ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಾಗಲಕೋಟೆ ಲೋಕಸಭೆಗೆ ಈ ಹಿಂದೆ ಕಾಂಗ್ರೆಸ್ಸಿನ ಎಸ್.ಬಿ. ಪಾಟೀಲ ಸುನಗ ಅವರು ನಾಲ್ಕು ಬಾರಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿ 1980ರಲ್ಲಿ ವಿರೇಂದ್ರ ಪಾಟೀಲರಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದರು. ನಾಲ್ಕು ಬಾರಿ ಆಯ್ಕೆ ದಾಖಲೆಯಾಗಿತ್ತು. ಆದರೆ ಪಿ.ಸಿಗದ್ದಿಗೌಡರ 2004, 2008, 2014, 2019 ಮತ್ತು 2024ರ ಚುನಾವಣೆಯಲ್ಲಿ ಐದು ಬಾರಿ ಗೆಲುವು ಕಂಡು ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಮಹಿಳೆಯರಿಗೆ ಒಲಿಯದ ಕ್ಷೇತ್ರ: 1967ರಿಂದಲೂ ಬಾಗಲಕೋಟೆ ಮತಕ್ಷೇತ್ರದಲ್ಲಿ ಮಹಿಳೆಯರು ಸಂಸದರಾಗಿ ಆಯ್ಕೆಯಾಗಿಲ್ಲ. 2019ರಲ್ಲಿ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿ ಗದ್ದಿಗೌಡರ ಎದುರು ಸೋಲು ಕಂಡಿದ್ದ ವೀಣಾ ಕಾಶಪ್ಪನವರ ಮತ್ತು ಈ ಬಾರಿ ಅದೇ ಪಕ್ಷದಿಂದ ಸ್ಪರ್ಧಿಸಿ ಸೋಲು ಕಂಡವರು ಸಂಯುಕ್ತಾ ಪಾಟೀಲ.