‘ಗದ್ದಿಗೆ’ ಕರಾವಳಿ ಮರಾಟಿ ಸಮಾವೇಶ ಸಮಾರೋಪ

KannadaprabhaNewsNetwork |  
Published : Nov 13, 2024, 12:05 AM ISTUpdated : Nov 13, 2024, 12:06 AM IST
32 | Kannada Prabha

ಸಾರಾಂಶ

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಕೆನರಾ ಬ್ಯಾಂಕ್‌ ನಿವೃತ್ತ ಅಧಿಕಾರಿ ರಾಮ ನಾಯ್ಕ ಹಾಗೂ ಡಾ. ಬಾಲಕೃಷ್ಣ ಸಿ.ಎಚ್. ಸಮಾರೋಪ ಭಾಷಣ ಮಾಡಿದರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಪುಸ್ತಕ ಓದಿ, ಜ್ಞಾನವಂತರಾಗಿ, ಶಿಕ್ಷಣ, ಉದ್ಯಮ, ಆಸ್ಪತ್ರೆಯಂತಹ ಸಂಸ್ಥೆಗಳನ್ನು ನಿರ್ಮಿಸಲು ಪ್ರಯತ್ನಿಸಿ. ಮೂಲ ಸಂಸ್ಕೃತಿಯ ಆಚಾರ ವಿಚಾರ ಮರೆಯದೆ ಕಾರ್ಯಾಗಾರದ ಮೂಲಕ ಅದನ್ನು ಬೆಳೆಸಿಕೊಂಡು ಹೋಗಿ. ಸಮಾಜದ ಸಂಘಟನೆಯಿಂದ ಮಾತ್ರ ಬೆಳೆಯಲು ಸಾಧ್ಯ. ಭಾಗವಹಿಸಿ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಗದ್ದಿಗೆ ಕರಾವಳಿ ಮರಾಟಿ ಸಮಾವೇಶ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಕೆನರಾ ಬ್ಯಾಂಕ್‌ ನಿವೃತ್ತ ಅಧಿಕಾರಿ ರಾಮ ನಾಯ್ಕ ಹಾಗೂ ಡಾ. ಬಾಲಕೃಷ್ಣ ಸಿ.ಎಚ್. ಸಮಾರೋಪ ಭಾಷಣ ಮಾಡಿದರು.

ರಾಷ್ಟ್ರಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಪ್ರಶಸ್ತಿ ಪಡೆದ ಕಾಸರಗೋಡಿನ ಪೊಲೀಸ್ ಅಧ್ಯಕ್ಷಕ ಹರಿಶ್ಚಂದ್ರ ನಾಯ್ಕ್, ರಿಸರ್ವ್ ಪೊಲೀಸ್ ಉಮೇಶ ನಾಯ್ಕ್, ಅಂತಾರಾಷ್ಟ್ರೀಯ ಯೋಗ ಪಟು ಪುತ್ತೂರಿನ ತೃಪ್ತಿ ಎನ್., ರಾಷ್ಟ್ರಮಟ್ಟದಲ್ಲಿ ಕಬಡ್ಡಿಯಲ್ಲಿ ಚಿನ್ನದ ಪದಕ ಪಡೆದ ಯಶಸ್ವಿನಿ ಆರ್.ಎಂ., ರಾಷ್ಟ್ರಮಟ್ಟದ ರಿಲೇ ಹಾಗೂ 5,000 ಮೀಟರ್ ಓಟದಲ್ಲಿ ಪದಕ ಪಡೆದ ಕಡಬದ ಕಾವೇರಿ, ಅಂತಾರಾಷ್ಟ್ರೀಯ ತ್ರೋಬಾಲ್ ಪಂದ್ಯಾಟದ ಸಾಧಕಿ, ತೀರ್ಪುಗಾರ್ತಿ ಕಾಸರಗೋಡಿನ ಯಶ್ವಿತಾ ಎಂ., ಅಂತಾರಾಷ್ಟ್ರೀಯ ಪವರ್ ಲಿಪ್ಟರ್ ಕಾಸರಗೋಡಿನ ವಿನುತಾ ಎಂ. ಅವರನ್ನು ಸನ್ಮಾನಿಸಲಾಯಿತು.ಸಮಾವೇಶದ ಅಧ್ಯಕ್ಷ ಜಮ್ಮು ಕಾಶ್ಮೀರ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಚ್. ರಾಜೇಂದ್ರ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕೊಪ್ಪ ಚಿಕ್ಕಮಗಳೂರಿನ ಕೆ.ವಿ. ಚಂದ್ರಶೇಖರ್, ಕೊಡಗಿನ ಪರಮೇಶ್ವರ್, ಶಿವಮೊಗ್ಗದ ರಾಮಚಂದ್ರ, ಕೇರಳದ ರಾಜಗೋಪಾಲ್, ಉಡುಪಿಯ ಪ್ರಭಾಕರ್, ಬೆಳ್ತಂಗಡಿಯ ಸತೀಶ್, ಹೆಬ್ರಿಯ ಸುಧಾಕರ್, ಪೆರ್ಲದ ಡಾ. ಶಿವ ನಾಯ್ಕ್, ಉದ್ಯಮಿ ಶ್ರೀಪತಿ ಭಟ್, ರಾಮಚಂದ್ರ ಕೆಂಬಾರೆ, ಪ್ರಕಾಶ್ ನಾಯ್ಕ್, ಡಾ. ಬಾಲಕೃಷ್ಣ ಸಿ ಎಚ್, ಡಾ. ಸುಂದರ್ ನಾಯ್ಕ್ ಹಾಜರಿದ್ದರು. ಅಶೋಕ್ ನಾಯ್ಕ್ ಕೆದಿಲ ಸ್ವಾಗತಿಸಿದರು. ಸತೀಶ್ ನಾಯ್ಕ್ ವಂದಿಸಿದರು.ಪ್ರಥಮ ಗೋಷ್ಠಿಯಲ್ಲಿ ಡಾ. ಮೋಹನ್ ಆಳ್ವ ಶಿಕ್ಷಣ ಮತ್ತು ಯುವಜನತೆಯ ಬಗ್ಗೆ ವಿಚಾರ ಮಂಡಿಸಿದರು. ಎರಡನೇ ಗೋಷ್ಠಿಯಲ್ಲಿ ಪುತ್ತೂರಿನ ನೋಟರಿ ಎನ್.ಎಸ್. ಮಂಜುನಾಥ್ ಮರಾಟಿಗರ ಆಚಾರ ವಿಚಾರ ಮತ್ತು ಸಂಸ್ಕಾರದ ಬಗ್ಗೆ ವಿಷಯ ಮಂಡಿಸಿದರು. ಉಪನ್ಯಾಸದಲ್ಲಿ ಶಂಕರನಾರಾಯಣದ ದೈಹಿಕ ಶಿಕ್ಷಕಿ ರತಿ ಪ್ರಭಾಕರ್ ನಾಯ್ಕ್, ಮರಾಟಿ ಭಾಷೆ ಉಳಿಸಿ ಬೆಳೆಸುವ ಬಗ್ಗೆ ಚರ್ಚಿಸಿದರು. ಮೂರನೇ ಗೋಷ್ಠಿಯಲ್ಲಿ ಉಚ್ಚ ನ್ಯಾಯಾಲಯದ ನ್ಯಾಯವಾದಿ ಪ್ರವೀಣ್ ಕುಮಾರ್ ಮುಗುಳಿ, ಮರಾಟಿಗರ ಸಮಸ್ಯೆ ಮತ್ತು ಸವಾಲುಗಳ ಬಗ್ಗೆ ವಾದ ಮಂಡಿಸಿದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...