ಗಡ್ಡದೇವರಮಠ ಜನ್ಮದಿನ ಅದ್ಧೂರಿ ಆಚರಿಸಲು ನಿರ್ಧಾರ

KannadaprabhaNewsNetwork |  
Published : May 28, 2025, 12:17 AM IST
ಪೋಟೋ ಇದೆ. | Kannada Prabha

ಸಾರಾಂಶ

ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಅವರ 75ನೇ ವರ್ಷದ ಹುಟ್ಟು ಹಬ್ಬವನ್ನು ಮೇ 30ರಂದು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಚಂಬಣ್ಣ ಬಾಳಿಕಾಯಿ ಹೇಳಿದರು.

ಲಕ್ಷ್ಮೇಶ್ವರ: ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಅವರ 75ನೇ ವರ್ಷದ ಹುಟ್ಟು ಹಬ್ಬವನ್ನು ಮೇ 30ರಂದು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಚಂಬಣ್ಣ ಬಾಳಿಕಾಯಿ ಹೇಳಿದರು.ಪಟ್ಟಣದ ಸುಭಾಷ ಓದುವವರು ಅವರ ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ಮಂಗಳವಾರ ಸಂಜೆ ನಡೆದ ಜಿ.ಎಸ್. ಗಡ್ಡದೇವರಮಠ ಅವರ ಹುಟ್ಟುಹಬ್ಬದ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.ಮಾಜಿ ಶಾಸಕ ಜಿ.ಎಸ್.ಗಡ್ಡದೇವರಮಠ ಅವರು ಸಮಾಜದಲ್ಲಿ ಸಲ್ಲಿಸಿರುವ ಸೇವೆ ಅನುಪಮವಾಗಿದೆ. ಶಿರಹಟ್ಟಿ ಮತಕ್ಷೇತ್ರದ ಶಾಸಕರಾಗಿ 2 ಬಾರಿ ಆಯ್ಕೆಯಾಗಿ ಗಡ್ಡದೇವರಮಠ ಅವರು ಸಲ್ಲಿಸಿರುವ ಗಣನೀಯವಾಗಿದೆ. ಶಾಸಕರಾದ ಅವಧಿಯಲ್ಲಿ ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ತಾಲೂಕಿನ ಅಭಿವೃದ್ಧಿಗೆ ಹೆಚ್ಚಿನ ಶ್ರಮ ವಹಿಸಿದ್ದಾರೆ. ಅವರ ಅವಧಿಯಲ್ಲಿ ಲಕ್ಷ್ಮೇಶ್ವರ ಪಟ್ಟಣಕ್ಕೆ ತುಂಗಭದ್ರಾ ನದಿಯ ಕುಡಿಯುವ ನೀರು ದೊರೆಯುವಂತೆ ಮಾಡಿದ್ದು ಪಟ್ಟಣದ ಅಭಿವೃದ್ಧಿಗೆ ಟಾನಿಕ್ ಆಗಿದೆ ಎಂದರೆ ತಪ್ಪಾಗಲಾರದು. ಜಿ.ಎಸ್.ಗಡ್ಡದೇವರಮಠ ಅವರು

ಸಮಾಜದ ಎಲ್ಲ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇದೇಮೇ 30ಕ್ಕೆ 75 ವರ್ಷ ತುಂಬಿದ್ದು ನಮಗೆಲ್ಲ ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.ಈ ಸುನೀಲ್ ಮಹಾಂತಶೆಟ್ಟರ, ಬಸವೇಶ ಮಹಾಂತಶೆಟ್ಟರ. ಬಸಣ್ಣ ಬೆಂಡಿಗೇರಿ, ಸೋಮಣ್ಣ ಉಪನಾಳ, ಮಹಾಬಲೇಶ್ವರಪ್ಪ ಬೇವಿನಮರದ, ಗಂಗಾಧರ ಮೆಣಸಿನಕಾಯಿ, ವಿ.ಜಿ. ಪಡಗೇರಿ, ಸಿ.ಆರ್. ಲಕ್ಕುಂಡಿಮಠ, ವಿಜಯ ಹತ್ತಿಕಾಳ, ಗುರುರಾಜ ಪಾಟೀಲ ಕುಲಕರ್ಣಿ, ಬಾ.ಪಿ.ಡಿ. ತೋಟದ, ಮಹೇಶ ಹೊಗೆಸೊಪ್ಪಿನ, ನಜೀರ್ ಅಹ್ಮದ್ ಗದಗ, ಸುಲೇಮಾನ್ ಸಾಬ್ ಕಣಿಕೆ, ಸಿ.ಜಿ. ಹಿರೇಮಠ, ನಿಂಗಪ್ಪ ಬನ್ನಿ, ನಾರಾಯಣಸಾ ಪವಾರ, ಶಿವಯೋಗಿ ಗಡ್ಡದೇವರಮಠ, ಈರಣ್ಣ ಅಂಕಲಕೋಟಿ, ವೆಂಕಟೇಶ ಮಾತಾಡೆ, ಎಂ.ಕೆ. ಕಳ್ಳಿಮಠ, ಎಂ.ಆರ್. ಪಾಟೀಲ ಸೇರಿದಂತೆ ಅನೇಕರು ಇದ್ದರು. ಈ ವೇಳೆ ಕಿರಣ್ ನವಲೆ ಕಾರ್ಯಕ್ರಮ ನಿರೂಪಿಸಿದರು. ಅಂಬರೀಶ್ ತೆಂಬದಮನಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ