ಕುವೆಂಪು ಜನ್ಮದಿನ ಅಂಗವಾಗಿ ಡಿ.24 ರಿಂದ 29ರವರೆಗೆ ಗಮಕ ವ್ಯಾಖ್ಯಾನ: ಜಯಪ್ರಕಾಶ್ ಗೌಡ

KannadaprabhaNewsNetwork |  
Published : Dec 24, 2024, 12:50 AM IST
23ಕೆಎಂಎನ್ ಡಿ25 | Kannada Prabha

ಸಾರಾಂಶ

ಕರ್ನಾಟಕ ಸಂಘದ ಮತ್ತು ಎಂ.ಎಲ್.ಶ್ರೀಕಂಠೇಶಗೌಡ ಸಂಶೋಧನಾ ಕೇಂದ್ರದಿಂದ ರಾಷ್ಟ್ರಕವಿ ಕುವೆಂಪು ಅವರನ್ನು ನೆನೆಯುವ ಸಲುವಾಗಿ ಶ್ರೀರಾಮಾಯಣ ದರ್ಶನಂ ಆಧಾರಿತ ಗಮಕ-ವ್ಯಾಖ್ಯಾನ ಕಾರ್ಯಕ್ರಮವು ಸಂಜೆ 4.30ಕ್ಕೆ ನಡೆಯಲಿದೆ. ಕಾರ್ಯಕ್ರಮವನ್ನು ಪ್ರಸಿದ್ಧ ಗಮಕಿ ಎಂ.ಆರ್.ಸತ್ಯನಾರಾಯಣ ಉದ್ಘಾಟಿಸುವರು, ಪಿಇಎಸ್ ಕಾಜೇಜಿನ ಸಹ ಪ್ರಾಧ್ಯಾಪಕ ಡಾ.ಶ್ರೀನಿವಾಸಯ್ಯ ಎನ್.ವೈ ಅಧ್ಯಕ್ಷತೆ ವಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ಡಿ.24ರಿಂದ 29ರವರೆಗೆ ಗಮಕ ವ್ಯಾಖ್ಯಾನ ಕಾರ್ಯಕ್ರಮವನ್ನು ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂಧು ಸಂಘದ ಅಧ್ಯಕ್ಷ ಜಯಪ್ರಕಾಶ್‌ಗೌಡ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಸಂಘದ ಮತ್ತು ಎಂ.ಎಲ್.ಶ್ರೀಕಂಠೇಶಗೌಡ ಸಂಶೋಧನಾ ಕೇಂದ್ರದಿಂದ ರಾಷ್ಟ್ರಕವಿ ಕುವೆಂಪು ಅವರನ್ನು ನೆನೆಯುವ ಸಲುವಾಗಿ ಶ್ರೀರಾಮಾಯಣ ದರ್ಶನಂ ಆಧಾರಿತ ಗಮಕ-ವ್ಯಾಖ್ಯಾನ ಕಾರ್ಯಕ್ರಮವು ಸಂಜೆ 4.30ಕ್ಕೆ ನಡೆಯಲಿದೆ. ಕಾರ್ಯಕ್ರಮವನ್ನು ಪ್ರಸಿದ್ಧ ಗಮಕಿ ಎಂ.ಆರ್.ಸತ್ಯನಾರಾಯಣ ಉದ್ಘಾಟಿಸುವರು, ಪಿಇಎಸ್ ಕಾಜೇಜಿನ ಸಹ ಪ್ರಾಧ್ಯಾಪಕ ಡಾ.ಶ್ರೀನಿವಾಸಯ್ಯ ಎನ್.ವೈ ಅಧ್ಯಕ್ಷತೆ ವಹಿಸಿದ್ದಾರೆ ಎಂದರು.

ಡಿ.24ರಿಂದ 28ರವರೆಗೆ ಪ್ರತಿದಿನ ಸಂಜೆ 5.30ರಿಂದ 7ರ ವರೆಗೆ ಗಮಕ ವಾಚನ- ವ್ಯಾಖ್ಯಾನ ನೆರವೇರಲಿದೆ. ಡಿ.24ಕ್ಕೆ ಮಮತೆಯ ಸುಳಿ ಮಂಥರೆಯ ಕಾವ್ಯಭಾಗ, ಡಿ.25ರಂದು ನಾನಕ್ಕನೆನ್ ನಿನಗೆ, ತಂಗಿಯ ಕಾವ್ಯಭಾಗ, ಡಿ.26ರಂದು ವನಮಂಪೊಕ್ಕನಶೋಕಮಂ ಕಾವ್ಯಭಾಗ, ಡಿ.27ರಂದು ಕುಂಬಕರ್ಣನನೆಬ್ಬಿಸಿಮ್ ಕಾವ್ಯಭಾಗ, ಡಿ.28ರಂದು ಕರ್ನಾಟಕ ಸಂಘದ ಸಂಸ್ಥಾಪಕರಲ್ಲೊಬ್ಬರಾದ ಚಿ.ನಾ.ವಿಶ್ವನಾಥಶಾಸ್ತ್ರಿಗಳ ಸ್ಮರಣಾರ್ಥ ಗಮಕ ಕಲಾ ಪ್ರತಿಷ್ಠಾನದ ಸದಸ್ಯರಾದ ಶ್ರೀಮತಿ ಮತ್ತು ವಾಗ್ದೇವಿ ಅವರಿಂದ ಕಾವ್ಯಮೋದ ಗಮಕ ವಾಚನ ಮತ್ತು ವ್ಯಾಖ್ಯಾನ ನಡೆಯಲಿದೆ ಎಂದು ವಿವರಿಸಿದರು.

ಡಿ.29ರಂದು ಬೆಳಗ್ಗೆ 10 ಗಂಟೆಗೆ ಕುವೆಂಪು ಜನ್ಮೋತ್ಸವ ಆಚರಣೆ ಅಂಗವಾಗಿ ಕವಿಗೋಷ್ಠಿ ನಡೆಯಲಿದೆ. ಸಾಹಿತಿಗಳು ಮತ್ತು ಸಂಸ್ಕೃತಿ ಚಿಂತಕರಾದ ಪ್ರೊ.ಮೈಸೂರು ಕೃಷ್ಣಮೂರ್ತೀ ಉದ್ಘಾಟಿಸುವರು, ಅತಿಥಿಗಳಾಗಿ ವಿಮರ್ಶಕ ರೋಹಿತ್ ಅಗಸರಹಳ್ಳಿ, ಡಾ.ಭಾಸ್ಕರ್ ಮಾಳ್ವ, ಸಾವೆರಾ ಸ್ವಾಮಿ, ಬಲ್ಲೇನಹಳ್ಳಿ ಮಂಜುನಾಥ್, ಭವಾನಿ ಲೋಕೇಶ್, ಸತೀಶ್ ಜವರೇಗೌಡ, ದೊ.ಚಿ.ಗೌಡ, ಡಾ.ಸುಮಾರಾಣಿ ಶಂಭು, ಡಾ.ಶುಭಶ್ರೀ ಪ್ರಸಾದ್, ಸಬ್ಬನಹಳ್ಳಿ ಶಶಿಧರ್, ಡಾ.ಎಂ.ಎಸ್.ಅನಿತ ಸೇರಿದಂತೆ ಹಲವು ಕವಿಗಳು ಭಾಗವಹಿಸುವರು ಎಂದರು.

ಮಧ್ಯಾಹ್ನ 2ರಿಂದ 3ರವರೆಗೆ ಪ್ರಸಿದ್ದ ವಿಮರ್ಷಕ ಡಾ.ನರರಹಳ್ಳಿ ಬಾಲಸುಬ್ರಹ್ಮಣ್ಯರಿಂದ ಕುವೆಂಪು ಸಾಹಿತ್ಯ ಕುರಿತು ವಿಶೇಷ ಉಪನ್ಯಾಸ ಮತ್ತು ಕುವೆಂಪು:ಯುವ ನೋಟ ಪುಸ್ತಕ ಬಿಡುಗಡೆ ನಡೆಯಲಿದೆ ಎಂದರು.

ಮಧ್ಯಾಹ್ನ 3.15ಕ್ಕೆ ಎರಡನೇ ಕವಿಗೋಷ್ಠಿ ನಡೆಯಲಿದೆ. ಡಾ.ಪ್ರದೀಪ್‌ಕುಮಾರ್ ಹೆಬ್ರಿ, ನಿ.ಗೂ.ರಮೇಶ್, ಡಾ.ಗುಬ್ಬಿಗೂಡು ರಮೇಶ್, ಡಾ.ಕೆ.ಚಂದ್ರಶೇಖರ, ಡಾ.ಬೆಳ್ಳೂರು ವೆಂಕಟಪ್ಪ, ಡಾ.ಬ್ಯಾಡರಹಳ್ಳಿ ಶಿವರಾಜ್, ರಾಮಚಂದ್ರಪ್ಪ ಡಿ.ಆರ್, ಸೇರಿದಂತೆ ಇತರ ಕವಿಗಳು ಭಾಗವಹಿಸುವರು. ಕುವೆಂಪು ಸಾಹಿತ್ಯದಲ್ಲಿ ಸ್ರೀಯರ ಅಸ್ಮಿತೆ ಕುರಿತು ಸಂಘೋಧನಾ ವಿದ್ಯಾರ್ಥಿ ಎಸ್.ಬಿ.ತೇಜ ಅವರಿಂದ ಉಪನ್ಯಾಸ ನಡೆಯಲಿದೆ. ತದನಂತರ ಮೈಸೂರಿನ ಸಾಮಾಜಿಕ ಅರಣ್ಯದ ಉಪಅರಣ್ಯ ಸಂರಕ್ಷಣಾಧಿಕಾರಿ ಶಂಕರೇಗೌಡ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಕವಿಗಳು, ಚಿಂತಕರು ಆದ ಡಾ.ರಾಗೌ ಸಮಾರೋಪ ಭಾಷಣ ಮಾಡುವುರು ಎಂದು ಮಾಹಿತಿ ನೀಡಿದರು.

ಡಿ.25ರಂದು ಪ್ರಶಸ್ತಿ ಪ್ರದಾನ ಸಮಾರಂಭ:

ಡಿ.25ರ ಬೆಳಗ್ಗೆ 11 ಗಂಟೆಗೆ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ವಿವಿಧ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಜಲಸಾರಿಗೆ ನಿಗಮದ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಯರಾಮ್ ರಾಯಪುರ ಪ್ರಶಸ್ತಿ ಪ್ರದಾನ ಮಾಡುವರು. ನಿರೂಪಕಿ ಮತ್ತು ಲೇಖಕಿ ಭವಾನಿ ಲೋಕೇಶ್ ಅಭಿನಂದನಾ ನುಡಿಗಳನ್ನಾಡುವರು. ಡಾ.ಮ.ರಾಮಕೃಷ್ನ, ಪ್ರೊ.ಜಯಪ್ರಕಾಶ ಮಾವಿನಕುಳಿ, ಡಾ.ಎಂ.ಎನ್.ತಿಮ್ಮೇಗೌಡ, ಸೊಂದಲಗೆರೆ ಲಕ್ಷ್ಮೀಪತಿ, ಎಸ್.ಬಿ.ರಾಜೇಗೌಡ, ಡಾ.ಎಸ್.ಸುಹಾಸಿನಿ, ಬಿ.ಟಿ.ಚಂದ್ರಕಾಂತ ಪ್ರಶಸ್ತಿ ಸ್ವೀಕರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ನಿರ್ದೇಶಕರಾಗದ ಸೋಮಶೇಖರ್, ನಾಗಪ್ಪ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ 33 ಹಳ್ಳಿಗಳಲ್ಲಿ ಪ್ರತಿ ದಿನ ಸಂಜೆ 7- 9 ಗಂಟೆವರೆಗೆ ಮೊಬೈಲ್‌, ಟಿವಿ ಬಂದ್‌
ಗೃಹಲಕ್ಷ್ಮೀಯರಿಗೆ ಗುಡ್ ನ್ಯೂಸ್ ಕೊಟ್ರು ಸಚಿವೆ ಲಕ್ಷ್ಮೀ