- ಕುರುವ ಗ್ರಾಮದಲ್ಲಿ ಉತ್ಸವ, ನ್ಯಾಮತಿ ತಹಸೀಲ್ದಾರ್ ಭಾಗಿ
- - -ಹೊನ್ನಾಳಿ: ಪುರಾಣ ಪ್ರಸಿದ್ಧ ಕುರುವ ಶ್ರೀ ಕ್ಷೇತ್ರ ಗಡ್ಡೆ ರಾಮೇಶ್ವರ ಅದ್ಧೂರಿ ಬ್ರಹ್ಮ ರಥೋತ್ಸವ ಸೋಮವಾರ ಅತ್ಯಂತ ಅದ್ಧೂರಿಯಾಗಿ ಜರುಗಿತು.
ರಥೋತ್ಸವ ಸಂಬಂಧ ವಿವಿಧ ಧಾರ್ಮಿಕ ವಿಧಿವಿಧಾನಗಳು ಮಾ.30ದಿಂದ ಆರಂಭಗೊಂಡು ಏ.2ರವರೆಗೆ ಶಾಸ್ತ್ರೋಕ್ತವಾಗಿ ಜರುಗಲಿವೆ. ಭಾನುವಾರ ಪುಣ್ಯಾಹ ಪಂಚಾಮೃತ ಸಹಿತ ರುದ್ರಾಭೀಷೇಕ ಕಂಕಣಧಾರಣೆ ಮತ್ತು ಉಚ್ಚಾಯ ಕಾರ್ಯಕ್ರಮಗಳು ಪುರೋಹಿತ ವೃಂದ ನಡೆಸಿಕೊಟ್ಟಿತು. 31ರಂದು ಬೆಳಗ್ಗೆ ರಥಾದಿವಾಸ ಹೋಮ, ಬಲಿ ಹಾಗೂ ಬ್ರಹ್ಮರಥೋತ್ಸವ ನಡೆಯಿತು.ನ್ಯಾಮತಿ ತಾಲೂಕಿನ ತಹಸೀಲ್ದಾರ್ ಗೋವಿಂದಪ್ಪ, ಉಪ ತಹಸೀಲ್ದಾರ್ ಸಂತೋಷ್ ಹೋಮ ಮತ್ತು ರಥೋತ್ಸವದಲ್ಲಿ ಭಾಗವಹಿಸಿದ್ದರು. ಸಂಜೆ ಆಂಜನೇಯ ಸ್ವಾಮಿ ಹಿರೇಬಾಸೂರು ದೇವರ ಸಮ್ಮುಖದಲ್ಲಿ ಶ್ರೀ ಕುರುವ ಗಡ್ಡೆ ರಾಮೇಶ್ವರ ರಥೋತ್ಸವ, ಚಂದ್ರದರ್ಶನ ಕಾರ್ಯಕ್ರಮಗಳು ಸಂಪನ್ನಗೊಂಡವು.
ಸೋಮವಾರ ರಥೋತ್ಸವಕ್ಕೆ ನಾಡಿನ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದರು. ಸಾಮೂಹಿಕ ಅನ್ನ ಸಂತರ್ಪಣೆ ನಡೆಯಿತು. ಕುರುವ ಗಡ್ಡೆ ರಾಮೇಶ್ವರದ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ಕುರುವ ಗಡ್ಡೆ ರಾಮೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಸುರೇಶ್, ರಮೇಶಪ್ಪ, ಕುಮಾರ ಭಟ್ಟ, ತೀತಾರಾಮ ಭಟ್ಟ, ಧನ್ಯ, ರವಿಕುಮಾರ್ ಹಳ್ಳದಿಬ್ಬ, ಕುರುವ ಗ್ರಾಮದ ಮುಖಂಡರು, ಗೋವಿನಕೋವಿ, ರಾಂಪುರ ಗ್ರಾಮಸ್ಥರ ನೇತೃತ್ವದಲ್ಲಿ ಜರುಗಿದವು.ಇಂದು, ನಾಳಿನ ಕಾರ್ಯಕ್ರಮಗಳು:
ಏ.1ರಂದು ಮಂಗಳವಾರ ಬೆಳಗ್ಗೆ ಓಕಳಿ, ಸುತ್ತಮುತ್ತಲಿನ ಗ್ರಾಮಗಳ ಎಲ್ಲ ದೇವರುಗಳು ಕುರುವ ಗಡ್ಡೆ ರಾಮೇಶ್ವರ ದೇವಸ್ಥಾನಕ್ಕೆ ಆಗಮಿಸಿ, ಸಂಜೆ ರಾಂಪುರ ಬೃಹನ್ಮಠದ ಸದ್ಗುರು ಹಾಲಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ಕಾರ್ಣಿಕ, ಭವಿಷ್ಯವಾಣಿ, ರೊಟ್ಟಿ ಬುತ್ತಿ ಹಂಚಿಕೆ ಆಚರಣೆ ಜರುಗಲಿದೆ. ಏ.2ರಂದು ಕುರುವ ಗ್ರಾಮಸ್ಥರಿಂದ ಶ್ರೀ ದುರ್ಗಾದೇವಿಗೆ ಉಡಿಅಕ್ಕಿ ಸಮರ್ಪಣೆ ಮಾಡಲಾಗುತ್ತದೆ.- - -
-31ಎಚ್.ಎಲ್.ಐ1: