ಪುತ್ಥಳಿ ತೆರವಿನ ಸ್ಥಳದಲ್ಲಿಯೇ ಗಾಂಧಿ ಜಯಂತಿ ಆಚರಣೆ

KannadaprabhaNewsNetwork |  
Published : Oct 04, 2025, 01:00 AM IST
ಮಾಗಡಿ ಪಟ್ಟಣದ ಎನ್ಇಎಸ್ ವೃತದಲ್ಲಿ ಜೆಡಿಎಸ್ ವತಿಯಿಂದ ನಡೆದ ಗಾಂರ್ಇ ಜಯಂತಿ ಅಂಗವಾಗಿ ಸ್ಥಳೀಯ ಮುಖಂಡರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಮಾಗಡಿ: ದ್ವೇಷದ ರಾಜಕಾರಣಕ್ಕೆ ಗಾಂಧಿ ಜಯಂತಿ ಆಚರಿಸುವ ಮುನ್ನವೇ ಪ್ರತಿಮೆ ತೆರವುಗೊಳಿಸಿ ಪುರಸಭೆಯನ್ನು ಶಾಸಕ ಬಾಲಕೃಷ್ಣ ಕತ್ತಲೆ ಕೋಣೆಯಲ್ಲಿರಿಸಿದ್ದಾರೆ ಎಂದು ಪುರಸಭಾ ಸದಸ್ಯ ಎಂ.ಎನ್.ಮಂಜು ಬೇಸರ ವ್ಯಕ್ತಪಡಿಸಿದರು.

ಮಾಗಡಿ: ದ್ವೇಷದ ರಾಜಕಾರಣಕ್ಕೆ ಗಾಂಧಿ ಜಯಂತಿ ಆಚರಿಸುವ ಮುನ್ನವೇ ಪ್ರತಿಮೆ ತೆರವುಗೊಳಿಸಿ ಪುರಸಭೆಯನ್ನು ಶಾಸಕ ಬಾಲಕೃಷ್ಣ ಕತ್ತಲೆ ಕೋಣೆಯಲ್ಲಿರಿಸಿದ್ದಾರೆ ಎಂದು ಪುರಸಭಾ ಸದಸ್ಯ ಎಂ.ಎನ್.ಮಂಜು ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಎನ್ಇಎಸ್ ವೃತದಲ್ಲಿ ಗಾಂಧಿ ಜಯಂತಿ ಅಂಗವಾಗಿ ಕೆಲವು ದಿನಗಳ ಹಿಂದೆ ಗಾಂಧಿ ಪ್ರತಿಮೆ ತೆರವುಗೊಳಿಸಿದ ಜಾಗದಲ್ಲಿ ಗಾಂಧಿ ಭಾವಚಿತ್ರ ಇರಿಸಿ ಜೆಡಿಎಸ್ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಾಜಿ ಶಾಸಕ ಎ.ಮಂಜುನಾಥ್‌ ಗಾಂಧಿ ಪುತ್ಥಳಿ ಸ್ಥಾಪಿಸಿದರೆಂಬ ರಾಜಕೀಯ ದುರುದ್ದೇಶದಿಂದ ಎನ್ಇಎಸ್ ವೃತ್ತ ಅಭಿವೃದ್ಧಿ ಪಡಿಸಬೇಕೆಂಬ ನೆಪವೊಡ್ಡಿರುವ ಶಾಸಕ ಬಾಲಕೃಷ್ಣರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ ಎಂದು ಹೇಳಿದರು.

ಯೋಜನಾ ವರದಿಯೇ ತಯಾರಿಸಿಲ್ಲ:

ಗಾಂಧಿ ಜಯಂತಿ ಬಳಿಕ ಪುತ್ಥಳಿ ತೆರವುಗೊಳಿಸಿ ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿದರೂ ಕೇಳಿಸಿಕೊಳ್ಳದೆ ತರಾತುರಿಯಲ್ಲಿ ತೆರವುಗೊಳಿಸಿದ್ದು, ಇದುವರೆಗೂ ಯಾವುದೇ ಕಾಮಗಾರಿ ನಡೆಯುತ್ತಿಲ್ಲ. ಸರ್ಕಲ್ ಮಧ್ಯದಲ್ಲಿರುವ ಹೈಮಾಸ್ಟ್ ದೀಪದ ಕಂಬವೂ ಅಲ್ಲಿಯೇ ಇದೆ. ಮತ್ಯಾವ ಪುರುಷಾರ್ಥಕ್ಕಾಗಿ ಪುತ್ಥಳಿ ತೆರವುಗೊಳಿಸಬೇಕಾಗಿತ್ತು ಎಂದು ಪ್ರಶ್ನಿಸಿದ ಅವರು, ಅಭಿವೃದ್ಧಿ ಕಾಮಗಾರಿಯ ಸಮಗ್ರ ಯೋಜನಾ ವರದಿಯೇ ತಯಾರಾಗಿಲ್ಲವಾದರೂ ನೀಲನಕ್ಷೆಯ ಕಲರ್ ಜೆರಾಕ್ಸ್ ಪ್ರತಿ ತೆಗೆದು ಪಟ್ಟಣದ ಜನಕ್ಕೆ ಶಾಸಕರು ಮಂಕು ಬೂದಿ ಎರಚುತ್ತಿದ್ದಾರೆಂದು ಮಂಜು ವ್ಯಂಗ್ಯವಾಡಿದರು.

ಅಧಿಕಾರ ಶಾಶ್ವತವಲ್ಲ:

ಶಾಸಕರು ಹೇಳಿಕೆ ವಾಪಸ್ ಪಡೆಯಲಿ:

ನಿಂತಿರುವ ಗಾಂಧಿ ಪ್ರತಿಮೆ ನಿರ್ಮಾಣಕ್ಕೆ 35 ಲಕ್ಷ ರು.ಗಳಿಗೆ ಒಪ್ಪಿಸಿದ್ದು, ಈಗಾಗಲೇ ಮುಂಗಡವಾಗಿ 5 ಲಕ್ಷ ನೀಡಿದ್ದೇನೆ, ಉಳಿಕೆ ಹಣ ಜೆಡಿಎಸ್ ಹಾಗೂ ಬಿಜೆಪಿ ಪಕ್ಷ ಕೊಟ್ಟರೆ ಅವರ ಹೆಸರು ಹಾಕಿಸುತ್ತೇನೆಂದು ಶಾಸಕರು ಹೇಳಿಕೆ ನೀಡಿದ್ದಾರೆ. ಅಷ್ಟು ಹಣ ನಮ್ಮ ಬಳಿ ಇಲ್ಲ, ನಾವು ಹೇಳಿದ್ದು, ಸಾರ್ವಜನಿಕರು ಹಾಗೂ ನಮ್ಮ ಮಾಜಿ ಶಾಸಕರಿಂದ ಹಣ ಸಂಗ್ರಹಿಸಿ ಕೊಡುತ್ತೇವೆ ಎಂದು ಹೇಳಿದ್ದೇವೆ, ಈ ವಿನ್ಯಾಸದಲ್ಲಿಯೇ ಪುತ್ಥಳಿ ಬೇಕು ಎಂದಿದ್ದರೆ ನಾವು ಅದೇ‌ ವಿನ್ಯಾಸದಲ್ಲಿ ಪುತ್ಥಳಿ ನಿರ್ಮಿಸಿಕೊಡುತ್ತಿದ್ದೆವು, ಆದರೆ ನಿಮ್ಮ ಉದ್ದೇಶ ಬೇರೆ ಇದೆ, ಆದ್ದರಿಂದ ಶಿಷ್ಟಾಚಾರದ ಪ್ರಕಾರ ಫಲಕದಲ್ಲಿ ನಿಮ್ಮ ಹೆಸರು ಹಾಕಬೇಕು. ನೀವು ಕೊಟ್ಟಿರುವ ಹೇಳಿಕೆ ವಾಪಸ್ ತೆಗೆದುಕೊಳ್ಳಬೇಕು ಎಂದು ಮಂಜುನಾಥ್ ಆಗ್ರಹಿಸಿದರು.

ಇದೇ ವೇಳೆ ಗಾಂಧಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಿಹಿ ವಿತರಿಸಿ, 60 ವರ್ಷ ತುಂಬಿದ ಹಿರಿಯರು, ಪುರಸಭಾ ಪೌರ ಕಾರ್ಮಿಕರು ಹಾಗೂ ಜನಪ್ರತಿನಿಧಿಗಳು ಹಾಗೂ ಸಮಾಜ ಸೇವಕರನ್ನು ಸನ್ಮಾಸಿದರು.

ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರಾದ ಕೆ.ವಿ.ಬಾಲು, ರೇಖಾನವೀನ್, ರತ್ನಮ್ಮ ರಮೇಶ್, ಜೆಡಿಎಸ್ ಯುವ ಘಟಕದ ಅಧ್ಯಕ್ಷ ವಿಜಯ್‌ಕುಮಾರ್, ಜೆಡಿಎಸ್ ಮುಖಂಡರಾದ ತಮ್ಮಣ್ಣಗೌಡ, ಕೆಂಪೇಗೌಡ, ಭದ್ರಯ್ಯನಪಾಳ್ಯದ ರುದ್ರೇಶ್, ಸಿಡಗನಹಳ್ಳಿ ವೆಂಕಟೇಶ್, ಪುರಸಭೆ ಮಾಜಿ ಅಧ್ಯಕ್ಷ ನಯಾಜ್, ಗಂಗರೇವಣ್ಣ, ಶಿವಕುಮಾರ್, ದಂಡಿಗೆಪುರ ಕುಮಾರ್, ಬೆಳಗುಂಬ ಕೋಟಪ್ಪ, ಸೋಮಶೇಖರ್, ಮಂಜುನಾಥ್, ನರಸಿಂಹ, ಕೇಬಲ್‌ಮಹೇಶ್, ನೇತೇನಹಳ್ಳಿ ಪುರುಷೋತ್ತಮ್, ಜಯಕುಮಾರ್, ಕೆ.ಕೆ.ನರಸಿಂಹಪ್ರಸಾದ್, ಯೋಗೇಶ್, ಪಂಚೆ ರಾಮಣ್ಣ, ಜಗದೀಶ್, ತಿರುಮಲೆ ಮೋಹನ್, ನಯನ್ ಇತರರಿದ್ದರು.

PREV

Recommended Stories

ಬೆಡ್‌ರೂಮಲ್ಲಿ ರಹಸ್ಯ ಕ್ಯಾಮೆರಾ: ಲೈಂಗಿಕಕ್ರಿಯೆ ಚಿತ್ರೀಕರಿಸಿ ದೌರ್ಜನ್ಯ
ಕಾವೇರಿ ಆರತಿ ನಿಲ್ಲಿಸಲ್ಲ: ಡಿಸಿಎಂ