್.ಎಸ್. ಜೀರೆ, ಶ್ರೀಧರ ಗಂಜಿಗೌಡ್ರ, ಭಾಸ್ಕರ ರಾಯಬಾಗಿ, ಸಂಗಮೇಶ ಹೂಲಗೇರಿ, ಶಾಮಿದ ದಿಂಡವಾಡ, ಐ.ಡಿ. ಮ್ಯಾಗೇರಿ, ರಘುನಾಥ ತಾಸಿನ, ಪರಿಮಳಾ ಗಜೇಂದ್ರಗಡಕರ್, ಶಶಿಕಲಾ ಕುಂದಾಪುರ, ಸಂಧ್ಯಾ ಕಾರಕೂನ, ಬೇಬಕ್ಕ ಚಟ್ಟೇರ್, ಲಕ್ಷ್ಮೀ ಶೀಂಗ್ರಿ ಮೌಲಾಸಾಬ ತೋರಗಲ್, ಆರ್.ಎಸ್. ಮಕಾನದಾರ, ಸಿ.ಎಸ್. ವಾಲಿ, ಆರ್.ಕೆ. ಕವಡಿಮಟ್ಟಿ, ವಿದ್ಯಾ ಮೊಸಳೆ, ಶಾರದಾ ಹೊರಪೇಟಿ, ಎಂ.ಜೆ. ದಾನಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಫ್‌ಐಡಿ ಕಡ್ಡಾಯ: ಮುಂದಿನ ವರ್ಷದಿಂದ ಹಂತ ಹಂತವಾಗಿ ಮಾಡಿ-ಭುವನೇಶ್ವರ ಶಿಡ್ಲಾಪುರ
ಬೇರೆ ತಾಲೂಕಿಗೆ ಗೊಬ್ಬರ ಸರಬರಾಜಾದರೆ ಕ್ರಮ-ಶಾಸಕ ಪಠಾಣ್‌