ರಾಜ್ಯದಲ್ಲೇ ಟಾಪ್-5 ಸ್ಥಾನಕ್ಕೆ ತರಲು ಕೆ.ಡಿ. ಬಡಿಗೇರ ಕರೆ
ಕನ್ನಡಪ್ರಭ ವಾರ್ತೆ ಗದಗ
ಬುಧವಾರ ಗದಗ ನಗರದ ಮಹಾವೀರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಿಗಾಗಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಮಟ್ಟದ ಶೈಕ್ಷಣಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಂದು ಶಾಲೆಯೂ ಪ್ರತ್ಯೇಕ ಕ್ರಿಯಾಯೋಜನೆ ರೂಪಿಸಿಕೊಂಡು ಫಲಿತಾಂಶ ವೃದ್ಧಿಗೆ ಮುಂದಾಗಬೇಕು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಂಜೀವಿನಿ ಹಾಗೂ ಪ್ರತಿಭಾವಂತರಿಗೆ ಮೇಧಾವಿ ವಿಶೇಷ ತರಗತಿಗಳನ್ನು ನಡೆಸಿ ಮಿಷನ್ 60+ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಡಿಸೆಂಬರ್ ಅಂತ್ಯದೊಳಗೆ ಸಂಪೂರ್ಣ ಪಠ್ಯಕ್ರಮ ಮುಗಿಸಿ, ನಿರಂತರವಾಗಿ ಮಾದರಿ ಪ್ರಶ್ನೆಪತ್ರಿಕೆಗಳ ಅಭ್ಯಾಸ, ಮೌಲ್ಯಮಾಪನ ಹಾಗೂ ಪೋಷಕರ ಜತೆ ನಿರಂತರ ಸಂಪರ್ಕಕ್ಕೆ ಆದ್ಯತೆ ನೀಡುವಂತೆ ಮುಖ್ಯಶಿಕ್ಷಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ವೇದಿಕೆಯಲ್ಲಿ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ ಗೋಟುರ, ಬಿಇಒಗಳಾದ ವಿ.ವಿ. ನಡವಿನಮನಿ, ಗಂಗಾಧರ ಅಣ್ಣಿಗೇರಿ, ಡಯಟ್ ಹಿರಿಯ ಉಪನ್ಯಾಸಕ ಬಿ.ಎಫ್. ಅರವಟಿಗಿ, ವೈ.ಕೆ. ಹಂದ್ರಾಳ, ಬಿಆರ್‌ಸಿಗಳಾದ ಎಸ್.ಪಿ. ಪ್ರಭಯ್ಯನಮಠ, ಎನ್.ಆರ್. ನಿಡಗುಂದಿ, ಮಾಧ್ಯಮಿಕ ನೌಕರರ ಸಂಘದ ಅಧ್ಯಕ್ಷ ಎಂ.ಕೆ. ಲಮಾಣಿ, ಮುಖಂಡರಾದ ಆನಂದ ಪಾಟೀಲ, ಉಮೇಶ್ ಹಿರೇಮಠ, ಉಪನಿರ್ದೇಶಕರ ಕಚೇರಿಯ ಎಂ.ಎಚ್. ಸವದತ್ತಿ, ಆರ್.ಜಿ. ಕವಲಗೇರಿ ಸೇರಿದಂತೆ ಜಿಲ್ಲೆಯ 285ಕ್ಕೂ ಹೆಚ್ಚು ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಹಾಗೂ ಬಿಆರ್‌ಪಿಗಳು ಉಪಸ್ಥಿತರಿದ್ದರು.
ಫಲಿತಾಂಶ ಸುಧಾರಣೆ ಕೇವಲ ಪರೀಕ್ಷಾ ದಿನಗಳ ಕಸರತ್ತಾಗದೆ ನಿರಂತರ ಪ್ರಕ್ರಿಯೆಯಾಗಬೇಕು. ಕಲಿಕೆಯಲ್ಲಿ ಹಿಂದುಳಿದ ಪ್ರತಿ ಮಗುವಿನ ಮೇಲೂ ವೈಯಕ್ತಿಕ ಗಮನಹರಿಸಿ, ಬೋಧನೆಯಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ಎಐ ಸಾಧನಗಳನ್ನು ಸಮರ್ಪಕವಾಗಿ ಬಳಸಿಕೊಂಡಾಗ ಮಾತ್ರ ಗದಗ ಜಿಲ್ಲೆಯನ್ನು ಶೈಕ್ಷಣಿಕವಾಗಿ ರಾಜ್ಯದ ಮುಂಚೂಣಿ ಸ್ಥಾನದಲ್ಲಿ ನಿಲ್ಲಿಸಲು ಸಾಧ್ಯ.