ರಾಯರಡ್ಡಿ ಕಳಕಳಿಯಿಂದ ಗದಗ-ವಾಡಿ ರೈಲ್ವೆ ಯೋಜನೆ ಸಾಕಾರ

KannadaprabhaNewsNetwork |  
Published : May 15, 2025, 01:37 AM IST
14ಕೆಕೆಆರ್11:ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪತ್ರಿಕೆಗೊಷ್ಠಿಯಲ್ಲಿ ಮುಖಂಡರು ಮಾತನಾಡಿದರು. | Kannada Prabha

ಸಾರಾಂಶ

ಬಸವರಾಜ ರಾಯರಡ್ಡಿ ಈ ಹಿಂದೆ ಸಂಸದರಾಗಿದ್ದ ಸಂದರ್ಭದಲ್ಲಿ ಗದಗ-ವಾಡಿ ರೈಲ್ವೆ ಯೋಜನೆಗೆ ಸರ್ವೆ ಮಾಡಿಸಿದರು. ತದನಂತರ ಯೋಜನೆ ಜಾರಿಗಾಗಿ ಪ್ರಾಮಾಣಿಕ ಪ್ರಯತ್ನ ನಡೆಸಿದ್ದರು. 2013ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಭೂ ಸ್ವಾಧೀನಕ್ಕೆ ಹಣ ನೀಡಿದರು.

ಕೊಪ್ಪಳ (ಯಲಬುರ್ಗಾ):

ಗದಗ-ವಾಡಿ ರೈಲ್ವೆ ಯೋಜನೆ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರ ಕಳಕಳಿಯಿಂದ ಸಾಕಾರಗೊಂಡಿದೆ ಎಂದು ಯಲಬುರ್ಗಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆರಿಬಸಪ್ಪ ನಿಡಗುಂದಿ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಯರಡ್ಡಿ ಈ ಹಿಂದೆ ಸಂಸದರಾಗಿದ್ದ ಸಂದರ್ಭದಲ್ಲಿ ಗದಗ-ವಾಡಿ ರೈಲ್ವೆ ಯೋಜನೆಗೆ ಸರ್ವೆ ಮಾಡಿಸಿದರು. ತದನಂತರ ಯೋಜನೆ ಜಾರಿಗಾಗಿ ಪ್ರಾಮಾಣಿಕ ಪ್ರಯತ್ನ ನಡೆಸಿದ್ದರು. 2013ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಭೂ ಸ್ವಾಧೀನಕ್ಕೆ ಹಣ ನೀಡಿದರು. ಅಂದು ಕೇಂದ್ರ ರೈಲ್ವೆ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಈ ಯೋಜನೆಗೆ ಅನುಮತಿ ನೀಡಿ, ಅನುದಾನ ನೀಡಿದರು ಎಂದು ಹೇಳಿದರು.ಬಸವರಾಜ ರಾಯರಡ್ಡಿ ಹಳಿ ಇಲ್ಲದ ರೈಲು ಬಿಡುತ್ತಾರೆ ಎಂದು ವಿರೋಧ ಪಕ್ಷದವರು ಅಪಹಾಸ್ಯ ಮಾಡಿದ್ದರು. ಅಂಥವರಿಗೆ ರಾಯರಡ್ಡಿ ರೈಲು ಓಡಿಸುವ ಮೂಲಕ ಉತ್ತರ ನೀಡಿದ್ದಾರೆ ಎಂದ ಅವರು, ಗದಗ-ವಾಡಿ ರೈಲ್ವೆ ಯೋಜನೆ ಕ್ರೆಡಿಟ್ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಬಸವರಾಜ ರಾಯರಡ್ಡಿ ಅವರಿಗೆ ಸಲ್ಲುತ್ತದೆ ಎಂದರು.

ಕಾಂಗ್ರೆಸ್ ವಕ್ತಾರ ಸಂಗಮೇಶ ಗುತ್ತಿ ಹಾಗೂ ಆರ್‌ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶೇಖರಗೌಡ ಉಳ್ಳಾಗಡ್ಡಿ ಮಾತನಾಡಿ, ಮೇ 15ರಂದು ಕುಷ್ಟಗಿಯಲ್ಲಿ ಗದಗ-ವಾಡಿ ರೈಲ್ವೆ ಸಂಚಾರ ಲೋಕಾರ್ಪಣೆಯಾಗಲಿದೆ. ಕುಷ್ಟಗಿಯಿಂದ ಹುಬ್ಬಳ್ಳಿ ರೈಲ್ವೆ ಸಂಚರಿಸಲಿದೆ. ಅದ್ಧೂರಿಯಾಗಿ ಕಾರ್ಯಕ್ರಮ ನಡೆಯಲಿದೆ. ಕ್ಷೇತ್ರದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು. ಈ ಯೋಜನೆ ಜಾರಿಗೆ ಬಸವರಾಜ ರಾಯರಡ್ಡಿ ಕೊಡುಗೆ ಅಪಾರವಾಗಿದೆ. ಜಿಲ್ಲೆಯಲ್ಲಿ ಕೆಲವರು ಈ ಯೋಜನೆ ಮಾಡಿದ್ದು ನಾವೇ ಎಂದು ಪ್ರಚಾರ ಪಡೆದುಕೊಳ್ಳುತ್ತಿರುವುದು ದುರ್ದೈವದ ಸಂಗತಿ. ರಾಯರಡ್ಡಿ ಪ್ರಾಮಾಣಿಕ ಪ್ರಯತ್ನದಿಂದ ಯೋಜನೆ ಸಾಕಾರಗೊಂಡಿದೆ ಎಂದರು.

ಬ್ಲಾಕ್ ಕಾರ್ಯಾಧ್ಯಕ್ಷ ಆನಂದ ಉಳ್ಳಾಗಡ್ಡಿ, ಭೂನ್ಯಾಯ ಮಂಡಳಿ ಸದಸ್ಯ ಮಲ್ಲಿಕಾರ್ಜುನ ಜಕ್ಕಲಿ, ಮುಖಂಡರಾದ ಶರಣಪ್ಪ ಗಾಂಜಿ, ಮಹಾಂತೇಶ ಗಾಣಗೇರ, ಹಂಪಯ್ಯಸ್ವಾಮಿ ಹಿರೇಮಠ, ಸಂಗಣ್ಣ ತೆಂಗಿನಕಾಯಿ, ವಸಂತರಾವ್ ಕುಲಕರ್ಣಿ, ಎಂ.ಎಫ್. ನದಾಫ್, ರಹೇಮಾನಸಾಬ್‌ ಮಕ್ಕಪ್ಪನವರ ಇದ್ದರು.

PREV

Recommended Stories

ಕಡ್ಡಾಯವಾಗಿ ಆಂತರಿಕಾ ದೂರು ನಿವಾರಣಾ ಸಮಿತಿ ರಚಿಸಿ
ನಾಳೆಯಿಂದ ರಾಜ್ಯಮಟ್ಟದ ಮೂರು ನಾಟಕಗಳ ಪ್ರದರ್ಶನ