ಆಗಸ್ಟ್‌ 22ರಿಂದ ಕಾಶಿ ವಿಶ್ವನಾಥ ರಥೋತ್ಸವ, ದುರ್ಗಾದೇವಿಗೆ ಉಡಿ ತುಂಬುವ ಕಾರ್ಯಕ್ರಮ

KannadaprabhaNewsNetwork |  
Published : Aug 19, 2025, 01:00 AM IST
18ಜಿಡಿಜಿ5 | Kannada Prabha

ಸಾರಾಂಶ

ಕಾಶಿ ವಿಶ್ವನಾಥ ನಗರ (ಬುಳ್ಳಾ ಪ್ಲಾಟ್)ನ ಕಾಶೀ ವಿಶ್ವನಾಥ ರಥೋತ್ಸವ ಹಾಗೂ ಜಗನ್ಮಾತೆ ಶ್ರೀ ದುರ್ಗಾದೇವಿಗೆ ಉಡಿ ತುಂಬುವ ಕಾರ್ಯಕ್ರಮ, ಸಾಮೂಹಿಕ ವಿವಾಹ, ಧರ್ಮಸಭೆ, ಮಹಾರಥೋತ್ಸವ, ಸನ್ಮಾನ, ಜಾನಪದ- ರಸಮಂಜರಿ ಕಾರ್ಯಕ್ರಮಗಳು ಆ. 22ರಿಂದ 24ರ ವರೆಗೆ ಜರುಗಲಿವೆ.

ಗದಗ: ಕಾಶಿ ವಿಶ್ವನಾಥ ನಗರ (ಬುಳ್ಳಾ ಪ್ಲಾಟ್)ನ ಕಾಶೀ ವಿಶ್ವನಾಥ ರಥೋತ್ಸವ ಹಾಗೂ ಜಗನ್ಮಾತೆ ಶ್ರೀ ದುರ್ಗಾದೇವಿಗೆ ಉಡಿ ತುಂಬುವ ಕಾರ್ಯಕ್ರಮ, ಸಾಮೂಹಿಕ ವಿವಾಹ, ಧರ್ಮಸಭೆ, ಮಹಾರಥೋತ್ಸವ, ಸನ್ಮಾನ, ಜಾನಪದ- ರಸಮಂಜರಿ ಕಾರ್ಯಕ್ರಮಗಳು ಆ. 22ರಿಂದ 24ರ ವರೆಗೆ ಜರುಗಲಿವೆ.ಆ. 22ರಂದು ಬೆಳಗ್ಗೆ 6ಕ್ಕೆ ಕಾಶೀ ವಿಶ್ವನಾಥನಿಗೆ ಅಭಿಷೇಕ, ದುರ್ಗಾದೇವಿಗೆ ಉಡಿ ತುಂಬುವ ಕಾರ್ಯಕ್ರಮ, ಮಧ್ಯಾಹ್ನ 12ಕ್ಕೆ 33ನೇ ವರ್ಷದ ಸಾಮೂಹಿಕ ವಿವಾಹ, ಧರ್ಮಸಭೆ ಜರುಗುವದು.ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಸಾನಿಧ್ಯ ವಹಿಸುವರು. ಅಧ್ಯಕ್ಷತೆಯನ್ನು ಜಾತ್ರಾ ಸಮಿತಿ ಅಧ್ಯಕ್ಷ ವೆಂಕಟೇಶ ಪೂಜಾರ ವಹಿಸುವರು. ಮುಖ್ಯ ಅತಿಥಿಗಳಾಗಿ ವಿಪ ಸದಸ್ಯ ಎಸ್.ವಿ. ಸಂಕನೂರ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಸೇರಿ ಗಣ್ಯರು ಆಗಮಿಸುವರು.ಮಧ್ಯಾಹ್ನ 1ಕ್ಕೆ ಕಲ್ಲಯ್ಯಜ್ಜನವರು ಮಹಾ ಅನ್ನಸಂತರ್ಪಣೆಗೆ ಚಾಲನೆ ನೀಡುವರು. ಸಂಜೆ 6ಕ್ಕೆ ಕಾಶೀ ವಿಶ್ವನಾಥ ರಥೋತ್ಸವ ಜರುಗುವದು.ಆ. 23ರಂದು ಸಂಜೆ 4ಕ್ಕೆ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಯುವಕರಿಗೆ ಕ್ರೀಡೆಗಳು ನಡೆಯಲಿವೆ. ಸಂಜೆ 7ಕ್ಕೆ ಸನ್ಮಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪಾರಿತೋಷಕ ವಿತರಣೆ ಜರುಗುವದು.ಸಾನಿಧ್ಯವನ್ನು ಭೈರನಹಟ್ಟಿಯ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮಿಗಳು ವಹಿಸುವರು. ಅಧ್ಯಕ್ಷತೆಯನ್ನು ಜಾತ್ರಾ ಸಮಿತಿಯ ಅಧ್ಯಕ್ಷ ವೆಂಕಟೇಶ ಪೂಜಾರ ವಹಿಸುವರು.ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಶಾಸಕ ಜಿ.ಎಸ್. ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಸೇರಿ ಗಣ್ಯರು ಆಗಮಿಸುವರು. ಆರ್.ಎಸ್. ಕಾಶೀಗೌಡ್ರ, ವಿ.ಎಸ್. ಅಮರಶೆಟ್ಟಿ ಅವರಿಗೆ ಸನ್ಮಾನವಿದೆ.ಆ. 24ರಂದು ಸಂಜೆ 6ಕ್ಕೆ ಸನ್ಮಾನ ಹಾಗೂ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಸಾನಿಧ್ಯವನ್ನು ನರಗುಂದ ಪಂಚಗ್ರಹ ಗುಡ್ಡದ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ವಹಿಸುವರು. ಅಧ್ಯಕ್ಷತೆಯನ್ನು ಜಾತ್ರಾ ಸಮಿತಿಯ ಅಧ್ಯಕ್ಷ ವೆಂಕಟೇಶ ಪೂಜಾರ ವಹಿಸುವರು.ಮುಖ್ಯ ಅತಿಥಿಗಳಾಗಿ ಸಂಸದ ಬಸವರಾಜ ಬೊಮ್ಮಾಯಿ, ಮಾಜಿ ಶಾಸಕ ಡಿ.ಆರ್. ಪಾಟೀಲ ಆಗಮಿಸುವರು. ಅತಿಥಿಗಳಾಗಿ ಎಸ್ಪಿ ರೋಹನ ಜಗದೀಶ, ಪೌರಾಯುಕ್ತ ರಾಜಾರಾಮ ಪವಾರ ಸೇರಿದಂತೆ ಗಣ್ಯರು ಆಗಮಿಸುವರು ಎಂದು ಚನ್ನವೀರ ಮಳಗಿ, ಶಾಂತಪ್ಪ ಅಕ್ಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?