ಚನ್ನಯ್ಯ ಜನಾಂಗ ಹೋರಾಟದಿಂದ ಸಮಾಜದ ಮುಖ್ಯವಾಹಿನಿಗೆ: ಡಾ.ನೀಲೇಶ್

KannadaprabhaNewsNetwork |  
Published : Jun 01, 2026, 02:00 AM IST
ಫೋಟೊ:೨೯ಕೆಪಿಸೊರಬ-೦೧ : ಸೊರಬ ಪಟ್ಟಣದಲ್ಲಿ ಅಖಿಲ ಕರ್ನಾಟಕ ಚನ್ನಯ್ಯ (ಬಲಗೈ) ಸಮಾಜ ಅಭಿವೃದ್ಧಿ ಹೋರಾಟ ಶಿವಮೊಗ್ಗ ಜಿಲ್ಲಾ ಹಾಗೂ ಸೊರಬ ತಾಲೂಕು ಸಮಿತಿಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. | Kannada Prabha

ಸಾರಾಂಶ

ಎದೆಗೆ ಬಿದ್ದ ಅಕ್ಷರ ಭೂಮಿಗೆ ಬಿದ್ದ ಬೀಜ ಮುಂದೊಂದು ದಿನ ಫಲ ಕೊಟ್ಟೇ ಕೊಡುತ್ತದೆ ಎಂಬ ದೇವನೂರು ಮಹಾದೇವ ಅವರ ಮಾತಿಗೆ ಸಾಕ್ಷಿಯೆಂಬಂತೆ, ಚನ್ನಯ್ಯ ಜನಾಂಗವು ಸಹ ಸತತ ಹೋರಾಟಗಳ ಮೂಲಕ, ಬುದ್ಧ-ಬಸವ-ಅಂಬೇಡ್ಕರ್ ರವರ ಆಶಯಗಳೊಂದಿಗೆ ಇಂದು ಸಮಾಜದ ಮುಖ್ಯವಾಹಿನಿಗೆ ಬಂದಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಸೊರಬದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ.ನೀಲೇಶ್ ಎಸ್.ಎಂ. ಹೇಳಿದರು.

ಕನ್ನಡಪ್ರಭ ವಾರ್ತೆ ಸೊರಬ

ಎದೆಗೆ ಬಿದ್ದ ಅಕ್ಷರ ಭೂಮಿಗೆ ಬಿದ್ದ ಬೀಜ ಮುಂದೊಂದು ದಿನ ಫಲ ಕೊಟ್ಟೇ ಕೊಡುತ್ತದೆ ಎಂಬ ದೇವನೂರು ಮಹಾದೇವ ಅವರ ಮಾತಿಗೆ ಸಾಕ್ಷಿಯೆಂಬಂತೆ, ಚನ್ನಯ್ಯ ಜನಾಂಗವು ಸಹ ಸತತ ಹೋರಾಟಗಳ ಮೂಲಕ, ಬುದ್ಧ-ಬಸವ-ಅಂಬೇಡ್ಕರ್ ರವರ ಆಶಯಗಳೊಂದಿಗೆ ಇಂದು ಸಮಾಜದ ಮುಖ್ಯವಾಹಿನಿಗೆ ಬಂದಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಸೊರಬದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ.ನೀಲೇಶ್ ಎಸ್.ಎಂ. ಹೇಳಿದರು.

ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್‌ನ ಕನ್ನಡ ಭವನದಲ್ಲಿ ಅಖಿಲ ಕರ್ನಾಟಕ ಚನ್ನಯ್ಯ (ಬಲಗೈ) ಸಮಾಜ ಅಭಿವೃದ್ಧಿ ಹೋರಾಟ ಶಿವಮೊಗ್ಗ ಜಿಲ್ಲಾ ಹಾಗೂ ಸೊರಬ ತಾಲೂಕು ಸಮಿತಿಗಳ ಸಹಯೋಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ೧೩೫ನೇ ಜಯಂತಿ, ಸಮಾಜದ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸರ್ಕಾರಿ ನಿವೃತ್ತ ನೌಕರರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

ಶಿಕ್ಷಣ ಸಂಘಟನೆ ಹೋರಾಟಗಳ ಮೂಲಕ ನಂಬಿಕೆ ಇಟ್ಟು ಬಂದ ಈ ಸಮಾಜದಲ್ಲಿ ಕಲೆ, ಸಾಹಿತ್ಯ, ಸಂಸ್ಕöÈತಿ ಶ್ರೀಮಂತವಾಗಿದೆ. ಶ್ರೇಣೀಕೃತ ವ್ಯವಸ್ಥೆಯನ್ನು ಮೆಟ್ಟಿ ನಿಂತ ಚನ್ನಯ್ಯ ಸಮಾಜ ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದು, ಬಹುಸಂಖ್ಯಾತರಾಗಿ ರಾಜಕೀಯ ಕ್ಷೇತ್ರದಲ್ಲಿ ಪ್ರತಿನಿಧಿಸುವಂತಾಗಬೇಕಾದರೆ ಇನ್ನಷ್ಟು ಸಂಘಟಿತರಾಗಬೇಕಿದೆ ಎಂದರು.

ಚನ್ನಯ್ಯ ಸಮಾಜದ ರಾಜ್ಯಾಧ್ಯಕ್ಷ ಬಸವರಾಜ ದೊಡ್ಮನಿ ಮಾತನಾಡಿ, ಸ್ವಾತಂತ್ರ್ಯ ಪೂರ್ವದ ಇತಿಹಾಸ ಹೊಂದಿರುವ ಚನ್ನಯ್ಯ ಸಮಾಜವು ಸ್ವಾತಂತ್ರ್ಯದ ಹೋರಾಟದಲ್ಲಿ ಭಾಗವಹಿಸಿರುವ ಬಗ್ಗೆ ಇತಿಹಾಸದಲ್ಲಿ ಉಲ್ಲೇಖವಿದೆ. ಆದರೆ ರಾಜ್ಯಾದ್ಯಂತ ಬಹುಸಂಖ್ಯೆಯಲ್ಲಿರುವ ನಮ್ಮ ಸಮಾಜವನ್ನು ಪರಿಗಣಿಸುವಲ್ಲಿ ಸರ್ಕಾರಗಳು ನಿರ್ಲಕ್ಷಿಸಿರುವುದು ಖಂಡನೀಯ. ಸಮಾಜದ ಸತತ ಹೋರಾಟದ ಮೂಲಕ ಸರ್ಕಾರದ ಮಟ್ಟದಲ್ಲಿ ಗುರುತಿಸಿದ್ದರ ಫಲವಾಗಿ ಬಿ ಗುಂಪಿನಲ್ಲಿ ಚನ್ನಯ್ಯ ಸಮಾಜ ಅಧಿಕೃತವಾಗಿ ಗುರುತಿಸಿಕೊಂಡಿದೆ ಎಂದರು.

ಈ ಸಂದರ್ಭದಲ್ಲಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು

ಶಿಕ್ಷಕಿ ಅನುರಾಧಾ ರಾಮಪ್ಪ ಭೀಮಗೀತೆ ಹಾಡಿದರು. ನಿವೃತ್ತ ಶಿಕ್ಷಕ ಮಂಜಪ್ಪ ಎಸ್.ಮೂಡಗೋಡು ಸಂವಿಧಾನ ಪೀಠಿಕೆ ಬೋಧಿಸಿದರು.

ಶಿಕ್ಷಕ ಗಣಪತಿ ತುಮರಿಕೊಪ್ಪ, ಚನ್ನಯ್ಯ ಸಮಾಜದ ಜಿಲ್ಲಾಧ್ಯಕ್ಷ ರುದ್ರಪ್ಪ ಭೈರೇಕೊಪ್ಪ, ಕೋಟೆ ಬಸವಂತಪ್ಪ, ಎ.ಕೆ.ನಾಗರಾಜ, ಸಾಹಿತಿ ರೇವಣಪ್ಪ ಬಿದರಗೇರಿ, ಎಂ.ನವೀನ್‌ಕುಮಾರ್, ರಂಗಪ್ಪöಹೊನ್ನೇಸರ, ಮಂಜಪ್ಪ ಅಲಗೇರಿ ಮಂಡ್ರಿ, ಸುಬ್ಬಪ್ಪ ಕಾಗೋಡು, ಶಿವಾನಂದ ಕಾನಗೋಡು, ಷಣ್ಣುಖ ಬಿ.ತಳವಾರ ಕಾರವಾರ, ಚಂದ್ರಕಾಂತ ಹಾವೇರಿ, ಕೃಷ್ಣಮೂರ್ತಿ ಯಡೂರು ನಾಗರಾಜ ಕಾಸರಗುಪ್ಪೆ, ಸೋಮಶೇಖರ್ ಸಾಗರ, ತಿಮ್ಮಪ್ಪ ಹೊಸನಗರ, ರವಿಕಿರಣ್ ಶಿಕ್ಷಕರು, ಜಗದೀಶ್ ಚಿಕ್ಕಶಕುನ, ಸುಬ್ರಹ್ಮಣ್ಯ ಲಕ್ಕವಳ್ಳಿ, ಉಮೇಶ್ ಕೆರೆಕೋಡಿ, ರವಿಕುಮಾರ್ ಪೋಲೀಸ್, ಎಸ್.ರಘು, ಹೇಮಾವತಿ, ಸುಜಾತಾ, ಪರಮೇಶ್ವರಪ್ಪ ಬೆನ್ನೂರು, ಈರಪ್ಪ ಬಾಸಿ, ಚಿತ್ರಾವತಿ ಭೀರಪ್ಪ, ಕರಿಯಪ್ಪ ಬೆಟ್ಟದಕೂರ್ಲಿ ,ಕಲ್ಲಪ್ಪ ಶಿಕ್ಷಕರು, ರಾಜು ಆಚಾರ್, ಗಂಗಾಧರ ಮರೂರು, ಅಣ್ಣಪ್ಪ ಕಾನ್ಲೆ, ಶ್ರೀಕಾಂತ ಚಿಕ್ಕಶಕುನ, ಮಹೇಶ್ ಕಡಸೂರು ಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಸವಣ್ಣನ ಹೆಸರಿನಲ್ಲಿ ಹಿಂದೂ ಸಮಾಜ ಒಡೆಯುವ ಷಡ್ಯಂತ್ರ
ಭಾರತ ಏಕತೆ, ಶಾಂತಿಯ ಸುಂದರ ತೋಟ: ಡಾ. ಅನ್ನದಾನೀಶ್ವರ ಶ್ರೀ