ಸಾರಿಗೆ ಇಲಾಖೆ ಕಚೇರಿ ಮೂಲ ಸೌಕರ್ಯಗಳಿಗೆ ಅನುದಾನ

KannadaprabhaNewsNetwork |  
Published : Sep 11, 2026, 04:15 AM IST
7ಕೆಆರ್ ಎಂಎನ್ 4.ಜೆಪಿಜಿರಾಮನಗರದ ಸಾರಿಗೆ ಇಲಾಖೆ ಕಚೇರಿ ಆವರಣದಲ್ಲಿ  ಪಾರ್ಕ್, ಕಾಂಪೌಂಡ್ ಮತ್ತಿತರ ಮೂಲಸೌಕರ್ಯ ಅಭಿವೃದ್ಧಿಗೆ ಶಾಸಕ ಇಕ್ಬಾಲ್ ಹುಸೇನ್  ಭೂಮಿಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ರಾಮನಗರ: ಜಿಲ್ಲಾ ಕೇಂದ್ರದಲ್ಲಿರುವ ಸಾರಿಗೆ ಇಲಾಖೆ ಕಚೇರಿ ಆವರಣದಲ್ಲಿ ಮೂಲ ಸೌಕರ್ಯ ಒದಗಿಸಲು ರಾಜ್ಯ ಸರ್ಕಾರ 2.5 ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು

ರಾಮನಗರ: ಜಿಲ್ಲಾ ಕೇಂದ್ರದಲ್ಲಿರುವ ಸಾರಿಗೆ ಇಲಾಖೆ ಕಚೇರಿ ಆವರಣದಲ್ಲಿ ಮೂಲ ಸೌಕರ್ಯ ಒದಗಿಸಲು ರಾಜ್ಯ ಸರ್ಕಾರ 2.5 ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.

ನಗರದ ಸಾರಿಗೆ ಇಲಾಖೆ ಕಚೇರಿ ಆವರಣದಲ್ಲಿ ಪಾರ್ಕ್, ಕಾಂಪೌಂಡ್ ಮತ್ತಿತರ ಮೂಲಸೌಕರ್ಯ ಅಭಿವೃದ್ಧಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಈಗಾಗಲೇ 2 ಕೋಟಿ ರುಪಾಯಿ ಬಿಡುಗಡೆಯಾಗಿದ್ದು, ಅದರಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಉಳಿದಂತೆ ಪಾರ್ಕ್, ಕಾಂಪೌಂಡ್, ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ, ಜನರಿಗೆ ಕುಳಿತುಕೊಳ್ಳಲು ಅನುಕೂಲವಾಗುವಂತೆ ನೆರಳಿನಲ್ಲಿ ಆಸನ ವ್ಯವಸ್ಥೆ ಮಾಡಲಾಗುವುದು ಎಂದರು.

ಸಾರಿಗೆ ಇಲಾಖೆ ಜಿಲ್ಲಾ ಕೇಂದ್ರದಲ್ಲಿದ್ದು ಅನೇಕ ಕೆಲಸಗಳಿಗಾಗಿ ಸಾರ್ವಜನಿಕರ ಬಂದು ಹೋಗುತ್ತಾರೆ. ಇಂತಹ ಸ್ಥಳದಲ್ಲಿ ಹಲವು ಮೂಲ ಸೌಕರ್ಯಗಳನ್ನು ಒದಗಿಸಲು ಕ್ರಮ ವಹಿಸಲಾಗಿದೆ. ಸಾರಿಗೆ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಇಲ್ಲದೆ, ಸರ್ಕಾರಿ ಸೌಲಭ್ಯಗಳು ಹಾಗೂ ಕಾರ್ಯಕ್ರಮಗಳು ಜನರಿಗೆ ನೇರವಾಗಿ ತಲುಪುವಂತೆ ಕ್ರಮ ವಹಿಸಬೇಕು ಎಂದು ಹೇಳಿದರು.

ನಾವು ಕೆಲವು ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಇದುವರೆಗೂ ಆಗಿರಲಿಲ್ಲ. ಮೊದಲು ನಾವೆಲ್ಲರೂ ಕೂಡ ರಸ್ತೆ ಅಗಲೀಕರಣ ಮಾಡಿ ಫುಟ್‌ ಪಾತಲ್ಲಿ ಇರುವಂತಹ ವ್ಯವಸ್ಥೆಯನ್ನು ನಾವೆಲ್ಲರೂ ಕೂಡ ಶುದ್ಧೀಕರಣ ಮಾಡದೆ ನಾವು ಅಧಿಕಾರಿಗಳ ಮೇಲೆ ಒತ್ತಡ ಹೇರಿ ಯಾವ ಪ್ರಯೋಜನವೂ ಇಲ್ಲ ಎಂದರು.

ಕೆಂಪೇಗೌಡ ಸರ್ಕಲ್‌ನಿಂದ ಐಜೂರು ಸರ್ಕಲ್‌ವರೆಗೂ ಫುಟ್‌ಪಾತ್ ಮಾಡಲಾಗುತ್ತಿದೆ. ರೈಲ್ವೆ ವೃತ್ತ ರಸ್ತೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಕನಕಪುರ ಸರ್ಕಲ್, ಕೆಂಪೇಗೌಡ ಸರ್ಕಲ್‌ ನ್ನು ಅಭಿವೃದ್ಧಿ ಪಡಿಸಿ ಸುಂದರೀಕರಣ ಮಾಡಲು ಉದ್ದೇಶಿಸಲಾಗಿದೆ. ಐಜೂರು ಸರ್ಕಲ್‌ ಅನ್ನು ಅಗಲೀಕರಣ ಮಾಡಬೇಕಾಗಿದೆ. ಅಲ್ಲಿ ಸಿಗ್ನಲ್ ಮುಂದಕ್ಕಿದ್ದರೆ, ರಸ್ತೆ ಹಿಂದಕ್ಕೆ ಇದೆ. ರಸ್ತೆ ಅಗಲೀಕರಣ ಮಾಡಿ ವೃತ್ತದಲ್ಲಿ ಅಶೋಕ ಸ್ತಂಭವನ್ನು ಸ್ಥಾಪನೆ ಮಾಡಿ ವೃತ್ತವನ್ನು ಸುಂದರೀಕರಣಗೊಳಿಸಲಾಗುವುದು. ಈ ಎಲ್ಲ ವೃತ್ತಗಳ ಸುಂದರೀಕರಣಕ್ಕೆ ಸುಮಾರು 10 ಕೋಟಿ ರುಪಾಯಿ ಅನುದಾನ ಇದೆ ಎಂದು ಹೇಳಿದರು.

ಸಾರಿಗೆ ಬಸ್ ನಿಲ್ದಾಣದ ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲ ಪಾರ್ಕಿಂಗ್ ಟೆಂಡರ್ ಯಾವಾಗ ನಡೆಸುತ್ತೀರಿ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಇಕ್ಬಾಲ್ ಹುಸೇನ್ , ಹೈಟೆಕ್ ಬಸ್ ನಿಲ್ದಾಣ ಮಾಡಲು ಈಗಾಗಲೇ ರೂಪುರೇಷೆ ಸಿದ್ದಪಡಿಸಲಾಗುತ್ತಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕೂಡ ಯೋಜನೆ ರೂಪು ರೇಷೆ ಸಿದ್ದಪಡಿಸಲು ತಿಳಿಸಿದ್ದಾರೆ. ಬಸ್ ನಿಲ್ದಾಣ ನಿರ್ಮಾಣದವರೆವಿಗೂ ವಾಹನಗಳು ಬೇರೆ ಸ್ಥಳದಲ್ಲಿ ನಿಲ್ಲಿಸಬೇಕು. ಸದ್ಯಕ್ಕೆ ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ಅವಕಾಶವಿಲ್ಲ ಎಂದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯಕ್ಷ ಕೆ.ರಾಜು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ. ಚೇತನ್‌ಕುಮಾರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಸಿ.ಎಂ. ಕೃಷ್ಣೇಗೌಡ, ಮೋಟಾರು ವಾಹನ ನಿರೀಕ್ಷಕರಾದ ಕುಮಾರಸ್ವಾಮಿ, ರಘುನಂದನ್, ವಿದ್ಯಾ, ಅಧೀಕ್ಷಕರಾದ ಯಮರಾಜಪವರ್, ಸಂತೋಷ್ , ನಗರಸಭೆ ಸದಸ್ಯರಾದ ಬೈರೇಗೌಡ, ಅಜ್ಮತ್ ಉಲ್ಲಾ ಖಾನ್, ನಿಜಾಮುದ್ದೀನ್ , ಅಣ್ಣು, ಆಯಿಷಾ ಬಾನು, ಜಯಲಕ್ಷ್ಮಮ್ಮ, ಮುಖಂಡರಾದ ಗುರುಪ್ರಸಾದ್, ಅತಾವುಲ್ಲಾ, ರಾಮಣ್ಣ, ಧನರಾಜ್, ರಮೇಶ್, ಗುರುವೇಗೌಡ, ವಾಸು ಮತ್ತಿತರರು ಹಾಜರಿದ್ದರು.

7ಕೆಆರ್ ಎಂಎನ್ 4.ಜೆಪಿಜಿ

ರಾಮನಗರದ ಸಾರಿಗೆ ಇಲಾಖೆ ಕಚೇರಿ ಆವರಣದಲ್ಲಿ ಪಾರ್ಕ್, ಕಾಂಪೌಂಡ್ ಮತ್ತಿತರ ಮೂಲಸೌಕರ್ಯ ಅಭಿವೃದ್ಧಿಗೆ ಶಾಸಕ ಇಕ್ಬಾಲ್ ಹುಸೇನ್ ಭೂಮಿಪೂಜೆ ನೆರವೇರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಹುತ್ವದ ಅನನ್ಯತೆ ಅರಿಯಲು ಪುಸ್ತಕಗಳು ಸಹಕಾರಿ
ಎಂಬಿಬಿಎಸ್‌ ಸೀಟ್‌ ಹೆಸರಲ್ಲಿ ₹ 1.4 ಕೋಟಿ ವಂಚನೆ: ಕೇಸ್‌ ರದ್ದತಿಗೆ ನಕಾರ