ವಿದ್ಯಾ ಗಣಪತಿ ಮಂಡಳಿಯಿಂದ 62ನೇ ವರ್ಷದ ಉತ್ಸವ । ಈ ಬಾರಿಯೂ ವಿಜೃಂಭಣೆಯಿಂದ ನಡೆಯಲಿ ಎಂದ ಡಿಸಿ ಶಿಲ್ಪಾನಾಗ್
ಕನ್ನಡಪ್ರಭ ವಾರ್ತೆ ಚಾಮರಾಜನಗರನಗರದ ರಥಬೀದಿಯಲ್ಲಿ ವಿದ್ಯಾ ಗಣಪತಿ ಮಂಡಳಿ ವತಿಯಿಂದ 62ನೇ ವರ್ಷದ ಶ್ರೀ ಅಯೋಧ್ಯಾ ಗಣಪತಿಮೂರ್ತಿ ಪ್ರತಿಷ್ಠಾಪಿಸಲಾಯಿತು.
ರಾಮಸಮುದ್ರದಲ್ಲಿ ತಯಾರಿಸಿದ ಶ್ರೀಅಯೋಧ್ಯಾ ಗಣಪತಿಮೂರ್ತಿಯನ್ನು ನಗರದ ರಥಬೀದಿಯಲ್ಲಿ ಸಿದ್ದಪಡಿಸಲಾಗಿದ್ದ ವೇದಿಕೆಗೆ ತಂದು ಶನಿವಾರ ಬೆಳಿಗ್ಗೆ 11.40ಕ್ಕೆ ಪೂಜೆ ಸಲ್ಲಿಸಿ ಪ್ರತಿಷ್ಠಾಪಿಸಲಾಯಿತು. ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ಶ್ರೀ ವಿದ್ಯಾಗಣಪತಿ ಮಂಡಳಿ ವತಿಯಿಂದ ಗೌರಿ-ಗಣೇಶ ಹಬ್ಬದ ಪ್ರಯುಕ್ತ ನಗರದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನಾ ಪೂಜಾ ಕಾರ್ಯಕ್ರಮ ಹಲವಾರು ವರ್ಷಗಳಿಂದ ಸೌಹಾರ್ದಯು ರೀತಿ ನಡೆದುಕೊಂಡು ಬಂದಿದೆ. ಈ ವರ್ಷವೂ ಕೂಡ ವಿಜೃಂಭಣೆಯಿಂದ ಭಕ್ತಿಪೂರ್ವಕವಾಗಿ ನಡೆಯಲಿ ಎಂದು ಆಶಿಸಿ ಎಲ್ಲರಿಗೂ ಗೌರಿ-ಗಣೇಶ ಹಬ್ವದ ಶುಭಾಶಯ ಕೋರಿದರು.ಈ ಸಂದರ್ಭದಲ್ಲಿ ಮಂಡಳಿ ಅಧ್ಯಕ್ಷ ಸುಂದರರಾಜ್ ಮಾತನಾಡಿ, ಗೌರಿ-ಗಣೇಶ ಹಬ್ಬವನ್ನು ನಾಡಿನ ಸಂಸ್ಕೃತಿ, ಭಾವೈಕ್ಯತೆ ಪ್ರತೀಕವಾಗಿ ಆಚರಿಸಲಾಗುತ್ತಿದೆ. ವಿದ್ಯಾ ಗಣಪತಿ ಮಂಡಳಿ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯು ನಗರದ ಎಲ್ಲ ಕೋಮಿನ ಮುಖಂಡರ ಸಹಕಾರದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆಯಂತೆ ಈ ವರ್ಷವೂ ವಿಶೇಷವಾಗಿ ಶ್ರೀ ಅಯೋಧ್ಯಾ ಗಣಪತಿಮೂರ್ತಿ ಪ್ರತಿಷ್ಠಾಪಿಸಲಾಗಿದ್ದು,7 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಸುಮಾರು 27 ದಿನಗಳವರಗೆ ಪೂಜೆ ಸಲ್ಲಿಸಲಾಗುವುದು. ತದ ನಂತರ ಗಣೇಶಮೂರ್ತಿ ವಿಸರ್ಜನೆ ದಿನಾಂಕ ನಿಗದಿಪಡಿಸಲಾಗುವುದು ಎಂದು ಹೇಳಿದರು.
ಪೂಜಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ.ಕವಿತಾ, ಮುಸ್ಲಿಂ ಧರ್ಮದ ಗುರುಗಳು, ಮುಖಂಡರು, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಮೂಡ್ಲಪುರನಂದೀಶ್, ನಗರಸಭಾ ಮಾಜಿ ಅಧ್ಯಕ್ಷ ಸಿ.ಎಸ್.ಸುರೇಶ್ ನಾಯಕ, ಸದಸ್ಯ ಸುದರ್ಶನ್ ಗೌಡ, ಮಾಜಿ ಸದಸ್ಯ ಗಣೇಶ ದೀಕ್ಷಿತ್, ಮಂಜುನಾಥ್ ಗೌಡ, ಬಾಲಸುಬ್ರಹ್ಮಣ್ಯ, ನಿಜಗುಣರಾಜು, ಶ್ರೀ ವಿದ್ಯಾಗಣಪತಿ ಮಂಡಳಿ ಪ್ರಧಾನ ಕಾರ್ಯದರ್ಶಿಗಳಾದ ವಿರಾಟ್ ಶಿವು, ಮಹೇಶ್, ಕಾರ್ಯಾಧ್ಯಕ್ಷ ಶಿವಣ್ಣ, ಬುಲೆಟ್ ಚಂದ್ರು ಪಿ.ವೃಷಬೇಂದ್ರಪ್ಪ, ಮೂಡ್ನಾಕೂಡು ಪ್ರಕಾಶ್, ಪ್ರವೀಣ್, ಬಂಗಾರನಾಯಕ, ಶಾಂತಮೂರ್ತಿ ಕುಲಗಾಣ ಮಹೇಶ್, ಕೃಷ್ಣ, ಬಂಗಾರನಾಯಕ, ಸಿ.ವಿ.ಮಣಿಕಂಠ, ಬಲವೀರ್ ಸಿಂಗ್, ಹೇಮಂತ್, ಕಾರ್ತಿಕ್, ನಾಗೇಂದ್ರ ಬಾಬು ಶಂಕರ್, ರಾಘವೇಂದ್ರ, ವೀರೇಂದ್ರ, ರಾಮು, ರಮೇಶ್, ನವೀನ್, ಮಾರ್ಕೇಟ್ ಕುಮಾರ್, ಇತರರು ಹಾಜರಿದ್ದರು.