ಜಿ.ಮಲ್ಲಿಕಾರ್ಜುನಪ್ಪ, ಕುಟುಂಬದ ಕೊಡುಗೆ ಅನನ್ಯ: ವಿ.ಸೋಮಣ್ಣ

KannadaprabhaNewsNetwork |  
Published : Jun 28, 2026, 03:00 AM IST
ಕ್ಯಾಪ್ಷನ27ಕೆಡಿವಿಜಿ40 ದಾವಣಗೆರೆಯ ಜಿಎಂ ವಿವಿ ಆವರಣದಲ್ಲಿ ಲಿಂಗೈಕ್ಯ ಜಿ. ಮಲ್ಲಿಕಾರ್ಜುನಪ್ಪ ಅವರ ಪುತ್ಥಳಿಯನ್ನು ಸಚಿವ ವಿ.ಸೋಮಣ್ಣ ಅನಾವರಣ ಮಾಡಿದರು. ಮಾಜಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಡಾ. ಮುರುಗೇಶ್ ಆರ್.ನಿರಾಣಿ, ಮಾಜಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ್ ಇತರರು ಇದ್ದರು. .........ಕ್ಯಾಪ್ಷನ27ಕೆಡಿವಿಜಿ41 ದಾವಣಗೆರೆಯ ಜಿಎಂ ವಿವಿ ಆವರಣದಲ್ಲಿ ಲಿಂಗೈಕ್ಯ ಜಿ. ಮಲ್ಲಿಕಾರ್ಜುನಪ್ಪ ಅವರ ಜೀವನಗಾಥೆಯನ್ನು ಬಿಂಬಿಸುವ ಭವ್ಯ ಫಲಕಗಳ ಗ್ಯಾಲರಿಯನ್ನು  ಸಚಿವ ವಿ.ಸೋಮಣ್ಣ ಉದ್ಘಾಟಿಸಿದರು. ಮಾಜಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಡಾ. ಮುರುಗೇಶ್ ಆರ್.ನಿರಾಣಿ, ಮಾಜಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ್ ಇತರರು ಇದ್ದರು. | Kannada Prabha

ಸಾರಾಂಶ

ರೈತರು, ಜನಸಾಮಾನ್ಯರು, ವಿದ್ಯಾರ್ಥಿಗಳ ಭವಿಷ್ಯದ ದೂರದೃಷ್ಠಿಯೊಂದಿಗೆ ಲಿಂಗೈಕ್ಯ ಜಿ.ಮಲ್ಲಿಕಾರ್ಜುನಪ್ಪ ಮತ್ತು ಅವರ ಕುಟುಂಬದ ಕೊಡುಗೆ ಅನನ್ಯವಾಗಿದ್ದು, ಸೂರ್ಯ-ಚಂದ್ರರು ಇರುವವರೆಗೂ ಮಲ್ಲಿಕಾರ್ಜುನಪ್ಪ ಅವರ ಕುಟುಂಬದ ಹೆಸರು ಇತಿಹಾಸದಲ್ಲಿ ಇರಲಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವರಾದ ವಿ.ಸೋಮಣ್ಣ ತಿಳಿಸಿದ್ದಾರೆ.

- ಲಿಂಗೈಕ್ಯ ಜಿ. ಮಲ್ಲಿಕಾರ್ಜುನಪ್ಪ ಅವರ 12 ಅಡಿ ಎತ್ತರದ ಬೃಹತ್ ಪುತ್ಥಳಿ ಅನಾವರಣ । ''''ಎಕ್ಸಲೆನ್ಸ್ ಅವಾರ್ಡ್'''' ಪ್ರದಾನ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ರೈತರು, ಜನಸಾಮಾನ್ಯರು, ವಿದ್ಯಾರ್ಥಿಗಳ ಭವಿಷ್ಯದ ದೂರದೃಷ್ಠಿಯೊಂದಿಗೆ ಲಿಂಗೈಕ್ಯ ಜಿ.ಮಲ್ಲಿಕಾರ್ಜುನಪ್ಪ ಮತ್ತು ಅವರ ಕುಟುಂಬದ ಕೊಡುಗೆ ಅನನ್ಯವಾಗಿದ್ದು, ಸೂರ್ಯ-ಚಂದ್ರರು ಇರುವವರೆಗೂ ಮಲ್ಲಿಕಾರ್ಜುನಪ್ಪ ಅವರ ಕುಟುಂಬದ ಹೆಸರು ಇತಿಹಾಸದಲ್ಲಿ ಇರಲಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವರಾದ ವಿ.ಸೋಮಣ್ಣ ತಿಳಿಸಿದರು.

ಅವರು ಶನಿವಾರ ನಗರದ ಜಿಎಂ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿರುವ ಲಿಂಗೈಕ್ಯ ಜಿ.ಮಲ್ಲಿಕಾರ್ಜುನಪ್ಪ ಅವರ 12 ಅಡಿ ಎತ್ತರದ ಬೃಹತ್ ಪುತ್ಥಳಿ ಅನಾವರಣಗೊಳಿಸಿ, ಸಂಸ್ಥಾಪಕರ ಜೀವನಗಾಥೆಯನ್ನು ಬಿಂಬಿಸುವ ಭವ್ಯ ಫಲಕಗಳ ಗ್ಯಾಲರಿಯನ್ನು ಉದ್ಘಾಟಿಸಿ, ನಂತರ ಜಿಎಂ ಹಾಲಮ್ಮ ಸಭಾಂಗಣದಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪೂರ್ವಜನ್ಮದ ಪುಣ್ಯ:

ಜಿ.ಮಲ್ಲಿಕಾರ್ಜುನಪ್ಪ ಅವರಂತಹ ಒಬ್ಬ ಮಹಾನ್ ಪುಣ್ಯಾತ್ಮನ ಪುತ್ಥಳಿಯನ್ನು ಅನಾವರಣ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಪೂರ್ವಜನ್ಮದ ಪುಣ್ಯ ಮತ್ತು ತಂದೆ-ತಾಯಿಯ ಆಶೀರ್ವಾದ. ಯಾವುದೇ ಸರ್ಕಾರಗಳು ಮಾಡದಂತಹ ದೊಡ್ಡ ಸಾಧನೆಯನ್ನು ಜಿ.ಮಲ್ಲಿಕಾರ್ಜುನಪ್ಪನವರ ದೂರದೃಷ್ಠಿಯಲ್ಲಿ ಸ್ಥಾಪಿತವಾದ ಜಿಎಂ ಶೈಕ್ಷಣಿಕ ಸಂಸ್ಥೆ ಮಾಡಿದೆ ಎಂದು ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಮತ್ತೊಂದು ವೈದ್ಯಕೀಯ ಕಾಲೇಜು:

ಜಿಎಂ ವಿವಿ ವಿದ್ಯೆಗೆ ಮತ್ತು ಶಿಸ್ತಿಗೆ ಮತ್ತೊಂದು ಹೆಸರಾಗಿದೆ. ಇಲ್ಲಿನ ಎಂಜಿನಿಯರಿಂಗ್, ಫಾರ್ಮಸಿ ಸೇರಿದಂತೆ ವಿವಿಧ ಕಾಲೇಜುಗಳ ಒಂದೇ ಕ್ಯಾಂಪಸ್‌ನಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಬಡವರ ಹಾಗೂ ಕಡುಬಡವರ ಮಕ್ಕಳ ಶಿಕ್ಷಣಕ್ಕಾಗಿ ಇಷ್ಟೊಂದು ದೊಡ್ಡ ಸಂಸ್ಥೆಯನ್ನು ಕಟ್ಟಿ ಬೆಳೆಸಿರುವ ಜಿ.ಎಂ. ಸಿದ್ದೇಶ್ವರ ಮತ್ತು ಅವರ ಕುಟುಂಬದ ಕಾರ್ಯ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಇಲ್ಲಿ ಮತ್ತೊಂದು ವೈದ್ಯಕೀಯ ಕಾಲೇಜು ಪ್ರಾರಂಭವಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಆಶಿಸಿದರು.

ಲಿಂಗೈಕ್ಯ ಜಿ. ಮಲ್ಲಿಕಾರ್ಜುನಪ್ಪ ಅವರ ಕೊಡುಗೆಯನ್ನು ಸ್ಮರಿಸಿದ ಸೋಮಣ್ಣ, ಅವರು ಕೇವಲ ಲೋಕಸಭಾ ಸದಸ್ಯರಾಗಿ ಅಷ್ಟೇ ಅಲ್ಲದೆ, ಪಿಎಲ್‌ಡಿ ಬ್ಯಾಂಕ್ ಹಾಗೂ ಅಡಿಕೆ ಬೆಳೆಗಾರರ ಸಂಘದ ಮೂಲಕ ರೈತರಿಗೆ ದೊಡ್ಡ ಸಂದೇಶ ನೀಡಿದವರು. ರೈತರು ತಮ್ಮ ದುಡಿಮೆಯಿಂದ ಹೇಗೆ ಯಶಸ್ಸು ಕಾಣಬಹುದು ಎಂಬುದನ್ನು ತೋರಿಸಿಕೊಟ್ಟ ಸತ್ಪುರುಷರು ಎಂದು ಸ್ಮರಿಸಿದರು.

ಜಿಎಂ ಕುಟುಂಬದ ಋಣ ಮರೆಯಲ್ಲ:

ಮಾಜಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಡಾ. ಮುರುಗೇಶ್ ಆರ್.ನಿರಾಣಿ ಅತ್ಯುತ್ತಮ ಶಿಕ್ಷಕರಿಗೆ ನೀಡಲಾಗುವ ''''''''ಎಕ್ಸಲೆನ್ಸ್ ಅವಾರ್ಡ್'''''''' ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ನನ್ನ ಕಷ್ಟದ ದಿನಗಳಲ್ಲಿ ಸಹಾಯ ಮಾಡಿ, ನನ್ನ ಸಕ್ಕರೆ ಕಾರ್ಖಾನೆ ಮತ್ತು ನಿರಾಣಿ ಗ್ರೂಪ್ಸ್ ಇವತ್ತು ದೇಶದಲ್ಲೇ ಮುಂಚೂಣಿಗೆ ಬರಲು ಕಾರಣರಾದ ಜಿ.ಎಂ. ಕುಟುಂಬದ ಋಣವನ್ನು ಜೀವನ ಪರ್ಯಂತ ಮರೆಯುವುದಿಲ್ಲ. ಇವತ್ತು ನಮ್ಮ ನಿರಾಣಿ ಸಮೂಹ ಸಂಸ್ಥೆಗಳಲ್ಲಿ 72,000 ಜನರಿಗೆ ಉದ್ಯೋಗ ನೀಡುತ್ತಿರುವುದಕ್ಕೆ ಜಿ.ಎಂ. ಸಿದ್ದೇಶ್ವರ್ ಅವರ ಅಂದಿನ ಮಾರ್ಗದರ್ಶನವೇ ಕಾರಣ ಎಂದು ಕೃತಜ್ಞತೆ ಸಲ್ಲಿಸಿದರು.

ಶ್ರೀಶೈಲ ಎಜುಕೇಷನಲ್ ಟ್ರಸ್ಟ್‌ನ ಅಧ್ಯಕ್ಷ ಜಿ.ಎಂ. ಪ್ರಸನ್ನ ಕುಮಾರ, ಜಿ.ಎಂ. ವಿವಿ ಕುಲಾಧಿಪತಿ ಜಿ.ಎಂ. ಲಿಂಗರಾಜು, ಕುಲಪತಿ ಡಾ. ಎಸ್.ಆರ್. ಶಂಕಪಾಲ್, ಸಹ ಉಪ ಕುಲಪತಿ ಡಾ. ಎಂ.ವೇಣುಗೋಪಾಲ್ ರಾವ್, ಕುಲಸಚಿವ ಡಾ. ಬಿ.ಎಸ್. ಸುನೀಲ್ ಕುಮಾರ್ ಉಪಸ್ಥಿತರಿದ್ದು ಪಿಎಚ್.ಡಿ ಪದವಿ ಪುರಸ್ಕೃತರನ್ನು ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಿಮೋಫಿಲಿಯಾ ತಜ್ಞ ಡಾ. ಸುರೇಶ್ ಹನಗವಾಡಿ, ಸಮಾಜ ಸೇವಕ ಕೆ.ಬಿ. ಶಂಕರ ನಾರಾಯಣ ಮತ್ತು ಆಧ್ಯಾತ್ಮಿಕ ಗುರು ಹನುಮಂತಪ್ಪ ಕ್ಷೀರಸಾಗರ ಅವರಿಗೆ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಜಿಎಂ ಕುಟುಂಬದ ಸದಸ್ಯರು, ಜಿಎಂ ಶೈಕ್ಷಣಿಕ ಸಮೂಹ ಸಂಸ್ಥೆಗಳ ಪ್ರಾಂಶುಪಾಲರು, ಡೀನ್‌ಗಳು, ನಿರ್ದೇಶಕರು, ಮುಖ್ಯಸ್ಥರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಅಧ್ಯಾಪಕೇತರ ಬಳಗ ಉಪಸ್ಥಿತರಿದ್ದರು.

- - -

(ಬಾಕ್ಸ್‌) * ತಂದೆ ಮಲ್ಲಿಕಾರ್ಜುನಪ್ಪ ಶಕ್ತಿ: ಸಿದ್ದೇಶ್ವರಮಾಜಿ ಸಂಸದ ಡಾ. ಜಿ.ಎಂ. ಸಿದ್ದೇಶ್ವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ತಂದೆ ಜಿ.ಮಲ್ಲಿಕಾರ್ಜುನಪ್ಪನವರು ಕೇವಲ ಒಬ್ಬ ವ್ಯಕ್ತಿಯಾಗಿರಲಿಲ್ಲ, ಅವರೊಂದು ಶಕ್ತಿ. ಕರ್ನಾಟಕದ ಪ್ರಮುಖ ರಾಜಕಾರಣಿಯಾಗಿ, ಯಶಸ್ವಿ ಉದ್ಯಮಿಯಾಗಿ ಮತ್ತು ಮಹಾನ್ ಶಿಕ್ಷಣಪ್ರೇಮಿಯಾಗಿ ಬದುಕಿದವರು. ದಾವಣಗೆರೆ ಜಿಲ್ಲೆ ಮತ್ತು ಸುತ್ತಮುತ್ತಲಿನ ಗ್ರಾಮೀಣ ಭಾಗಗಳ ಅಭಿವೃದ್ಧಿಯಲ್ಲಿ ಹಾಗೂ ಇಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ತರುವಲ್ಲಿ ಅವರ ಕೊಡುಗೆ ಅತ್ಯಂತ ಅಪಾರವಾದುದು. ದಾವಣಗೆರೆ ಮತ್ತು ಮಧ್ಯ ಕರ್ನಾಟಕದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ತಾಂತ್ರಿಕ ಹಾಗೂ ಆಧುನಿಕ ಶಿಕ್ಷಣ ಸಿಗಬೇಕು ಎನ್ನುವ ಮಹತ್ವಾಕಾಂಕ್ಷೆಯಿಂದ ಅವರು ಶ್ರೀಶೈಲ ಶಿಕ್ಷಣ ಟ್ರಸ್ಟ್ ಅನ್ನು ಸ್ಥಾಪಿಸಿದರು. ಈ ಟ್ರಸ್ಟ್ನ ಆಶ್ರಯದಲ್ಲಿ ಜಿ.ಎಂ. ಗ್ರೂಪ್ ಸಂಸ್ಥೆಗಳಡಿ 2001 ರಲ್ಲಿ ಸ್ಥಾಪಿತವಾದ ''''''''ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯವು'''''''' ಕೇವಲ 129 ವಿದ್ಯಾರ್ಥಿಗಳಿಂದ ತನ್ನ ಶೈಕ್ಷಣಿಕ ಪಯಣವನ್ನು ಆರಂಭಿಸಿದ್ದು, ಇಂದಿನವರೆಗೆ ಒಟ್ಟು 10,230 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ ಹೆಗ್ಗಳಿಕೆ ಸಂಸ್ಥೆಗಿದೆ ಎಂದರು.

- - -

-27ಕೆಡಿವಿಜಿ40: ದಾವಣಗೆರೆಯ ಜಿಎಂ ವಿವಿ ಆವರಣದಲ್ಲಿ ಲಿಂಗೈಕ್ಯ ಜಿ. ಮಲ್ಲಿಕಾರ್ಜುನಪ್ಪ ಅವರ ಪುತ್ಥಳಿಯನ್ನು ಸಚಿವ ವಿ.ಸೋಮಣ್ಣ ಅನಾವರಣ ಮಾಡಿದರು. ಮಾಜಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಡಾ. ಮುರುಗೇಶ್ ಆರ್.ನಿರಾಣಿ, ಮಾಜಿ ಸಂಸದ ಡಾ. ಜಿ.ಎಂ. ಸಿದ್ದೇಶ್ವರ್ ಇತರರು ಇದ್ದರು. -27ಕೆಡಿವಿಜಿ41: ದಾವಣಗೆರೆಯ ಜಿಎಂ ವಿವಿ ಆವರಣದಲ್ಲಿ ಲಿಂಗೈಕ್ಯ ಜಿ.ಮಲ್ಲಿಕಾರ್ಜುನಪ್ಪ ಅವರ ಜೀವನಗಾಥೆಯನ್ನು ಬಿಂಬಿಸುವ ಭವ್ಯ ಫಲಕಗಳ ಗ್ಯಾಲರಿಯನ್ನು ಸಚಿವ ವಿ.ಸೋಮಣ್ಣ ಉದ್ಘಾಟಿಸಿದರು. ಮಾಜಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಡಾ. ಮುರುಗೇಶ್ ಆರ್.ನಿರಾಣಿ, ಮಾಜಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ್ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಾರಾಂತ್ಯ ರಜೆ: ಪ್ರವಾಸಿ ತಾಣದಲ್ಲಿ ಟ್ರಾಫಿಕ್
ಪಕ್ಷ ಸಂಘಟನೆಯಲ್ಲಿ ಕಾರ್ಯಕರ್ತರ ಜವಾಬ್ದಾರಿ ಮುಖ್ಯ