ಸಮ್ಮೇಳನಾಧ್ಯಕ್ಷರಿಗೆ ಪೂರ್ಣ ಕುಂಭ ಸ್ವಾಗತ

KannadaprabhaNewsNetwork |  
Published : Apr 11, 2026, 01:30 AM IST
10ಕೆಕೆಡಿಯು2ಎ. | Kannada Prabha

ಸಾರಾಂಶ

ಕಡೂರು: ಮೂರು ದಿನಗಳ ಕಾಲ ಕಡೂರಿನಲ್ಲಿ ನಡೆಯುವ 21ನೇ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಜಯಮ್ಮ ಅವರಿಗೆ ಶುಕ್ರವಾರ ಸಂಜೆ ಪಟ್ಟಣದ ಶ್ರೀಚಂದ್ರಮೌಳೇಶ್ವರ ದೇವಾಲಯದಲ್ಲಿ ಪೂರ್ಣ ಕುಂಭ ಸ್ವಾಗತ ಕೋರಲಾಯಿತು.

ಕಡೂರು: ಮೂರು ದಿನಗಳ ಕಾಲ ಕಡೂರಿನಲ್ಲಿ ನಡೆಯುವ 21ನೇ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಜಯಮ್ಮ ಅವರಿಗೆ ಶುಕ್ರವಾರ ಸಂಜೆ ಪಟ್ಟಣದ ಶ್ರೀಚಂದ್ರಮೌಳೇಶ್ವರ ದೇವಾಲಯದಲ್ಲಿ ಪೂರ್ಣ ಕುಂಭ ಸ್ವಾಗತ ಕೋರಲಾಯಿತು.

ಪೂರ್ಣ ಕುಂಭಗಳನ್ನು ಹೊತಿದ್ದ ಮಹಿಳೆಯರ ಒಡಗೂಡಿ ಶಾಸಕ ಕೆ.ಎಸ್.ಆನಂದ್, ಸ್ವಾಗತ ಸಮಿತಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹಾಗು ಸಮಿತಿಯ ಪದಾಧಿಕಾರಿಗಳು ಅವರನ್ನು ಸ್ವಾಗತಿಸಿದರು.

ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಸಾರೋಟಿನಲ್ಲಿ ಜಯಮ್ಮ ಅವರನ್ನುಕೂರಿಸಿ ಕನ್ನಡಾಭಿಮಾನಿಗಳು, ಚಿಂತಕರು, ಸಾರ್ವಜನಿಕರು, ವಿವಿಧ ಕಲಾ ತಂಡಗಳು, ವೀರಗಾಸೆ, ಕನ್ನಡದ ಘೋಷಣೆಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿದರು.

ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಪುರಸಭೆ ಮಾಜಿ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು, ರಾಜಕೀಯ ಮುಖಂಡರು, ಸಾರ್ವಜನಿಕರು ದೇವಾಲಯದಿಂದ ಹೊರಟ ಮೆರವಣಿಗೆ ಶಿವಮೊಗ್ಗ ಬೆಂಗಳೂರು ರಾ.ಹೆ.ಮೂಲಕ ಕೆ. ಎಲ್. ವಿ. ವೃತ್ತ, ಮರವಂಜಿ ವೃತ್ತ, ಬಸವೇಶ್ವರ ವೃತ್ತದವರೆಗೆ ತಲುಪಿ ಅಲ್ಲಿಂದ ಸಮ್ಮೇಳನ ನಡೆವ ಸರಕಾರಿ ಪದವಿ ಪೂರ್ವ ಕಾಲೇಜಿನವರೆಗೆ ತೆರಳಿ ಸಂಪನ್ನಗೊಂಡಿತು.

ಇದೇ ಸಂದರ್ಭದಲ್ಲಿ ಕಸಾಪ ತಾಲೂಕು ಅಧ್ಯಕ್ಷ ಚಿಕ್ಕನಲ್ಲೂರು ಪರಮೇಶ್, ಆರೋಗ್ಯ ಇಲಾಖೆ ಅಧಿಕಾರಿ ಶ್ರೀನಿವಾಸ್, ಪಿ.ಎ. ರಾಜಪ್ಪ, ಆರ್.ಜಿ.ಕೃಷ್ಣಸ್ವಾಮಿ,ಮನುಮರುಗುದ್ದಿ ವಿವಿಧ ಸಮಿತಿಗಳ ಮುಖಂಡರು, ಮಹಿಳೆಯರು, ಅಭಿಮಾನಿಗಳು ಇದ್ದರು.

ಪೋಟೋ 10 ಕೆಕೆಡಿಯು2.

21ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಎಂ.ಜಯಮ್ಮನವರನ್ನು ಸಾರೋಟಿನಲ್ಲಿ ಕರೆ ತರಲಾಯಿತು. ಜೊತೆಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ , ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಇದ್ದರು.

10ಕೆಕೆಡಿಯು2ಎ.21ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಶ್ರೀಮತಿ ಎಂ.ಜಯಮ್ಮನವರನ್ನು ಪೂರ್ಣ ಕುಂಭಗಳೊಂದಿಗೆ ಕರೆತರಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಚ್ಚಮ್ಮ ದೇವಿಯ ವೈಭವದ ಮಹಾರಥೋತ್ಸವ
ಪೋಲಿಯೋ ನಿರ್ಮೂಲನೆಯಲ್ಲಿ ರೋಟರಿ ಪಾತ್ರ ಮಹತ್ವದ್ದು