ಜಿ.ಎಚ್.ಛಬ್ಬಿ ಸಮಗ್ರ ಜ್ಞಾನದ ಪರಿಪೂರ್ಣತೆಯ ಸಂಕೇತ: ಅಶೋಕ ಬಿ. ಹಿಂಚಿಗೇರಿ

KannadaprabhaNewsNetwork |  
Published : Aug 10, 2025, 01:48 AM IST
(ಫೋಟೋ 9ಬಿಕೆಟಿ1, ಕಾರ್ಯಕ್ರಮದ ಉದ್ಘಾಟನೆ) | Kannada Prabha

ಸಾರಾಂಶ

ನಿವೃತ್ತ ನ್ಯಾಯಾಧೀಶರು ಹಾಗೂ ವಕೀಲರೂ ಆಗಿದ್ದ ದಿ.ಗೋಪಾಲರಾವ ಛಭ್ಬಿ ಅವರು ಸಮಗ್ರ ಜ್ಞಾನದ ಪರಿಪೂರ್ಣತೆಯ ಸಂಕೇತವಾಗಿದ್ದರು ಎಂದು ಕರ್ನಾಟಕದ ಕಾನೂನು ಆಯೋಗದ ಅಧ್ಯಕ್ಷರು, ನ್ಯಾಯಮೂರ್ತಿ ಅಶೋಕ ಬಿ. ಹಿಂಚಿಗೇರಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ನಿವೃತ್ತ ನ್ಯಾಯಾಧೀಶರು ಹಾಗೂ ವಕೀಲರೂ ಆಗಿದ್ದ ದಿ.ಗೋಪಾಲರಾವ ಛಭ್ಬಿ ಅವರು ಸಮಗ್ರ ಜ್ಞಾನದ ಪರಿಪೂರ್ಣತೆಯ ಸಂಕೇತವಾಗಿದ್ದರು ಎಂದು ಕರ್ನಾಟಕದ ಕಾನೂನು ಆಯೋಗದ ಅಧ್ಯಕ್ಷರು, ನ್ಯಾಯಮೂರ್ತಿ ಅಶೋಕ ಬಿ. ಹಿಂಚಿಗೇರಿ ಹೇಳಿದರು.

ಬಿ.ವಿ.ವಿ. ಸಂಘದ ಎಸ್.ಸಿ. ನಂದಿಮಠ ಕಾನೂನು ಮಹಾವಿದ್ಯಾಲಯ ಮತ್ತು ಜಿ.ಎಚ್. ಛಬ್ಬಿ ಅಸೋಸಿಯೇಟ್ಸ್ ಬಾಗಲಕೋಟೆ ಇವರ ಸಂಯುಕ್ತ ಆಶ್ರಯದಲ್ಲಿ ಬಸವೇಶ್ವರ ಎಂಜಿನಿಯರಿಂಗ್ ಗ್ಯಾಲರಿ ಹಾಲ್‌ನಲ್ಲಿ ಶನಿವಾರ ನಡೆದ ದಿ.ಜಿ.ಎಚ್. ಛಬ್ಬಿ ಸಂಸ್ಮರಣೆ ದಿನ ಉದ್ಘಾಟಿಸಿ ಮಾತನಾಡಿದರು.

ಛಬ್ಬಿ ಒಬ್ಬ ಅಧ್ಯಾತ್ಮ ಜೀವಿಯಾಗಿ ಆತ್ಮ ವಿಕಸನಗೊಳಿಸಿಕೊಂಡು ದೈವಿ ಸ್ವರೂಪಿಯಾಗಿದ್ದ ಅವರು ಪರಿಪೂರ್ಣತೆಯ ಸಂಕೇತವಾಗಿದ್ದರು. ಇಂದಿನ ನ್ಯಾಯಾಧೀಶರು ಕರ್ತವ್ಯ ಸಮಯದಲ್ಲಿ ತಮ್ಮ ಪೂರ್ವಾಶ್ರಮದಿಂದ ಮುಕ್ತರಾಗಿರಬೇಕು. ವಕೀಲರು ಹಣದ ಆಸೆಗೆ ಒಳಗಾಗದೆ ಪ್ರಕರಣ ನ್ಯಾಯಯುತವಾಗಿದ್ದರೆ ಮಾತ್ರ ಪ್ರಕರಣವನ್ನು ಕೈಗೆತ್ತಿಕೊಂಡು ಕಕ್ಷಿದಾರರಿಗೆ ಕಡಿಮೆ ಸಮಯದಲ್ಲಿ ನ್ಯಾಯ ಒದಗಿಸಿ, ನಮ್ಮ ಪ್ರಾಮಾಣಿಕತೆ ಹಾಗೂ ಕಕ್ಷೀದಾರರ ಪ್ರಾರ್ಥನೆ ನ್ಯಾಯ ಗೆಲ್ಲಲು ಸಹಕಾರಿಯಾಗುತ್ತದೆ ಎಂದರು,

ಬಾಗಲಕೋಟೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎನ್.ವ್ಹಿ.ವಿಜಯ ಅವರು ಮಾತನಾಡಿ, ಬಾಗಲಕೋಟೆ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ನ್ಯಾಯಾಲಯಗಳು ಅಭಿವೃದ್ಧಿಯಾಗುತ್ತಿದ್ದು, ಅದಕ್ಕೆ ನಮ್ಮ ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶರಾದ ಸಂಜೀವಕುಮಾರ ಹಂಚಾಟೆ ಪ್ರಯತ್ನ ಶ್ಲಾಘನೀಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹಂಚಾಟೆ ಸಂಜೀವಕುಮಾರ ಅವರು ಮಾತನಾಡಿ, ದೇಶಕ್ಕೆ ಸಮಾಜಕ್ಕೆ ಮಹೋನ್ನತ ಸೇವೆ ಸಲ್ಲಿಸಿದ ಮಹನಿಯರನ್ನು ಸ್ಮರಿಸಿಕೊಳ್ಳದಿದ್ದರೆ ಅಂಥ ದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ, ಕಾರಣ ಇಂದಿನ ಯುವ ಜನಾಂಗಕ್ಕೆ ನಮ್ಮ ಇತಿಹಾಸದ ಮತ್ತು ಸಂಸ್ಕೃತಿಯ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದರು.

ವೇದಿಕೆಯ ಮೇಲೆ ಅತಿಥಿಗಳಾದ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ ಅಧ್ಯಕ್ಷರಾದ ನ್ಯಾಯಮೂರ್ತಿ ಆರ್.ಬಿ. ಬೂದಿಹಾಳ, ಬಿ.ವಿ.ವಿ.ಸಂಘದ ಕಾರ್ಯಾಧ್ಯಕ್ಷರಾದ ಡಾ. ವೀರಣ್ಣ ಚರಂತಿಮಠ ಅವರು ಉಪಸ್ಥಿತರಿದ್ದರು.

ಐಶ್ವರ್ಯ ಲಿಂಗದ ಪ್ರಾರ್ಥಿಸಿದರು. ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎಂ.ಪಿ. ಚಂದ್ರಿಕಾ ಸ್ವಾಗತಿಸಿದರು. ಶಭಾನಾತಾಜ ನಿಡಗುಂದಿ ಪರಿಚಯಿಸಿದರು. ಆರ್.ಎಸ್. ಕುಂಬಾರ ವಂದಿಸಿದರು. ಸುನೀಲ ಕಿರಸೂರ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ಜಿ.ಎಚ್. ಛಬ್ಬಿ ಅಸೋಸಿಯೇಟ್ಸ್ ವತಿಯಿಂದ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಪ್ರಭಾವತಿ ಹಿರೇಮಠ, ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಾದ ಎಸ್.ಎಸ್. ಮಿಟ್ಟಲಕೋಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಎಲ್.ಎಲ್.ಬಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸಿವಿಲ್ ಪ್ರಕ್ರಿಯೆ ಸಂಹಿತೆ ಪುಸ್ತಕಗಳನ್ನು ವಿತರಿಸಲಾಯಿತು.

ಸಂಘದ ಗೌರವ ಕಾರ್ಯದರ್ಶಿಗಳಾದ ಮಹೇಶ ಅಥಣಿ ಮತ್ತು ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ವಸತಿ ಗೃಹಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಕುಮಾರಸ್ವಾಮಿ ಹಿರೇಮಠ ಹಾಗೂ ಶ್ರೀನಿವಾಸ ಛಬ್ಬಿಯವರ ಕುಟುಂಬಸ್ಥರು, ನ್ಯಾಯಾಧೀಶರು, ವಕೀಲರು, ವಿವಿಧ ಮಹಾವಿದ್ಯಾಲಯದ ಪ್ರಾಚಾರ್ಯರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ನಂತರ ನಡೆದ ಗೋಷ್ಠಿಯಲ್ಲಿ ಪುನರ್ವಸತಿ ಮತ್ತು ಪುನರ್ವವ್ಯಸ್ಥೆ ಕಾಯ್ದೆ, 2013ರ ಅಡಿಯಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆಯ ಹಕ್ಕ ವಿಷಯದ ಕುರಿತು ಜಿಲ್ಲಾ ನ್ಯಾಯಾಧೀಶರಾದ ಸುನೀಲ ಶೆಟ್ಟರ ಉಪನ್ಯಾಸ ನೀಡಿದರು. ವೇದಿಕೆ ಮೇಲೆ ಫೈರೋಜಾ ಉಕ್ಕಲಿ, ಬಾಗಕೋಟೆಯ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಹಿರಿಯ ವಕೀಲರಾದ ಕೆ.ಜಿ. ಪುರಾಣಿಕಮಠ ವೇದಿಕೆ ಮೇಲೆ ಉಪಸ್ಥಿತರಿದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ