ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಸ್ಥಳೀಯ ಸರ್ಕಾರಿ ಪ್ರೌಢಶಾಲೆಯಲ್ಲಿ ಅಕ್ಕಮಹಾದೇವಿ ಗವಿಯ ಬಸವಕಲ್ಯಾಣದ ಕಲ್ಯಾಣಮ್ಮ ಶರಣಿಯರ ಶಾಲಾ ಶತಮಾನೋತ್ಸವ ಕಾರ್ಯಕ್ರಮ ಹಾಗೂ ಬಸವಕಲ್ಯಾಣ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ದಿನದರ್ಶಿಕೆ ಬಿಡುಗಡೆ ಮಾಡಿ ಮಾತನಾಡಿದರು.
ಬಸವಣ್ಣನವರು ಸದ್ವಿನಯವೇ ಸದಾಶಿವನ ಒಲುಮೆಯಾಗಿದೆ ಎಂದಿದ್ದಾರೆ. ಜಾತಿ, ಧರ್ಮ ಭೇಧ ಭಾವ ಮಾಡದೆ ಮನುಷ್ಯರೆಲ್ಲರು ದೇವರ ಮಕ್ಕಳು. ದೇವನೊಬ್ಬ ನಾಮ ಹಲವು. ಆಚಾರವೇ ಸ್ವರ್ಗ ಅನಾಚಾರವೆ ನರಕ ಹೀಗೆಯೇ ಮುಂತಾದ ಮೌಲಿಕ ವಚನಗಳು ಬರೆಯುವ ಮುಖಾಂತರ ವಿಶ್ವ ಕುಟುಂಬಿಯಾಗಿ ಬಾಳಲು ಶರಣರು ಮಾರ್ಗದರ್ಶನ ಮಾಡಿದ್ದಾರೆ ಎಂದ ಅವರು, ಕರ್ನಾಟಕದ ಸಿದ್ದರಾಮಯ್ಯ ಸರ್ಕಾರ ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನೆಂದು ಘೋಷಿಸಿದ್ದು ಸ್ವಾಗತಾರ್ಹ ಎಂದರು.ವಚನ ಚಾರಿಟೇಬಲ್ ಟ್ರಸ್ಟಿನ ವೀರಶೆಟ್ಟಿ ಮಲಶೆಟ್ಟಿ ಅವರು ಮಾತನಾಡಿ, ಶಾಲಾ, ಕಾಲೇಜುಗಳಲ್ಲಿ ಮಕ್ಕಳಿಗೆ ನೈತಿಕ ಶಿಕ್ಷಣದ ಪಾಠವನ್ನು ಕಳೆದ ೨ ವರ್ಷಗಳಿಂದ ಕಲ್ಯಾಣಮ್ಮ ತಾಯಿಯವರು ಹೇಳುತ್ತ ಬಂದಿರುವುದು ಶ್ಲಾಘನೀಯ ಕೆಲಸವಾಗಿದೆ ಬಸವಣ್ಣನವರ ತತ್ವಗಳಲ್ಲಿ ಹಾಡು ಮತ್ತು ಪ್ರವಚನಗಳ ಮುಖಾಂತರ ನೂರು ಶಾಲೆಗಳಲ್ಲಿ ಸಂಚರಿಸಿ ಮಕ್ಕಳ ಮನಸ್ಸಿನಲ್ಲಿ ಒಳ್ಳೆಯ ವಿಚಾರವನ್ನು ಬಿತ್ತುತ್ತಿರುವುದು ಅಭಿನಂದನೆಯ ಕೆಲಸವಾಗಿದೆ. ಇವರ ಜೊತೆಯಲ್ಲಿ ಬ್ರಹ್ಮಕುಮಾರಿ ಈಶ್ವರಿ ಮಹಾವಿದ್ಯಾಲಯದ ಚಿತ್ರಲೇಖಾ ಪಾಟೀಲ್ ಅವರು ಕೈ ಜೋಡಿಸಿ ತಾಲೂಕಿನಲ್ಲಿ ಒಳ್ಳೆಯ ಕಾರ್ಯ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಅಪ್ಪಣ್ಣ ಭಂಡಾರಿ ಸ್ವಾಗತಿಸಿ ವಿನೋದ ರಾಠೋಡ ನಿರೂಪಿಸಿದರೆ ರಜನಿಕಾಂತ ವಂದಿಸಿದರು.