ಟ್ರಂಕ್ ರೂಟ್ ಆಗಲಿದೆ ಗದಗ-ವಾಡಿ ರೈಲ್ವೆ ಯೋಜನೆ

KannadaprabhaNewsNetwork |  
Published : Jun 22, 2025, 01:18 AM IST
21ಕೆಕೆಆರ್2:ಕುಕನೂರು ಪಟ್ಟಣದಲ್ಲಿ ಶನಿವಾರ ರಾತ್ರಿ ಹೈ ಮಾಸ್ಟ್ ಹಾಗೂ ಬೀದಿ ದೀಪಗಳ ಉದ್ಘಾಟನೆ ಹಾಗೂ ಕುಷ್ಟಗಿ- ಹುಬ್ಬಳ್ಳಿ ಪ್ಯಾಸೆಂಜರ್ ರೈಲ್ವೆ ಸಂಚಾರದ ಮಾಸಿಕ ಪ್ರತ್ಯಾಲೋಚನಾ ಸಭೆಯನ್ನೂದ್ದೇಶಿಸಿ  ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮಾತನಾಡಿದರು. | Kannada Prabha

ಸಾರಾಂಶ

ರಾಯರಡ್ಡಿ ರೈಲು ತರುವುದಿಲ್ಲ, ರೀಲು ಬಿಡುತ್ತಾರೆ ಎಂದು ಟೀಕಿಸುತ್ತಿದ್ದರು. ಅಂತಹವರನ್ನು ಸದ್ಯ ರೈಲು ಹತ್ತಿಸಿದ್ದೇವೆ ಎಂದರು. ನನ್ನ ಮೇಲೆ ಚುನಾವಣೆಗೆ ನಿಂತು ಒಮ್ಮೆ ಶಾಸಕರಾದವರು ಮತ್ತೊಮ್ಮೆ ಶಾಸಕರಾಗಿಯೇ ಇಲ್ಲ ಎಂದು ವಿಪಕ್ಷ ನಾಯಕರಿಗೆ ಚಾಟಿ ಬೀಸಿದರು.

ಕುಕನೂರು:

ಕೇಂದ್ರ ಸರ್ಕಾರದಿಂದ ಈ ಹಿಂದೆ ಅನುಮೋದನೆ ಹಾಗೂ ಮಂಜೂರಾತಿಗೆ ಜಟಿಲವಾಗಿದ್ದ ಗದಗ-ವಾಡಿ ರೈಲ್ವೆ ಯೋಜನೆ ಮುಂದಿನ ದಿನಗಳಲ್ಲಿ ದಕ್ಷಿಣ ಭಾರತಕ್ಕೆ ಟ್ರಂಕ್ ರೂಟ್ ಆಗಲಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ಪಟ್ಟಣದಲ್ಲಿ ಹೈಮಾಸ್ಟ್ ಹಾಗೂ ಬೀದಿದೀಪಗಳ ಉದ್ಘಾಟನೆ ಹಾಗೂ ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲ್ವೆ ಸಂಚಾರದ ಮಾಸಿಕ ಪ್ರತ್ಯಾಲೋಚನಾ ಸಭೆ ಉದ್ದೇಶಿಸಿ ಮಾತನಾಡಿದರು.

ತಾವು ಸಂಸದರಾಗಿದ್ದ ವೇಳೆ ಗದಗ-ವಾಡಿ ರೈಲ್ವೆ ಯೋಜನೆಯ ಎಂಜಿನಿಯರಿಂಗ್ ಆ್ಯಂಡ್‌ ಟ್ರಾಫಿಲ್‌ ಸರ್ವೇಗೆ ಪ್ರಸ್ತಾವನೆ ಸಲ್ಲಿಸಿದ್ದೆ. ಸರ್ವೇ ಆದ ನಂತರ ಯೋಜನೆ ಸಾಕಾರದಿಂದ ಬರುವ ಲಾಭಾಂಶ -0.6ನಷ್ಟಿತ್ತು. ಇದರಿಂದ ರಾಷ್ಟ್ರೀಯ ರೈಲ್ವೆ ಅಧಿಕಾರಿಗಳು ಯೋಜನೆಯಿಂದ ಲಾಭವಿಲ್ಲವೆಂದು ಕೈ ಬಿಟ್ಟರು. ನಂತರ ಮನಮೋಹನ್ ಸಿಂಗ್ ಅವರು ಪ್ರಧಾನಿಯಾದಾಗ ಈ ಯೋಜನೆ ಮರು ಸರ್ವೇ ಮಾಡಿಸಿದಾಗ ಸಹ ಕೇಂದ್ರ ರೈಲ್ವೆ ಸಚಿವರು ಯೋಜನೆಗೆ ಸಾವಿರಾರು ಕೋಟಿ ಬೇಕು, ಹಣವಿಲ್ಲವೆಂದು ಕೈಬಿಟ್ಟರು. ನಂತರ ಮಲ್ಲಿಕಾರ್ಜು ಖರ್ಗೆ ಅವರು ಕೇಂದ್ರ ರೈಲ್ವೆ ಸಚಿವರಾದಾಗ ಯೋಜನೆ ಕೈಗೆತ್ತಿಕೊಳ್ಳಲಾಯಿತು. ಆದರೆ, ಜಟಿಲತೆ ಅಲ್ಲಿ ಸಹ ಕಾಡಿತು. ಪ್ಲಾನಿಂಗ್ ಕಮಿಷನ್‌ನಲ್ಲಿ ಯೋಜನೆ ಬೇಡವೆಂದು ಅಧಿಕಾರಿಗಳು ಕೈ ಚೆಲ್ಲಿದರು. ಹಣದ ಕೊರತೆ ಇದೆ ಎಂದರು. ಆಗ ರಾಜ್ಯದ ಸಿಎಂ ಆಗಿದ್ದ ಸಿದ್ದರಾಮಯ್ಯನವರಿಗೆ ಕೋರಿಕೊಂಡು ಗದಗ-ವಾಡಿ ರೈಲ್ವೆ ಯೋಜನೆಗೆ ಅವಶ್ಯವಿರುವ ಅನುದಾನದಲ್ಲಿ ಅರ್ಧವನ್ನು ರಾಜ್ಯ ಸರ್ಕಾರ ಹಾಗೂ ಭೂಮಿಗೆ ಸಹ ರಾಜ್ಯ ಸರ್ಕಾರ ಹಣ ನೀಡುತ್ತದೆ ಎಂದು ಪ್ರಸ್ತಾವನೆ ಕೊಟ್ಟಾಗ, ರೈಲ್ವೆ ಯೋಜನೆಗೆ ಅನುಮೋದನೆ ದೊರೆಯಿತು. ಸದ್ಯ ಈ ರೈಲ್ವೆ ಯೋಜನೆಯಿಂದ ಇಡೀ ದಕ್ಷಿಣ ಭಾರತಕ್ಕೆ ಟ್ರಂಕ್ ರೂಟ್ ಆಗಲಿದೆ. ದೆಹಲಿ, ಮುಂಬೈ, ಹೈದರಾಬಾದ್, ಗೋವಾ ಟು ದೆಹಲಿ. ಹೀಗೆ ಟ್ರಂಕ್ ರೂಟ್ ಆಗಿ ಯೋಜನೆ ಫಲಪ್ರದವಾಗಲಿದೆ ಎಂದರು.

ರಿಲ್ ಬಿಡ್ತಾರೆ ಅಂದವರಿಗೆ ರೈಲು ಹತ್ತಿಸಿವಿ:

ರಾಯರಡ್ಡಿ ರೈಲು ತರುವುದಿಲ್ಲ, ರೀಲು ಬಿಡುತ್ತಾರೆ ಎಂದು ಟೀಕಿಸುತ್ತಿದ್ದರು. ಅಂತಹವರನ್ನು ಸದ್ಯ ರೈಲು ಹತ್ತಿಸಿದ್ದೇವೆ ಎಂದರು. ನನ್ನ ಮೇಲೆ ಚುನಾವಣೆಗೆ ನಿಂತು ಒಮ್ಮೆ ಶಾಸಕರಾದವರು ಮತ್ತೊಮ್ಮೆ ಶಾಸಕರಾಗಿಯೇ ಇಲ್ಲ ಎಂದು ವಿಪಕ್ಷ ನಾಯಕರಿಗೆ ಚಾಟಿ ಬೀಸಿದರು.

ಈ ವೇಳೆ ಪಪಂ ಅಧ್ಯೆಕ್ಷೆ ಲಲಿತಮ್ಮ ಯಡಿಯಾಪೂರ, ಉಪಾಧ್ಯಕ್ಷ ಪ್ರಶಾಂತ ಆರಬೆರಳಿನ್, ಪ್ರಮುಖರಾದ ಹನುಮಂತಗೌಡ ಚೆಂಡೂರು, ನಾರಾಯಣಪ್ಪ ಹರಪನ್ಹಳ್ಳಿ, ಕೆರಿಬಸಪ್ಪ ನಿಡಗುಂದಿ, ಸಾಹಿತಿ ಕೆ.ಬಿ. ಬ್ಯಾಳಿ, ಪಪಂ ಮುಖ್ಯಾಧಿಕಾರಿ ನಬೀಸಾಬ್ ಇದ್ದರು.

PREV

Recommended Stories

ಧರ್ಮಸ್ಥಳ ಕೇಸ್‌ : ಅರ್ಧ ಕೋಟಿ ವ್ಯಯ?
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ : ರಾಜ್ಯದಲ್ಲಿ 1 ವಾರ ಮಳೆ