ಸಂಗೀತ ಕ್ಷೇತ್ರದಲ್ಲಿ ಗದಗ ಜಿಲ್ಲೆಯ ಸಾಧನೆ ಅಪಾರ: ಎಚ್.ಕೆ. ಪಾಟೀಲ

KannadaprabhaNewsNetwork |  
Published : Sep 21, 2026, 02:15 AM IST
ಕಾರ್ಯಕ್ರಮದಲ್ಲಿ ಶಾಸಕ ಎಚ್.ಕೆ. ಪಾಟೀಲ ಮಾತನಾಡಿದರು. | Kannada Prabha

ಸಾರಾಂಶ

ಸಂಗೀತ, ಸಾಹಿತ್ಯ ಕ್ಷೇತ್ರದಲ್ಲಿ ಗದಗ ಜಿಲ್ಲೆಯ ಕೊಡುಗೆ ಅಪಾರ, ಗದಗ ಪುಣ್ಯ ಸ್ಥಳವಾಗಿದೆ. ನಾವೆಲ್ಲ ಪುಣ್ಯವಂತರು, ಗದಗ ಹೆಮ್ಮೆಪಡುವ ವ್ಯಕ್ತಿ ಪಂಡಿತ ಎಂ. ವೆಂಕಟೇಶ ಕುಮಾರ, ಅವರಿಂದ ಗದಗ ಗೌರವ ಹೆಚ್ಚಿದೆ.

ಕನ್ನಡಪ್ರಭ ವಾರ್ತೆ ಮುಳಗುಂದ

ಸಂಗೀತ, ಸಾಹಿತ್ಯ ಕ್ಷೇತ್ರದಲ್ಲಿ ಗದಗ ಜಿಲ್ಲೆಯ ಕೊಡುಗೆ ಅಪಾರ, ಗದಗ ಪುಣ್ಯ ಸ್ಥಳವಾಗಿದೆ. ನಾವೆಲ್ಲ ಪುಣ್ಯವಂತರು, ಗದಗ ಹೆಮ್ಮೆಪಡುವ ವ್ಯಕ್ತಿ ಪಂಡಿತ ಎಂ. ವೆಂಕಟೇಶ ಕುಮಾರ, ಅವರಿಂದ ಗದಗ ಗೌರವ ಹೆಚ್ಚಿದೆ. ಅಂತವರಿಗೆ ಮಹಾಂತ ಶ್ರೀ ಪ್ರಶಸ್ತಿ ನೀಡಿ ಗೌರವಿಸಿರುವುದು ಶ್ಲಾಘನೀಯ ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು.

ಪಟ್ಟಣದ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿ ಕಲಾಭವನದಲ್ಲಿ ಭಾನುವಾರ ಚವಡಿ ಪ್ರತಿಷ್ಠಾನ ವತಿಯಿಂದ ನಡೆದ ಮಹಾಂತ ಶ್ರೀ ಪ್ರಶಸ್ತಿ ಪ್ರದಾನ ಹಾಗೂ ದತ್ತಿ ಉಪನ್ಯಾಸ ಸಮಾರಂಭದಲ್ಲಿ ಮಾತನಾಡಿದ ಅವರು, ವೆಂಕಟೇಶಕುಮಾರ ಸಂಗೀತಕಾರರು ಮಾತ್ರವಲ್ಲ ಸಮಾಜ ಕಂಡಂತ ಒಬ್ಬ ಶ್ರೇಷ್ಠ ವ್ಯಕ್ತಿಯಾಗಿದ್ದಾರೆ. ಉತ್ತರ ಕರ್ನಾಟಕವು ಸಂಗೀತ ದಿಗ್ಗಜರ ತವರು ಎನಿಸಿದೆ. ಭಾರತ ರತ್ನ ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್ ಸೇರಿದಂತೆ ಹಲವು ಮಹನೀಯರು ನಮ್ಮವರೆ ಆಗಿದ್ದಾರೆ. ನಾವು ಸಾಂಸ್ಕ್ರತಿಕವಾಗಿ, ಸಾಹಿತ್ಯಕವಾಗಿ, ಕಲಾ ರೀತಿಯಲಿ ಶ್ರೀಮಂತರಿದ್ದೇವೆ. ಚವಡಿ ಪ್ರತಿಷ್ಠಾನ ಪ್ರತಿ ವರ್ಷವು ದತ್ತಿಉಪನ್ಯಾಸ ಕಾರ್ಯಕ್ರಮ ಆಯೋಜನೆ ಮೂಲಕ ನಾಡಿನ ಶ್ರೇಷ್ಠ ವ್ಯಕ್ತಿಗಳ ಪರಿಚಯ ಮತ್ತು ಅವರಿಗೆ ಸಲ್ಲಿಸುವ ಗೌರವವು ಉತ್ತಮ ಕಾರ್ಯವಾಗಿದೆ ಎಂದರು.

ಸಾನಿಧ್ಯ ವಹಿಸಿದ್ದ ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿದರು. ನಂತರ ಖ್ಯಾತ ಹಿಂದುಸ್ತಾನಿ ಗಾಯಕ ಪದ್ಮಶ್ರೀ ಪ್ರಶಸ್ತಿ ಪುರಸ್ಕ್ರತ ಪಂ. ಡಾ. ಎಂ. ವೆಂಕಟೇಶಕುಮಾರ ಅವರಿಗೆ ಮಹಾಂತಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪದ್ಮವಿಭೂಷಣ ಪಂ. ಡಾ. ಮಲ್ಲಿಕಾರ್ಜುನ ಮನ್ಸೂರ ಅವರ ಕುರಿತು ಹಿಂದೂಸ್ತಾನಿ ಗಾಯಕ ಮೃತ್ಯುಂಜಯ ಶೆಟ್ಟರ್ ಉಪನ್ಯಾಸ ನೀಡಿದರು.

ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗ ದೇವರು, ಪ್ರತಿಷ್ಠಾನ ಗೌರವಾಧ್ಯಕ್ಷ ವೈದ್ಯ ಡಾ. ಶಿವಕುಮಾರ ಚವಡಿ, ಮನೋವೈದ್ಯ ಡಾ. ಆನಂದ ಪಾಂಡುರಂಗಿ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಶಿವಣ್ಣ ನೀಲಗುಂದ, ಬಿಎಂಎಸ್ ಶಿಕ್ಷಣ ಸಮಿತಿ ಅಧ್ಯಕ್ಷ ಎಂ.ಡಿ. ಬಟ್ಟೂರ, ಅಕ್ಕಮಹಾದೇವಿ ಆಲೂರ ಹಾಗೂ ಪ್ರತಿಷ್ಠಾನ ಸದಸ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಕರು ಸಮಾಜಕ್ಕೆ ದಿಕ್ಸೂಚಿಯಾಗಲಿ
ಮಳೆ ಇಲ್ಲ, ಬೆಳೆ ಇಲ್ಲ ಸರ್ಕಾರಕ್ಕೆ ಆದಾಯ ಕಡಿಮೆ ಇದೆ: ರಾಯರಡ್ಡಿ