ಆಗರ ಬನ್ನಿಹಟ್ಟಿ ಸರ್ಕಾರಿ ಉರ್ದು ಶಾಲೆಗೆ ಪೀಠೋಪಕರಣ ಕೊಡುಗೆ

KannadaprabhaNewsNetwork |  
Published : Jul 05, 2025, 12:18 AM IST
ತಾಲೂಕಿನ ಆಗರಬನ್ನಿಹಟ್ಟಿ ಗ್ರಾಮದ ಸರ್ಕಾರಿ ಉರ್ದುಶಾಲೆಗೆ ನಲಿ-ಕಲಿ ತರಗತಿಗೆ ಪೀಠೋಪಕರಣಗಳ ಕೊಡುಗೆ ನೀಡುತ್ತೀರುವುದು) | Kannada Prabha

ಸಾರಾಂಶ

ತಾಲೂಕಿನ ಆಗರಬನ್ನಿಹಟ್ಟಿ ಗ್ರಾಮದ ರುವ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ 1ನೇ ತರಗತಿಯ ಮಕ್ಕಳಿಗಾಗಿ ನಲಿ-ಕಲಿ ಕೊಠಡಿಗೆ ಬೇಕಾದಂತಹ ಟೇಬಲ್‌ಗಳು ಮತ್ತು ಚೇರುಗಳ ಖರೀದಿಗೆ ಆರ್ಥಿಕ ನೆರವು ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಚನ್ನಗಿರಿ

ತಾಲೂಕಿನ ಆಗರಬನ್ನಿಹಟ್ಟಿ ಗ್ರಾಮದ ರುವ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ 1ನೇ ತರಗತಿಯ ಮಕ್ಕಳಿಗಾಗಿ ನಲಿ-ಕಲಿ ಕೊಠಡಿಗೆ ಬೇಕಾದಂತಹ ಟೇಬಲ್‌ಗಳು ಮತ್ತು ಚೇರುಗಳ ಖರೀದಿಗೆ ಆರ್ಥಿಕ ನೆರವು ನೀಡಿದರು.

ಎಸ್.ಡಿ.ಎಂ.ಸಿ. ಅಧ್ಯಕ್ಷ ಮಹಬೂಬ್ ಖಾನ್ ₹5 ಸಾವಿರ, ಸದಸ್ಯರಾದ ಮುಹಿಬ್ ಉಲ್ಲಾ ₹5 ಸಾವಿರ, ಸಮೀಉಲ್ಲಾ ₹5 ಸಾವಿರ, ಮಾಜಿ ಅಧ್ಯಕ್ಷ ನಜೀಬ್ ಉಲ್ಲಾ ₹2 ಸಾವಿರ, ಮಹಮದ್ ಹಫೀಜ್ ₹2 ಸಾವಿರ ನೀಡಿದರು. ಈ ಹಣದಲ್ಲಿ ನಲಿ-ಕಲಿ ತರಗತಿಗಳಿಗೆ ಅನುಕೂಲ ಆಗುವಂತಹ ಪೀಠೋಪಕರಗಳ ಖರೀದಿಸುವಂತೆ ತಿಳಿಸಿದರು.

ಈ ಸಂದರ್ಭ ಅಧ್ಯಕ್ಷ ಮಹಬೂಬ್ ಖಾನ್ ಮಾತನಾಡಿ, ಗ್ರಾಮದ ಸರ್ಕಾರಿ ಉರ್ದು ಶಾಲೆ ಒಂದು ಮಾದರಿಯಾದ ಶಾಲೆಯಾಗಿದೆ. ಶಾಲೆ ಮಕ್ಕಳ ಶೈಕ್ಷಣಿಕ ಬೆಳವಣಿಗೆಗಾಗಿ ನಾವೆಲ್ಲರೂ ಸಹಕಾರ ನೀಡುತ್ತೇವೆ ಎಂದು ತಿಳಿಸಿದರು.

ಮಾಜಿ ಅಧ್ಯಕ್ಷ ಶಂಷೀರ್ ಜಾನ್ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿರುವ ಈ ಉರ್ದು ಶಾಲೆಗೆ ಚನ್ನಗಿರಿ ಪಟ್ಟಣದಿಂದ 80 ವಿದ್ಯಾರ್ಥಿಗಳು ದಾಖಲಾಗಿರುವುದು ಗ್ರಾಮಕ್ಕೆ ಸಂದ ಗೌರವವಾಗಿದೆ ಎಂದು ತಿಳಿಸಿದರು.

ಮುಖ್ಯ ಶಿಕ್ಷಕ ಸೈಯ್ಯದ್ ಇಲ್ಯಾಸ್ ಅಹಮದ್ ಮಾತನಾಡಿ, ಈ ಶಾಲೆಗೆ ದಾಖಲಾಗಿರುವ ಮಕ್ಕಳನ್ನು ಪ್ರತಿನಿತ್ಯ ಶಾಲೆಗೆ ಕಳಿಸಿಕೊಡಬೇಕಾದ ಜವಾಬ್ದಾರಿ ಪೋಷಕರದಾಗಿದೆ. ಶಾಲೆಯಿಂದ ಮಕ್ಕಳು ಮನೆಗೆ ಬಂದ ತಕ್ಷಣ ಹೋಂ ವರ್ಕ್‌ ಮಾಡಿಕೊಳ್ಳಲು, ಓದಿಕೊಳ್ಳಲು ಹೇಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಎಲ್ಲ ಶಿಕ್ಷಕರು, ಮಕ್ಕಳು ಹಾಜರಿದ್ದರು.

- - -

-4ಕೆಸಿಎನ್‌ಜಿ1.ಜೆಪಿಜಿ:

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ