ಶಿಕ್ಷಣ ಕ್ಷೇತ್ರಕ್ಕೆ ಎಲ್ಲ ರೀತಿ ಸೌಲಭ್ಯಕ್ಕೆ ಅನುದಾನ: ಶಾಸಕ ಶಿವಗಂಗಾ

KannadaprabhaNewsNetwork |  
Published : Nov 19, 2025, 01:00 AM IST
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ 2026-27ನೇ ಸಾಲಿನ ವಾರ್ಷಿಕ ಕರಡು ಅಭಿವೃದ್ದಿ ಯೋಜನಾ ಸಭೆಯು ಶಾಸಕ ಬಸವರಾಜು ವಿ.ಶಿವಗಂಗಾ ಇವರ ಅಧ್ಯಕ್ಷತೆಯಲ್ಲಿ ಸೋಮವಾರ ಸಂಜೆ ನಡೆಯಿತು | Kannada Prabha

ಸಾರಾಂಶ

ಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವುದು ನನ್ನ ಉದ್ದೇಶವಾಗಿದ್ದು ಶಿಕ್ಷಣದಿಂದ ಯಾರು ವಂಚಿತರಾಗಬಾರದು. ಶೈಕ್ಷಣಿಕ ಕ್ಷೇತ್ರಕ್ಕೆ ಬೇಕಾದ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ಕೊಡಿಸಲು ಅನುದಾನ ನೀಡಲಾಗುವುದು ಎಂದು ಶಾಸಕ ಬಸವರಾಜು ವಿ.ಶಿವಗಂಗಾ ಹೇಳಿದರು.

ಕನ್ನಡಪ್ರಭ ವಾರ್ತೆ ಚನ್ನಗಿರಿ

ಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವುದು ನನ್ನ ಉದ್ದೇಶವಾಗಿದ್ದು ಶಿಕ್ಷಣದಿಂದ ಯಾರು ವಂಚಿತರಾಗಬಾರದು. ಶೈಕ್ಷಣಿಕ ಕ್ಷೇತ್ರಕ್ಕೆ ಬೇಕಾದ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ಕೊಡಿಸಲು ಅನುದಾನ ನೀಡಲಾಗುವುದು ಎಂದು ಶಾಸಕ ಬಸವರಾಜು ವಿ.ಶಿವಗಂಗಾ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಸಂಜೆ ನಡೆದ 2026-27ನೇ ಸಾಲಿನ ವಾರ್ಷಿಕ ಕರಡು ಅಭಿವೃದ್ದಿ ಯೋಜನಾ ಸಭೆಯಲ್ಲಿ 2026-27ನೇ ಸಾಲಿಗೆ ಇಲಾಖೆಯ ವತಿಯಿಂದ 78 ವಿವಿಧ ಕಾಮಗಾರಿಗಳಿಗೆ ಬೇಡಿಕೆ ಇಟ್ಟಿದ್ದು ಈ ಕಾಮಗಾರಿಗಳಿಗೆ 1.56 ಕೋಟಿ ರು. ಅನುದಾನದ ನಿರೀಕ್ಷೆ ಇದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಜಯಪ್ಪ ಎಂದು ಕೇಳಿದಾಗ ಶಾಸಕ ಪ್ರತಿಕ್ರಿಯಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಶಿವಕುಮಾರ್ ಮಾಹಿತಿ ನೀಡುತ್ತ, ತಾಲೂಕಿನಲ್ಲಿರುವ ಎಲ್ಲಾ ಆರೋಗ್ಯ ಕೇಂದ್ರಗಳ ಮೇಲ್ಬಾಗದಲ್ಲಿ ಮೇಲ್ಚಾವಣಿಯನ್ನು ಹಾಕಿಸಲು 38 ಲಕ್ಷ ರು. ಅನುದಾನ ಬೇಡಿಕೆ ಇದೆ ಎಂದು ತಿಳಿಸಿದಾಗ ಶಾಸಕ ಶಿವಗಂಗಾ, ಆರೋಗ್ಯ ಇಲಾಖೆಗೆ 38 ಲಕ್ಷ ರು.ಅನುದಾನ ಸಾಕೇ ಎಂದು ಪ್ರಶ್ನಿಸುತ್ತ ತಾಲೂಕಿನಲ್ಲಿರುವ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಬೇಕಾದ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳು ಇದೆಯೇ ಎಂದು ಕೇಳಿದರು. ಆಗ ತಾಪಂ ಕಾರ್ಯನಿರ್ವಾಣಾಧಿಕಾರಿ ಪ್ರಕಾಶ್ ಮಧ್ಯಪ್ರವೇಶಿಸಿ, ನಾವು ಈಗಾಗಲೇ ಆಯಾ ಗ್ರಾಮ ಪಂಚಾಯಿತಿಗಳ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದು ಎಲ್ಲಾ ಪಿಎಚ್‌ಸಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಫಿಸಲು 8.14 ಕೋಟಿ ರು. ಅನುದಾನದ ಬೇಡಿಕೆ ಇದೆ ಎಂದು ತಿಳಿಸಿದರು.

ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿ ನಿರ್ಮಲಾ ಮಾಹಿತಿ ನೀಡುತ್ತ ತಾಲೂಕಿನಲ್ಲಿ 46 ಅಂಗನವಾಡಿ ಕಟ್ಟಡಗಳಿಗೆ ಬೇಡಿಕೆ ಇದ್ದು ಈ ಕಟ್ಟಡಗಳ ನಿರ್ಮಾಣಕ್ಕೆ 9.20 ಕೋಟಿ ರು. ಅನುದಾನದ ಬೇಡಿಕೆ ಇದೆ ಎಂದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಅರುಣ್ ಕುಮಾರ್, ತಾಲೂಕಿನಲ್ಲಿ ಜಿಪ್ಸಮ್ ಮತ್ತು ಹಸಿರೆಲೆ ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಇದ್ದು ತಾಲೂಕಿನಲ್ಲಿರುವ 6 ರೈತ ಸಂಪರ್ಕ ಕೇಂದ್ರಗಳ ದುರಸ್ಥಿಗೆ 2.14 ಕೋಟಿ ರು. ಅನುದಾನದ ಬೇಡಿಕೆ ಇರುವ ಬಗ್ಗೆ ವರದಿ ತಯಾರಿಸಲಾಗಿದೆ ಎಂದರು.

ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಕಾಂತ್ ಮಾಹಿತಿ ನೀಡಿ, ತಾಲೂಕಿನಲ್ಲಿ ಕೃಷಿ ಹೊಂಡ ಮತ್ತು ಕೃಷಿ ಯಂತ್ರೋಪಕರಣಗಳಿಗೆ ಬೇಡಿಕೆ ಇದ್ದು ಇವುಗಳಿಗೆ 3.50 ಕೋಟಿ ರು. ಅನುದಾನದ ಬೇಡಿಕೆ ಇದೆ ಎಂದು ತಿಳಿಸಿದರು.

ಮೀನುಗಾರಿಕೆ, ಪಂಚಾಯತ್ ರಾಜ್ ಎಂಜನಿಯರಿಂಗ್ ಇಲಾಖೆ, ಲೋಕೋಪಯೋಗಿ, ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸಮಾಜ ಕಲ್ಯಾಣ, ಪರಿಶಿಷ್ಠವರ್ಗಗಳ ಕಲ್ಯಾಣ ಇಲಾಖೆ, ಹಿಂದುಳಿದವರ್ಗಗಳ ಇಲಾಖೆ, ಸಹಕಾರ ಇಲಾಖೆ, ಪುರಸಭೆಯ ಅಧಿಕಾರಿಗಳು ಹಾಜರಿದ್ದು ತಮ್ಮ-ತಮ್ಮ ಇಲಾಖೆಗೆ ಬೇಕಾದ ಅನುದಾನದ ಮಾಹಿತಿಯನ್ನು ವಿವರಿಸಿದರು.

ತಾಪಂ ಕಾರ್ಯನಿರ್ವಾಣಾಧಿಕಾರಿ ಎಂ.ಆರ್.ಪ್ರಕಾಶ್, ಜಿಲ್ಲಾ ಯೋಜನಾ ನಿರ್ದೇಶಕಿ ರೇಷ್ಮಾ ಹಾಜರಿದ್ದರು.

PREV

Recommended Stories

20 ವರ್ಷದಲ್ಲಿ ಆಗದ ರಸ್ತೆ 20 ದಿನದಲ್ಲೇ ಆಯಿತು
ಕೆಆರೆಸ್‌ ನೀರು ನಿಲ್ಸಿ ಬ್ಲಫ್‌ನಲ್ಲಿ ಬಿದ್ದಿದ್ದ ಆನೆ ರಕ್ಷಣೆ