ಕನ್ನಡಪ್ರಭ ವಾರ್ತೆ ಯಮಕನಮರಡಿ
ಹುಕ್ಕೇರಿ ತಾಲೂಕಿನ ಗುಟಗುದ್ದಿ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕನ್ನಡಪ್ರಭ ಯುವ ಆವೃತ್ತಿ ವಿತರಿಸಿ ಮಾತನಾಡಿದ ಅವರು, ಕನ್ನಡಪ್ರಭ ಯುವ ಆವೃತ್ತಿ ಸಂಚಿಕೆಯಲ್ಲಿ ವಿದ್ಯಾರ್ಥಿಗಳಿಗಾಗಿ ಮೀಸಲಾದ ಶೈಕ್ಷಣಿಕ ವಾರ್ತೆಗಳು, ಎಸ್ಸೆಸ್ಸೆಲ್ಸಿಯ ಎಲ್ಲ ವಿಷಯಗಳ ನೋಟ್ಸ್‌ಗಳು, ಅನೇಕ ಶೈಕ್ಷಣಿಕ ವಿಷಯದ ಚಟುವಟಿಕೆಗಳು ಮತ್ತು ಉದ್ಯೋಗ ವಾರ್ತೆಯಂತಹ ಉಪಯುಕ್ತ ಮಾಹಿತಿಗಳಿದ್ದು, ವಿದ್ಯಾರ್ಥಿಗಳು ಅದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಬೆಳಗಾವಿ ಕನ್ನಡಪ್ರಭ ಪ್ರಸರಣ ವಿಭಾಗದ ಮುಖ್ಯಸ್ಥ ಮಂಜುನಾಥ ಕಸಮಳಗಿ ಮಾತನಾಡಿ, ಶಿಕ್ಷಣವು ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಜೀವಿನಿಯಾಗಿದೆ. ವಿದ್ಯಾರ್ಥಿಗಳ ಭವಿಷ್ಯಕಾಗಿ ಕನ್ನಡಪ್ರಭ ದಿನಪತ್ರಿಕೆ ಅನೇಕ ಉಪಯುಕ್ತ ವಿಷಯಗಳ ವಿಭಿನ್ನ ಸಂಚಿಕೆಗಳನ್ನು ಪ್ರಕಟಿಸುತ್ತಿದ್ದು, ಗ್ರಾಮೀಣ ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ಶಹಾಬಂದರ ಗ್ರಾಪಂ ಪಿಡಿಒ ರಮೇಶ ತೇಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ಬರುವ ವಿದ್ಯಾರ್ಥಿಗಳ ಶೈಕ್ಷಣಿಕ ಬಲವರ್ಧನೆಗಾಗಿ ಸಹಾಯ, ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಕ್ತುಂಸಾಬ್ ಅಪ್ಪುಬಾಯಿ ಹಾಗೂ ರಾಜೇಂದ್ರ ಪಂಗಣ್ಣವರ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಸುರೇಶ ಹರಿಜನ, ಭೀಮಶಿ ತವಗಿ ಮತ್ತು ಗಂಗಾರಾಮ ಪಾಟೀಲ ಭಾಗವಹಿಸಿದ್ದರು. ಯಲ್ಲಪ್ಪ ಘಸ್ತಿದೈಶಿ ಸ್ವಾಗತಿಸಿದರು. ಕಲಾ ಶಿಕ್ಷಕ ಯೋಗೀಶ ಕಾಂಬೋಜಿ ಕಾರ್ಯಕ್ರಮ ನಿರೂಪಿಸಿದರು. ಕನ್ನಡಪ್ರಭದ ಹಿರಿಯ ವರದಿಗಾರ ಎ.ಎಂ.ಕರ್ನಾಚಿ, ಜಿ.ಕೆ.ಬುಡಕಿ, ಬಿ.ಡಿ.ಶಿರಗಾಂವಿ, ಎಸ್.ಎಸ್.ಸಂಗಣ್ಣವರ, ಎಸ್.ಎಸ್.ಪಟೇಲ, ಆರ್.ಎಸ್.ಪಾಟೀಲ ಸೇರಿದಂತೆ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಂ.ಬಿ.ಮುಧೋಳ ಶಿಕ್ಷಕರು ವಂದಿಸಿದರು.
ರಾಜೇಂದ್ರ ಪಂಗಣ್ಣವರ, ಕನ್ನಡಭಾಷಾ ಶಿಕ್ಷಕರು.
ಮಂಜುನಾಥ ಕಸಮಳಗಿ, ಬೆಳಗಾವಿ ಕನ್ನಡಪ್ರಭ ಪ್ರಸರಣ ವಿಭಾಗದ ಮುಖ್ಯಸ್ಥರು.