ಮುಂಡರಗಿ: ದಾವಣಗೇರಿಯ ಕೆ.ಬಿ.ಆರ್. ಡ್ರಾಮಾ ಕಂಪನಿ ತಂಡದಿಂದ ಮಾ. 29ರಿಂದ ಮುಂಡರಗಿ ಪಟ್ಟಣದ ಹೆಸರೂರು ರಸ್ತೆಯಲ್ಲಿರುವ ಅನ್ನದಾನೀಶ್ವರ ಮಹಾಸ್ವಾಮೀಜಿಯವರ ಜಾಗೆಯಲ್ಲಿ ನಾಟಕ ಪ್ರದರ್ಶನ ಜರುಗಲಿದೆ ಎಂದು ತಂಡದ ಮಾಲೀಕ ಶ್ರೀಕಂಟೇಶ ಚಿಂದೋಡಿ ಹೇಳಿದರು.
ದಿವಂಗತ ಪಿ.ಬಿ. ದುತ್ತರಗಿ ಅವರು ರಚಿಸಿರುವ ಚಿಂದೋಡಿ ವಿಜಯಕುಮಾರ ನಿರ್ದೇಶನ ಮಾಡಿರುವ ಅಕ್ಕ ಪಾಪರ್ ತಂಗಿ ಸೂಪರ್ ಹಾಸ್ಯ ಭರಿತ ಕೌಟುಂಬಿಕ ನಾಟಕ ಮಾ. 29ರಿಂದ ಪ್ರಾರಂಭಗೊಳ್ಳಲಿದೆ. ಜ. ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಪ್ರತಿದಿನ ಸಂಜೆ 6 ಹಾಗೂ ರಾತ್ರಿ 9ಕ್ಕೆ ಎರಡು ಪ್ರದರ್ಶನಗಳು ಜರುಗಲಿವೆ.
ಚಿಂದೋಡಿ ವಿಜಯಕುಮಾರ, ರಾಘವೇಂದ್ರ, ಅಂಜನಪ್ಪ, ರಾಜಮಹ್ಮದ್, ಸಿ.ವಿ. ದೀಪಾ, ನಂದಿನಿ, ಕವಿತಾ ರೈ, ಮಂಜುಳಾ, ಸಿ.ವಿ. ಹೇಮಾ, ವೀರೇಶ, ಶ್ರೀಕಂಟೇಶ ಸೇರಿದಂತೆ ಅನೇಕರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಮುಂಡರಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಟಕ ವೀಕ್ಷಿಸುವ ಮೂಲಕ ವೃತ್ತಿ ರಂಗಭೂಮಿಯನ್ನು, ವೃತ್ತಿ ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ವಿನಂತಿಸಿದರು. ಸುದ್ದಿಗೋಷ್ಠಿಯಲ್ಲಿ ಹವ್ಯಾಸಿ ರಂಗಭೂಮಿ ಕಲಾವಿದ ವೈ.ಎನ್. ಗೌಡರ್, ಮಂಜುನಾಥ ಇಟಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.