ಕನ್ನಡಪ್ರಭ ವಾರ್ತೆ ಮೈಸೂರು
ಸಂಗೀತ ಶಿಕ್ಷಕಿ ವಿದುಷಿ ಆರ್. ಲಲಿತಾ ಉದ್ಘಾಟಿಸಿದರು. ಮುಖ್ಯಅತಿಥಿಯಾಗಿ ಸಂಗೀತ ಶಿಕ್ಷಕಿ ವಿದುಷಿ ಸುಬ್ಬಲಕ್ಷ್ಮಿ ಭಾಗವಹಿಸಿದ್ದರು. ವಿಶೇಷ ಆಹ್ವಾನಿತರಾಗಿ ಸಂಗೀತ ಶಿಕ್ಷಕಿ ವಿದುಷಿ ವಿಜಯಲಕ್ಷ್ಮಿ ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಸ್ವರಾಲಯ ಸಂಗೀತ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷೆ ಹಾಗೂ ಸಂಗೀತ ಶಿಕ್ಷಕಿ ವಿದುಷಿ ಸುಮಾ ಹರಿನಾಥ್ ವಹಿಸಿದ್ದರು.
ಮೈಸೂರಿನ ನಾದವಿದ್ಯಾಲಯ ಅಕಾಡೆಮಿ ಆಫ್ ಮ್ಯೂಸಿಕ್ ಅಂಡ್ ಡ್ಯಾನ್ಸ್‌ನ ಸಂಸ್ಥಾಪಕ ಅಧ್ಯಕ್ಷ ವಿದ್ವಾನ್ ನವೀನ್ ಎಂ.ಎಸ್. ಅಂದಗಾರ್ ಅವರನ್ನು ಸನ್ಮಾನಿಸಲಾಯಿತು.ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಚಾಮರಾಜನಗರ ಶ್ರೀ ಶಾರದಾ ನೃತ್ಯ ಕಲಾಶಾಲೆಯ ನಾಟ್ಯ ವಿದ್ವಾನ್ ವಿ. ಮಹೇಶ್ ಮತ್ತು ತಂಡದವರಿಂದ ನೃತ್ಯ ಸಂಭ್ರಮ ಸಭಿಕರ ಕಣ್ಮನ ಸೆಳೆಯಿತು. ತದ ನಂತರ ದಾಸರ ಪದಗಳ ಗಾಯನವನ್ನು ವಿದುಷಿ ಪದ್ಮ ಅವರ ನಿರ್ದೇಶನದಲ್ಲಿ ವಿ. ಸುಕೃತಿ ಮತ್ತು ವೃಂದದವರಿಂದ ಪ್ರಸ್ತುತಪಡಿಸಲಾಯಿತು. ಪಿಟೀಲಿನಲ್ಲಿ ವಿದ್ವಾನ್ ಎಂ.ಆರ್. ಶ್ರೀಕಾಂತ್, ಮೃದಂಗದಲ್ಲಿ ವಿದ್ವಾನ್ ಎಂ.ಆರ್. ಉದಯಕುಮಾರ್ ಸಹಕಾರ ನೀಡಿದರು.