ಕನ್ನಡಪ್ರಭ ವಾರ್ತೆ ಔರಾದ್
ಪಟ್ಟಣದ ಬಸವ ಮಂಟಪದಲ್ಲಿ ದಿ. ಭೀಮಗೊಂಡ್ ಅಮರವಾಡಿ ಅವರ ಪ್ರಥಮ ವರ್ಷದ ಸ್ಮರಣಾರ್ಥ ಸಂಭ್ರಮ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯಿಂದ ಆಯೋಜಿಸಿದ್ದ ಅಮರವಾಡಿ ಸಂಸ್ಕೃತಿ ಚಿಂತನೆ ಅಮರವಾಡಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಅಂದಿನ ಅಮರವಾಡಿಯೇ ಕ್ರಮೇಣ ಬದಲಾಗುತ್ತ ಇಂದು ಔರಾದ್ ಆಗಿದೆ. ಔರಾದ್ ಪಟ್ಟಣ ಅಂದು ಪ್ರಖ್ಯಾತ ನಗರವಾಗಿರುವ ಕುರಿತು, ಅಮರೇಶ್ವರ ಸಂತನೆಂಬ ವಿಚಾರ ಸೇರಿ ಅನೇಕ ರೋಚಕ ವಿಷಯಗಳು ನಮಗೆ ದೊರೆತ ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ. ವಿಖ್ಯಾತನಗರವರವಾಡಿ ಎಂಬ ಪದವು ಕೂಡ ಇದನ್ನು ಪುಷ್ಟಿಕರಿಸುತ್ತದೆ.ಮಾಂಜರಾ ನದಿ ಈಚೆಗೆ ಮಾತ್ರ ಔರಾದ್‌ನ ಕುರುಹುಗಳು ಪತ್ತೆಯಾಗಿದ್ದರೂ ಮಹಾರಾಷ್ಟ್ರದ ದೇಗಲೂರ್, ನಾಂದೇಡ್, ಔರಾಂಗಬಾದವರೆಗೂ ಇದರ ಹಲವು ಸಾಕ್ಷ್ಯಗಳು ದೊರೆಯುತ್ತವೆ ಎಂಬುದು ಅಭಿಮಾನದ ವಿಷಯವಾಗಿದೆ ಎಂದರು.
ಶಿಕ್ಷಕ ಸಂಘದ ಜಿಲ್ಲಾ ಉಪಾಧ್ಯಕ್ಷ ಪಂಡರಿ ಆಡೆ ಮಾತನಾಡಿ, ಪ್ರಸ್ತುತ ತಂದೆ ತಾಯಿಯರ ಗೌರವಿಸದ ಇಂತಹ ದಿನಮಾನಗಳಲ್ಲಿ ತಂದೆ ಸ್ಮರಣರ್ಥಾ ಜ್ಞಾನ ದಾಸೋಹದ ಜೊತೆ ಅನ್ನ ದಾಸೋಹದ ಕಾರ್ಯ ಮಾಡುತ್ತಿರುವ ಅಮರವಾಡಿ ಕುಟುಟಂಬದ ಕಾರ್ಯ ಮಾದರಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಔರಾದ್ ತಾಲೂಕಿನ ಕೀರ್ತಿ ಹೆಚ್ಚಿಸಿದ ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಗುರುನಾಥಪ್ಪ ಉಂಗುರಶೆಟ್ಟಿ, ಹಿರಿಯ ನಾಟಿವೈದ್ಯ ನಾಗಪ್ಪ ದುಡುಕನಾಳೆ, ಮಕ್ಕಳ ಅಭ್ಯುದಯಕ್ಕೆ ಶ್ರಮಿಸುತ್ತಿರುವ ಸುಂದಾಳ ಗ್ರಾಪಂ ಮೇಲ್ವಿಚಾರಕ ಸಂತೋಷ ಭಾಲ್ಕೆ, ವಚನ ಸಾಹಿತ್ಯ ಪ್ರಸಾರದ ಜೊತೆ ವಚನಗಳೇ ಬದುಕಾಗಿ ಬದಲಿಸಿಕೊಂಡ ವಿದ್ಯಾವತಿ ಎಡವೆ ಹಾಗೂ ಜಾನಪದ ಗಾಯನಗಳು ಜೀವಂತವಾಗಿಟ್ಟು ಯುವಕ ಯುವತಿಯರಿಗೆ ಕಲಿಸುತ್ತಿರುವ ಶ್ರೀದೇವಿ ನರಸಗೊಂಡ್ ಅವರಿಗೆ ಅಮರವಾಡಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆ ಅಧ್ಯಕ್ಷೆ ಅಂಜನಾಬಾಯಿ ಅಮರವಾಡಿ, ಅಮೃತರಾವ ಬಿರಾದಾರ್, ಜಗನ್ನಾಥ ದೇಶಮುಖ, ಜಗನ್ನಾಥ ಮೂಲಗೆ, ಧನರಾಜ ನಿಟ್ಟೂರೆ, ಅಡವೆಪ್ಪ ಪಟ್ನೆ, ಪಿಎಸ್ಐ ರೇಣುಕಾ ಬಾಲಾಜಿ ಭಾಲೇಕರ್, ಮಂಗಲಾ ಗಣಪತಿ ಶಿವಗೊಂಡ್, ಲತಾ ಏಕನಾಥ ಕೋಕನೆ, ಶೋಭಾ ನರಸಪ್ಪ ಬ್ಯಾಲೊಳ್ಳೆ, ಪ್ರಿಯಂಕಾ ಅಮರವಾಡಿ, ಮಹಾನಂದಾ ಎಂಡೆ, ಕವಿತಾ ಸಂಜುಕುಮಾರ್, ಮಂಜುಳಾ ರವಿ ಸೇರಿ ಇನ್ನಿತರರಿದ್ದರು.