ಅಂಬಳೆ ವೀರಭದ್ರನಾಯಕಕನ್ನಡಪ್ರಭ ವಾರ್ತೆ ಯಳಂದೂರು
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಅಂಬಳೆ ಗ್ರಾಪಂ ವ್ಯಾಪ್ತಿಗೆ ಒಳಪಡುವ ವೈ.ಕೆ. ಮೋಳೆ, ಚಂಗಚಹಳ್ಳಿ, ಹೆಗ್ಗಡಹುಂಡಿ ಗ್ರಾಮಗಳಿಂದ 18 ಜನ ಗ್ರಾಪಂ ಸದಸ್ಯರು ಆಯ್ಕೆಗೊಂಡಿದ್ದು, ಜನ ಪ್ರತಿನಿಧಿಗಳು ಸರ್ಕಾರ ನೀಡುವ ಅನುದಾನ ಮತ್ತು ಸ್ಥಳೀಯ ಶಾಸಕರು ನೀಡುವ ವಿಶೇಷ ಅನುದಾನಗಳನ್ನು ಬಳಸಿಕೊಳ್ಳುವುದರ ಮೂಲಕ ಆಯಾ ಗ್ರಾಮಗಳಲ್ಲಿ ಅವಶ್ಯಕತೆ ಇರುವ ಸಮಸ್ಯೆಗಳಿಗೆ ಬಗೆಹರಿಸುವ ಮೂಲಕ ಅಭಿವೃದ್ಧಿಗೆ ಮುಂದಾಗಿದ್ದಾರೆ.
ಗಾಂಧಿ ಪುರಸ್ಕಾರ ತಂದು ಕೊಟ್ಟ ನರೇಗಾ:ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಅನುದಾನಗಳನ್ನು ಸರ್ಮಪಕವಾಗಿ ಬಳಸಿಕೊಂಡಿರುವ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗ್ರಾಪಂ ವ್ಯಾಪ್ತಿಗೆ ಬರುವ ಕೆರೆ, ಕಟ್ಟೆ, ಕಾಲುವೆ, ರೈತರು ಕೃಷಿ ಜಮೀನುಗಳಿಗೆ ನಮ್ಮ ಹೊಲ ನಮ್ಮ ರಸ್ತೆ ಯೋಜನೆಯಲ್ಲಿ ಕೃಷಿ ಜಮೀನುಗಳಿಗೆ ಹೋಗುವ ಮುಖ್ಯರಸ್ತೆಗಳ ನಿರ್ಮಿಸುವುದು, ಜನವಸತಿ ಪ್ರದೇಶಗಳಲ್ಲಿ ಹದಗೆಟ್ಟ ಮಣ್ಣು ರಸ್ತೆಗಳಿಗೆ ಸಿಸಿ ರಸ್ತೆ, ಸಿಸಿ ಚರಂಡಿಗಳನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಜನವಸತಿ ಪ್ರದೇಶಗಳು ಅಭಿವೃದ್ಧಿ ಕಂಡಿದೆ.
ಕೆರೆಗಳಿಗೆ ಜೀವಕಳೆ: ಅನುದಾನ ಇಲ್ಲದೆ ಕಾಡು ಜಾತಿ ಮುಳ್ಳುಗಳಿಂದ ಮುಚ್ಚಿ ಹೋಗಿದ್ದ ಕೆರೆ, ಕಟ್ಟೆ, ಕಾಲುವೆಗಳನ್ನು ಹೂಳು ತೆಗೆಸಿ ಕೆರೆಗಳಿಗೆ ನೀರು ತುಂಬಿದೆ, ಇದರಿಂದ ಭೂಮಿಯಲ್ಲಿ ಅಂರ್ತಜಲ ಹೆಚ್ಚಿದರಿಂದ ಬೇಸಿಗೆಯಲ್ಲಿ ರೈತರ ಕೃಷಿ ಪಂಪ್ ಸೆಟ್ ಗಳಿಗೆ ಅನುಕೂಲವಾಗಿದ್ದು, ರೈತರ ಮುಖದಲ್ಲಿ ನಗುಕಾಣಿಸಿಕೊಂಡಿದೆ.
ಗಾಂಧಿ ಪುರಸ್ಕಾರ ನೀಡಲು ಮಾನದಂಡವೇನು ?ಗ್ರಾಪಂ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಭಾಜನರಾಗಬೇಕಾದರೆ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಿರಬೇಕು, ಸಕಾಲದಲ್ಲಿ ಕಸವಿಲೇವಾರಿ, ಪ್ರತಿಮನೆಯಲ್ಲೋ ಶೌಚಗೃಹ ನಿರ್ಮಿಸಿಕೊಂಡಿರಬೇಕು, ಮೂಲಭೂತ ಸೌಕರ್ಯಗಳು ಪ್ರತಿಯೊಂದು ಕುಟುಂಬಗಳಿಗೆ ತಲುಪಿಸಿರಬೇಕು, ಕಂದಾಯ ಶೇ. 100 ರಷ್ಟು ಪಾವತಿಯಾಗಿರಬೇಕು, ಸರ್ಕಾರದಿಂದ ಬರುವ ಎಲ್ಲ ಅನುದಾನಗಳು ಸಂಪೂರ್ಣ ಬಳಕೆಯಾಗಿರಬೇಕು. ಬಡವರಿಗೆ ತಲುಪಬೇಕಾದ ಆಶ್ರಯ ಮನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿರಬೇಕು, ಹೀಗೆ ಸುಮಾರು 80 ಅಂಶಗಳ ಯೋಜನೆಗಳು ಸಕಾಲದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನವಾದರೆ ಮಾತ್ರ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ದೊರಕಲು ಸಾಧ್ಯ. ಈ ನಿಟ್ಟಿನಲ್ಲಿ ಅಂಬಳೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಮತ ಮತ್ತು ಸಿಬ್ಬಂದಿ ಹಾಗೂ ಗ್ರಾಪಂ ಅಧ್ಯಕ್ಷ ನಂಜುಂಡಸ್ವಾಮಿ ಮತ್ತು ಸದಸ್ಯರು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡುವಲ್ಲಿ ವಿಶೇಷ ಕಾಳಜಿ ಮತ್ತು ಶ್ರಮ ವಹಿಸಿದ್ದರಿಂದ ಅಂಬಳೆ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ ದೊರಕಿದೆ.ಪ್ರಶಸ್ತಿ ಸ್ವೀಕಾರ:
ಮಮತ ಪಿಡಿಒ. ಅಂಬಳೆ ಗ್ರಾಪಂ.ಅಂಬಳೆ ಗ್ರಾಪಂಗೆ ಗಾಂಧಿ ಪುರಸ್ಕಾರ ದೊರಕಿದ್ದರಿಂದ ಹೆಚ್ಚಿನ ಅಭಿವೃದ್ಧಿಗೆ ಪ್ರೇರಣೆಯಾಗಿದೆ. ನಿರಂತರವಾಗಿ ಸರ್ಕಾರ ನೀಡುವ ಅನುದಾನ ಮತ್ತು ಮಾರ್ಗದರ್ಶನಗಳನ್ನು ಪಾಲನೆ ಮಾಡುವ ಮೂಲಕ ನಮ್ಮ ಗ್ರಾಪಂ ಅನ್ನು ಮಾದರಿಯಾಗಿಸುವ ನಿಟ್ಟಿನಲ್ಲಿ ಶ್ರಮಿಸಲಾಗುವುದು.
ಶ್ರೀನಿವಾಸ್, ಇಒ ತಾಪಂ, ಯಳಂದೂರು.ಯಳಂದೂರು ತಾಲೂಕಿನಲ್ಲಿ ಅಂಬಳೆ ಗ್ರಾಪಂ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದು, ಗಾಂಧಿಗ್ರಾಮ ಪುರಸ್ಕಾರ ಸಿಕ್ಕದ ಬಳಿಕ ಗ್ರಾಪಂನ ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗದವರಿಗೆ ಹೆಚ್ಚಿನ ಪ್ರೊತ್ಸಾಹ ಸಿಕ್ಕಿದಂತಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಮಾದರಿಯಾಗುವ ನಿಟ್ಟಿನಲ್ಲಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಮುಂದಾಗಲಿ. ಎ.ಆರ್. ಕೃಷ್ಣಮೂರ್ತಿ ಶಾಸಕರು.