ದೇವರ ದಾಸಿಮಯ್ಯ ಕುರಿತು ಮೂಲಭೂತ ಸಂಶೋಧನೆ ಅಗತ್ಯ: ಡಾ. ಡಿ.ವಿ. ಪರಮಶಿವಮೂರ್ತಿ

KannadaprabhaNewsNetwork |  
Published : Apr 09, 2026, 02:45 AM IST
ಫೋಟೋವಿವರ- (7ಎಚ್‌ಪಿಟಿ4) ಹಂಪಿ ಕನ್ನಡ ವಿಶ್ವವಿದ್ಯಾಲಯದ ಪಂಪ ಸಭಾಂಗಣದಲ್ಲಿ ದಾಸಿಮಯ್ಯ ವಚನಗಳಲ್ಲಿ ವಸ್ತು ಮತ್ತು ಆಶಯ ಎಂಬ ವಿಷಯ ಕುರಿತು ಹೊಸಪೇಟೆಯ ನಿವೃತ್ತ ಪ್ರಾಧ್ಯಾಪಕ ಡಾ. ಮೃತ್ಯುಂಜಯ ರುಮಾಲೆ ಮಾತನಾಡಿದರು | Kannada Prabha

ಸಾರಾಂಶ

ದೇವರ ದಾಸಿಮಯ್ಯ ಕುರಿತು ಮೂಲಭೂತ ಸಂಶೋಧನೆ ಅಗತ್ಯವಿದೆ. ಜೀವನದ ಮೇಲೆ ಪ್ರೀತಿ ಹೊಂದಿದವರೇ ವಚನಕಾರರು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಹೇಳಿದರು.

ಹೊಸಪೇಟೆ: ಸಂಪತ್ತನ್ನು ನಿರಾಕರಿಸಿ, ಒಳ್ಳೆಯ ಮಾತುಗಳು ಮತ್ತು ವಿಚಾರಗಳು ಬೇಕು ಎಂದು ಹೇಳುವ ಮೂಲಕ ಆ ಕಾಲದ ವ್ಯವಸ್ಥೆಯನ್ನು ಸೂಕ್ಷ್ಮವಾಗಿ ತಿಳಿಸುತ್ತಾರೆ. ಬಟ್ಟೆ ನೇಯ್ದು ಜೀವನ ನಡೆಸುತ್ತಿದ್ದ ವ್ಯಕ್ತಿ, ನನಗೆ ಸಂಪತ್ತು ಬೇಡ ಎಂದ ಮಹಾಶರಣ. ವಚನಕಾರನಾಗಿ, ತತ್ವಜ್ಞಾನಿಯಾಗಿ, ಚಿಂತಕನಾಗಿ ಕಾಣುತ್ತಾರೆ ಎಂದು ಹೊಸಪೇಟೆಯ ನಿವೃತ್ತ ಪ್ರಾಧ್ಯಾಪಕ ಡಾ. ಮೃತ್ಯುಂಜಯ ರುಮಾಲೆ ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಪಂಪ ಸಭಾಂಗಣದಲ್ಲಿ ಮಂಗಳವಾರ ದೇವರದಾಸಿಮಯ್ಯ ಅಧ್ಯಯನ ಪೀಠದಿಂದ ಆಯೋಜಿಸಲಾಗಿದ್ದ ದಾಸಿಮಯ್ಯ ವಚನಗಳಲ್ಲಿ ವಸ್ತು ಮತ್ತು ಆಶಯ ಎಂಬ ವಿಷಯ ಕುರಿತು ಉಪನ್ಯಾಸದಲ್ಲಿ ಮಾತನಾಡಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅವರು ಸಮಾರಂಭದ ಅಧ್ಯಕ್ಷೆವಹಿಸಿ ಮಾತನಾಡಿ, ದೇವರ ದಾಸಿಮಯ್ಯ ಕುರಿತು ಮೂಲಭೂತ ಸಂಶೋಧನೆ ಅಗತ್ಯವಿದೆ. ಜೀವನದ ಮೇಲೆ ಪ್ರೀತಿ ಹೊಂದಿದವರೇ ವಚನಕಾರರು ಎಂದು ಹೇಳುತ್ತ ದಾಸಿಮಯ್ಯನವರ ವಚನಗಳಲ್ಲಿ ಕಾಣುವ ಸಂಸಾರಿಕ ಅಂಶಗಳನ್ನು ಅವರು ವಿವರಿಸಿದರು.

ದೊಡ್ಡ ವಚನಕಾರರಿಗೆ ಅನೇಕ ಅರಸರ, ಅಧಿಕಾರಿಗಳ ಬೆಂಬಲವಿದ್ದು, ಅಂಥವರ ನಡುವೆ ದಾಸಿಮಯ್ಯನವರ ವಚನಗಳನ್ನು ಇಂದಿಗೂ ನಾವು ನೆನಪಿಸಿಕೊಳ್ಳುತ್ತಿರುವುದು, ಅವರ ವಚನಗಳಲ್ಲಿನ ಸತ್ವದ ಮಹತ್ವವನ್ನು ತೋರಿಸುತ್ತದೆ. ಬಟ್ಟೆಯ ಮೂಲಕ ಮಾನವನನ್ನು ನಾಗರಿಕ ಜೀವನದತ್ತ ಕರೆತರುವಲ್ಲಿ ಈ ಸಮುದಾಯದ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.

ದೇವರ ದಾಸಿಮಯ್ಯ ಅಧ್ಯಯನ ಪೀಠದ ಸಂಚಾಲಕ ಡಾ. ಗೋವಿಂದ ಹಾಗೂ ವಿವಿಧ ವಿಭಾಗಗಳ ಡೀನರು, ಮುಖ್ಯಸ್ಥರು, ಪ್ರಾಧ್ಯಾಪಕರು, ಆಡಳಿತ ಅಧಿಕಾರಿಗಳು, ಸಿಬ್ಬಂದಿ, ಸಂಶೋಧನಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಡಾ. ಗೋವಿಂದ ಸ್ವಾಗತಿಸಿದರು. ಟಿ. ಅಕ್ಷತಾ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್
ರಚನಾತ್ಮಕ ಸಮಾಜ ಕಟ್ಟಲು ಜನಪದ ಪಾತ್ರ ಹಿರಿದು: ಡಾ. ಸಿದ್ದರಾಮ ಸ್ವಾಮೀಜಿ