ಕನ್ನಡಪ್ರಭ ವಾರ್ತೆ ಮಂಡ್ಯ
ಹಿರಿಯ ಉಪಾಧ್ಯಕ್ಷರಾಗಿ ಕೆ.ಬೋರಯ್ಯ, ಡಾ.ಬಿ.ಶಿವಲಿಂಗಯ್ಯ, ಎಂ.ಬಿ.ಬೋರೇಗೌಡ, ಉಪಾಧ್ಯಕ್ಷರಾಗಿ ಎಸ್.ಕೆಂಪೇಗೌಡ, ಕೆ.ಎನ್.ಗುರುಪ್ರಸಾದ್, ಎಚ್.ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿಯಾಗಿ ಸುನಂದ ಜಯರಾಮು, ಸಂಘಟನಾ ಕಾರ್ಯದರ್ಶಿಯಾಗಿ ಎಚ್.ಸಿ.ಮಂಜುನಾಥ್, ಎಸ್.ನಾರಾಯಣ್, ಟಿ.ಎಸ್.ವೆಂಕಟೇಶ್, ಎಸ್.ಮಂಜೇಶ್‌ಗೌಡ, ಎಸ್.ಕೃಷ್ಣ, ಎಸ್.ಎಂ.ವೇಣುಗೋಪಾಲ್, ಎಂ.ಬಿ.ನಾಗಣ್ಣಗೌಡ, ಎಚ್.ಜಿ.ಪ್ರಭುಲಿಂಗು, ಎಂ.ವಿ.ಕೃಷ್ಣ, ಖಜಾಂಚಿಯಾಗಿ ಮುದ್ದೇಗೌಡ, ಸದಸ್ಯರಾಗಿ ಅಂಬುಜಮ್ಮ, ಎಂ.ಎನ್.ಮಹೇಶ್‌ಕುಮಾರ್, ಸಿ.ಮಂಜುನಾಥ್, ಸಿ.ಟಿ.ಮಂಜುನಾಥ್, ಎಲ್.ಸುರೇಶ್ ನೇಮಕಗೊಂಡಿದ್ದಾರೆ ಎಂದು ಪ್ರವಾಸಿಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಲಾಯಿತು.
ಇವರ ಜೊತೆಗೆ ಖಾಯಂ ಸದಸ್ಯರಾಗಿ ಜಿಲ್ಲೆಯ ಹಾಲಿ ಮತ್ತು ಮಾಜಿ ಸಂಸತ್ ಸದಸ್ಯರು, ವಿಧಾನ ಪರಿಷತ್ ಸದಸ್ಯರು, ಜಿಲ್ಲೆಯ ರಾಜಕೀಯ ಪಕ್ಷಗಳ ಹಾಲಿ ಜಿಲ್ಲಾ ಅಧ್ಯಕ್ಷರು, ಪ್ರಗತಿಪರ ಹೋರಾಟ ಸಂಘಟನೆಗಳ ಅಧ್ಯಕ್ಷರುಗಳು ಇರಲಿದ್ದಾರೆ ಎಂದು ತಿಳಿಸಲಾಗಿದೆ.ಹಿಂದಿನ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಬ್ಯಾಂಕ್ ಖಾತೆಯಲ್ಲಿ ೪,೧೬,೦೦೦ ರು. ಹಣವಿದ್ದು, ೩ ಮಾರ್ಚ್ ೨೦೨೪ರವರೆಗೆ ಹಣಕಾಸು ವ್ಯವಹಾರ ನಡೆಸಲಾಗಿದೆ. ಆ ಹಣವನ್ನು ನೂತನವಾಗಿ ರಚನೆಗೊಂಡಿರುವ ಸಮಿತಿಯ ಖಾತೆಗೆ ವರ್ಗಾಯಿಸಿಕೊಂಡು ಮುಂದುವರೆಸಿಕೊಂಡು ಹೋಗುವುದಾಗಿ ಪ್ರಧಾನ ಕಾರ್ಯದರ್ಶಿ ಸುನಂದಾ ಜಯರಾಂ ತಿಳಿಸಿದರು.
ಮುಂದಿನ ದಿನಗಳಲ್ಲಿ ಸಮಿತಿಯಿಂದ ಬೆಂಗಳೂರಿಗೆ ಆರನೇ ಹಂತದಲ್ಲಿ ನೀಡಲು ರೂಪಿಸಿರುವ ಯೋಜನೆಯನ್ನು ತಕ್ಷಣವೇ ಕೈಬಿಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗುವುದು. ಇದರಿಂದ ಕಾವೇರಿ ಕೊಳ್ಳ ಭಾಗದ ರೈತರಿಗೆ ಮತ್ತು ಕೃಷಿ ಚಟುವಟಿಕೆಗೆ ತುಂಬಲಾಗದ ನಷ್ಟ ಉಂಟಾಗಲಿದೆ. ಈ ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ಜವಾಬ್ದಾರಿ ಹೊತ್ತು ಜಿಲ್ಲೆಯ ಶಾಸಕರನ್ನೊಳಗೊಂಡಂತೆ ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ಈ ನಿರ್ಧಾರವನ್ನು ರದ್ದುಗೊಳಿಸುವಂತೆ ಆಗ್ರಹಿಸುವುದಾಗಿ ತಿಳಿಸಿದರು.
ಮೈಷುಗರ್ ಕಾರ್ಖಾನೆ ಪ್ರಸ್ತುತ ಕಬ್ಬು ನುರಿಸಲಾರಂಭಿಸಿದ್ದು, ಕಂಪನಿಯೊಳಗೆ ಆಡಳಿತ ವೈಖರಿ, ಅಧಿಕಾರಿಗಳ ಬೇಜವಾಬ್ದಾರಿ ಕುರಿತು ಶಾಸಕರು, ಸಚಿವರು, ಜಿಲ್ಲಾಧಿಕಾರಿಗಳ ಗಮನಕ್ಕೆ ಹಲವಾರು ಬಾರಿ ತರಲಾಗಿದೆ. ಆದರೂ ಕಬ್ಬು ಬೆಳೆಗಾರರು, ಪ್ರಗತಿಪರ ಸಂಘಟನೆಗಳ ಸಮಿತಿಯ ಸಭೆಯನ್ನು ಕರೆಯದಿರುವುದು ಖಂಡನೀಯ. ಇದರ ಬಗ್ಗೆ ಜಿಲ್ಲಾಧಿಕಾರಿಗಳು ಕೂಡಲೇ ಸಚಿವರು, ಶಾಸಕರು, ಕಾರ್ಖಾನೆ ಆಡಳಿತ ಮಂಡಳಿ ಸಭೆ ಕರೆಯುವಂತೆ ಒತ್ತಾಯಿಸಿದರು.
- ಜಿ.ಬಿ.ಶಿವಕುಮಾರ್, ಅಧ್ಯಕ್ಷರು, ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಸಮಿತಿಯನ್ನು ವಿಸರ್ಜನೆ ಮಾಡಿ ಅದೇ ಹೆಸರಿನ ಹೊಸ ಸಮಿತಿಯನ್ನು ರಚಿಸಿರುವ ವಿಷಯ ಬೇರೆಯವರಿಂದ ನನ್ನ ಗಮನಕ್ಕೆ ಬಂದಿದೆ. ಪುನಾರಚನೆ ಮಾಡುವುದು ಅನಿವಾರ್ಯವಿದ್ದರೂ ಮಾಡಿದ ರೀತಿ ಸರಿಯಾಗಿಲ್ಲ. ಎಲ್ಲಾ ಪಕ್ಷಗಳ ಶಾಸಕರು, ಮಾಜಿ ಶಾಸಕರು, ಜಿಲ್ಲಾಧ್ಯಕ್ಷರು, ಕನ್ನಡಪರ, ರೈತ, ದಲಿತ ಸೇರಿದಂತೆ ಎಲ್ಲಾ ಸಂಘಟನೆಗಳ ಸದಸ್ಯರನ್ನು ಪುನಾರಚನೆ ಕುರಿಂತೆ ಪೂರ್ವಭಾವಿಯಾಗಿ ಸಭೆ ಕರೆದು ಅವರೆಲ್ಲರ ಸಲಹೆ, ಅಭಿಪ್ರಾಯ ಪಡೆದು ಪುನಾರಚನೆ ಮಾಡಿದ್ದರೆ ಅದಕ್ಕೊಂದು ಅರ್ಥ ಇರುತ್ತಿತ್ತು. ಆತುರಾತುರವಾಗಿ ಮಾಡಿರುವ ಹಿಂದಿನ ಉದ್ದೇಶ ತಿಳಿಯದಾಗಿದೆ.
- ಕೆ.ಟಿ.ಶ್ರೀಕಂಠೇಗೌಡ, ಮಾಜಿ ಸದಸ್ಯರು, ವಿಧಾನಪರಿಷತ್ತುಸಮಿತಿ ಪುನಾರಚನೆ ಸರಿಯಾಗಿ ನಡೆದಿಲ್ಲ. ನನ್ನ ಮತ್ತು ಕೆ.ಆರ್.ಜಯರಾಂ ಫೋಟೋ ಕಳಿಸಿಕೊಡಿ ಸಮಿತಿಗೆ ಸೇರಿಸಿಕೊಳ್ತೇವೆ ಅಂದಿದ್ದರು. ಅದಕ್ಕೆ ನಾವು ಒಪ್ಪಲಿಲ್ಲ. ಎಲ್ಲರನ್ನೂ ಒಳಗೊಂಡು ಸಭೆ ಕರೆಯಬೇಕಿತ್ತು. ಕಾವೇರಿ ಕಣಿವೆ ಪ್ರದೇಶದವರನ್ನೂ ಸಮಿತಿಗೆ ಸೇರಿಸಿಕೊಳ್ಳಬೇಕಿತ್ತು. ಪೂರ್ವಭಾವಿಯಾಗಿ ಸಭೆಯನ್ನೇ ಕರೆಯದೆ, ಯಾರೊಂದಿಗೂ ಚರ್ಚಿಸದೆ, ಅಭಿಪ್ರಾಯಗಳನ್ನು ಪಡೆಯದೆ ಇವರಿಗಿಷ್ಟ ಬಂದವರನ್ನು ಸೇರಿಸಿಕೊಂಡು ಸಭೆ ನಡೆಸಿದರೆ ಒಪ್ಪಲು ಸಾಧ್ಯವೇ. ಸರ್ವಸಮ್ಮತ, ಸಮರ್ಥರಾದ ಅಧ್ಯಕ್ಷರನ್ನು ನೇಮಕ ಮಾಡಿ ಎಲ್ಲರೂ ಒಗ್ಗಟ್ಟಿನಿಂದ ಮುನ್ನಡೆಯುವಂತೆ ಸಮಿತಿ ರೂಪುಗೊಂಡಿದ್ದರೆ ಹೊಸ ಶಕ್ತಿ ಬರುತ್ತಿತ್ತು. ನಮ್ಮ ಹೋರಾಟಕ್ಕೆ ಅವರು ಎಂದಿಗೂ ಕೈಜೋಡಿಸಿರಲಿಲ್ಲ. ಈಗ ಅವರು ಕರೆದಾಕ್ಷಣ ಸೇರಿಕೊಳ್ಳಲಾಗುವುದೇ. ಅವರ ಹೋರಾಟ ಅವರು ಮಾಡಲಿ. ನಮ್ಮ ಹೋರಾಟ ನಾವು ಮಾಡುತ್ತೇವೆ.