ಸಚಿವ ಜಮೀರ್ ಅಹಮದ್ ಪಕ್ಷದಿಂದ ಉಚ್ಛಾಟಿಸಿ, ಗಡಿಪಾರಿಗೆ ಆಗ್ರಹ

KannadaprabhaNewsNetwork |  
Published : Nov 13, 2024, 12:05 AM IST
74 | Kannada Prabha

ಸಾರಾಂಶ

ಈತ ಒಂದೊಂದು ರು. ಗಳನ್ನು ಪ್ರತಿ ಮುಸ್ಲಿಂರಿಂದ ವಸೂಲು ಮಾಡಿ ಕುಮಾರಸ್ವಾಮಿ ಕುಟುಂಬವನ್ನು ಕೊಂಡುಕೊಳ್ಳುತ್ತೇನೆ ಎನ್ನುವಂತ ಬಹಿರಂಗ ಹೇಳಿಕೆಯನ್ನು ಚನ್ನಪಟ್ಟಣ ಚುನಾವಣಾ ಪ್ರಚಾರದಲ್ಲಿ ನೀಡುವ ಮೂಲಕ ತನ್ನ ಕೊಳಕು ಬುದ್ದಿಯನ್ನು, ತಾನು ತಿಂದು ಬೆಳೆದ ಮನೆಯ ವಿರುದ್ದವೇ ಮಾಡಿದ್ದಾನೆ.

ಕನ್ನಡಪ್ರಭ ವಾರ್ತೆ ಬನ್ನೂರು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಸಚಿವ ಜಮೀರ್ ಅಹಮದ್ ಅವರನ್ನು ಪಕ್ಷದಿಂದಲೇ ಉಚ್ಛಾಟನೆ ಮಾಡಿ, ಗಡಿಪಾರು ಮಾಡಬೇಕು ಎಂದು ಪುರಸಭಾ ಅಧ್ಯಕ್ಷ ಕೃಷ್ಣೇಗೌಡ ಆಗ್ರಹಿಸಿದರು.ಪಟ್ಟಣದ ಸಂತೆಮಳದಲ್ಲಿ ಮಂಗಳವಾರ ಸಂಜೆ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ದವಾಗಿ ಅವಹೇಳನಕಾರಿ ಹೇಳಿಕೆ ನೀಡಿರುವ ಸಚಿವ ಜಮೀರ್ ಅಹಮದ್ ಖಾನ್ ವಿರುದ್ದವಾಗಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟನೆ ನಡೆಸಿ, ಸಚಿವ ಜಮೀರ್ ಅಹಮದ್ ಖಾನ್ ಪ್ರತಿಕೃತಿ ದಹನ ಮಾಡಿದ ನಂತರ ಅವರು ಮಾತನಾಡಿದರು.ಈತ ಒಂದೊಂದು ರು. ಗಳನ್ನು ಪ್ರತಿ ಮುಸ್ಲಿಂರಿಂದ ವಸೂಲು ಮಾಡಿ ಕುಮಾರಸ್ವಾಮಿ ಕುಟುಂಬವನ್ನು ಕೊಂಡುಕೊಳ್ಳುತ್ತೇನೆ ಎನ್ನುವಂತ ಬಹಿರಂಗ ಹೇಳಿಕೆಯನ್ನು ಚನ್ನಪಟ್ಟಣ ಚುನಾವಣಾ ಪ್ರಚಾರದಲ್ಲಿ ನೀಡುವ ಮೂಲಕ ತನ್ನ ಕೊಳಕು ಬುದ್ದಿಯನ್ನು, ತಾನು ತಿಂದು ಬೆಳೆದ ಮನೆಯ ವಿರುದ್ದವೇ ಮಾಡಿದ್ದಾನೆ. ರಾಜ್ಯದ ಮಾಜಿ ಮುಖ್ಯಮಂತ್ರಿ ವಿರುದ್ದವಾಗಿ ಈ ತರಹದ ಅವಹೇಳನಕಾರಿ ಮಾತುಗಳನ್ನು ಆಡುತ್ತಾನೆ ಎಂದರೆ ಇದಕ್ಕೆ ತಕ್ಕ ಉತ್ತರನ್ನು ಕನ್ನಡನಾಡಿನ ಜನತೆ ನೀಡಲಿದೆ ಎಂದು ತಿಳಿಸಿದರು. ಕೂಡಲೇ ಇತನನ್ನು ಗಡಿಪಾರು ಮಾಡಿ ಈತನ ವಿರುದ್ದ ಕೇಸ್ ದಾಖಲಿಸಬೇಕು ಎಂದು ಅವರು ಆಗ್ರಹಿಸಿದರು.ಜೆಡಿಎಸ್ ಮುಖಂಡ ವೈ.ಎಸ್. ರಾಮಸ್ವಾಮಿ, ಜಯರಾಮ, ನಿಖಿಲ್, ನಾರಾಯಣಸ್ವಾಮಿ, ಚಿಕ್ಕಿರೆಗೌಡ, ದೇವರಾಜು, ರಾಮಚಂದ್ರ, ಮಾಯೀಗೌಡ, ಕಾಳೇಗೌಡ, ಹೋಬಳಿ ಜೆಡಿಎಸ್ ಅಧ್ಯಕ್ಷ ಕುಮಾರ್, ತಾಲೂಕು ಜೆಡಿಎಸ್ ಅಧ್ಯಕ್ಷ ಚಿನ್ನಸ್ವಾಮಿ, ಜಯರಾಮೇಗೌಡ, ಚಂದ್ರು, ಮುರಳಿ, ಸೌಮ್ಯರಾಣಿ, ಶೋಭಸತೀಶ್, ಬಸವನಹಳ್ಳಿ ರಾಜು, ವೆಂಕಟೇಶ್, ಯಾಚೇನಹಳ್ಳಿ ನವೀನ್, ಮಹೇಶ್, ನಾಗೇಂದ್ರಕುಮಾರ್, ಸಿದ್ದೇಗೌಡ, ಪೈ. ವೆಂಕಟೇಶ್, ನಿಂಗಪ್ಪ, ಬೆಟ್ಟಳ್ಳಿ ದೇವರಾಜು ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...