ಕನ್ನಡಪ್ರಭ ವಾರ್ತೆ, ಕಡೂರು
ಗಾಂಧೀಜಿ ದೇವಾಲಯ ಕಟ್ಟಿ, ಪ್ರತಿಮೆ ಮಾಡಿ ಪೂಜಿಸಿ ಸ್ವಾತಂತ್ರ ಹೋರಾಟದಲ್ಲೂ ಸಕ್ರಿಯವಾಗಿ ಇತಿಹಾಸದ ಪುಟದಲ್ಲಿ ಸೇರಿರುವ ತಾಲೂಕಿನ ನಿಡಘಟ್ಟ ಗ್ರಾಮ ಪಂಚಾಯ್ತಿಗೆ ಗಾಂಧೀ ಗ್ರಾಮ ಪುರಸ್ಕಾರ ಸಂದಿದೆ.ಭಾರತವನ್ನು ದಾಸ್ಯದಿಂದ ಮುಕ್ತಿಗೊಳಿಸಲು 1947ಕ್ಕೂ ಮುಂಚೆಯೇ ನಿಡಘಟ್ಟಗ್ರಾಮದ ಯುವಕರ ದಂಡು ಗಾಂಧೀಜಿ ಕರೆಗೆೆ ಓಗೊಟ್ಟು ಸ್ವಾತಂತ್ರ ಚಳುವಳಿಗೆ ಧುಮುಕಿ ಹೋರಾಡಿರುವ ಇತಿಹಾಸದ ಸೃಷ್ಟಿಸಿರುವ ಈ ಗ್ರಾಮ ಪಂಚಾಯ್ತಿಗೆ ಸಂದ ಈ ಗೌರವ ಮತ್ತೊಂದು ಹಿರಿಮೆ.
ನಿಡಘಟ್ಟ ಗ್ರಾ.ಪಂ.ಅಧ್ಯಕ್ಷೆ ರುದ್ರಮ್ಮ ಬಸವರಾಜು ಬೆಂಗಳೂರಿನ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲಲ್ಲಿ ಸಚಿವರಿಂದ ಗಾಂಧೀ ಗ್ರಾಮ ಪುರಸ್ಕಾರ ಸ್ವೀಕರಿಸಿ ಸಂತಸ ಹಂಚಿಕೊಂಡರು. ನಮ್ಮ ಗ್ರಾಮದಲ್ಲಿ ಅನೇಕ ಸ್ವಾತಂತ್ರ ಹೋರಾಟ ಗಾರರಿದ್ದು ಜೊತೆಗೆ ರಾಜ್ಯದ 2ನೇ ಮಹಾತ್ಮ ಗಾಂಧೀಯವರ ದೇವಾಲಯವನ್ನು ನಿರ್ಮಿಸಿದ ಖ್ಯಾತಿ ನಿಡಘಟ್ಟಕ್ಕೆ ಇದೆ. ಅಲ್ಲದೆ ಅಭಿವೃದ್ಧಿಯಲ್ಲಿ ಗ್ರಾಮ ಪಂಚಾಯ್ತಿ ಸಾಧನೆ ಮಾಡಿದ್ದು ಸ್ವಚ್ಛತೆಯೊಂದಿಗೆ ಮೂಲ ಸೌಕರ್ಯ ಒದಗಿಸುತ್ತಾ ಮಾದರಿಯಾಗಿದೆ ಎಂದರು. ಗ್ರಾಮದ ಮುಖಂಡ ಕುಮಾರಗಾಂಧೀ ಮಾತನಾಡಿ, ಗಾಂಧೀ ಗ್ರಾಮ ಪುರಸ್ಕಾರ ಬಂದಿರುವುದು ಸಂತಸ ತಂದಿದೆ. ಸಾಕಷ್ಟು ಅಭಿವೃದ್ಧಿಯಾಗಿದೆ. ಇನ್ನೂ ಕೆಲಸಗಳಿವೆ. ಅದನ್ನು ಮುಂದಿನ ದಿನಗಳಲ್ಲಿ ಮಾಡಿ ರಾಜ್ಯದಲ್ಲಿಯೇ ಮಾದರಿ ಗ್ರಾಪಂ. ಸದಸ್ಯರು ಜೊತೆಗೆ ಸಾರ್ವಜನಿಕರ ಸಹಕಾರದಲ್ಲಿ ಆಗಬೇಕಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಗ್ರಾಪಂ ಪಿಡಿಒ ಸುಧಾ, ಸದಸ್ಯರಾದ ರಾಜಪ್ಪ, ಬಾಬು, ಸುಧಾ ರಾಮಚಂದ್ರ, ಸೋಮೇಶ್, ಲಕ್ಷ್ಮಮ್ಮ, ಗೀತಾಂಜಲಿ ಸುರೇಶ್, ಗೀತಾ ರಾಜಶೇಖರ್, ವಿಶ್ವನಾಥ್, ನಿಂಗರಾಜು, ಸವಿತಾ ಶಿವಪ್ಪ, ಶೈಲಜಾ ಇದ್ದರು.-- ಬಾಕ್ಸ್ ಸುದ್ದಿ--
ಸ್ವಾತಂತ್ರ ಚಳುವಳಿಯಲ್ಲಿ ಧುಮುಕಿ ಹೋರಾಟ ನಡೆಸಿದ ನಿಢಘಟ್ಟ ಹೋರಾಟಗಾರರ ಗ್ರಾಮ ಪಂಚಾಯ್ತಿಯ ಉತ್ತಮ ಕೆಲಸಗಳ ಮೂಲಕ ಗಾಂಧೀ ಗ್ರಾಮ ಪುರಸ್ಕಾರ ಲಭಿಸಿರುವುದು ಸಂತಸದ ಸಂಗತಿ. ಆ ಮೂಲಕ ನಿಢಗಟ್ಟ ಗ್ರಾಮದಲ್ಲಿ ಗಾಂಧೀಜಿ ಪ್ರೇರಣೆಯಂತೆ ಉತ್ತಮ ಸಾಧನೆ ಮಾಡಿರುವ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ಅಭಿನಂದನೀಯ.-ಸಿ.ಆರ್. ಪ್ರವೀಣ್,
ಕಾರ್ಯ ನಿರ್ವಹಣಾಧಿಕಾರಿ, ತಾ.ಪಂ. ಕಡೂರು.4 ಕೆಕೆಡಿಯು2.
ಬೆಂಗಳೂರಿನ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲಲ್ಲಿ ನಿಡಘಟ್ಟ ಗ್ರಾ.ಪಂ. ಅಧ್ಯಕ್ಷೆ ರುದ್ರಮ್ಮ ಬಸವರಾಜು ಮತ್ತು ಪಿಡಿಒ ಸುಧಾ ರವರು ಸಚಿವರಿಂದ ಗಾಂಧೀ ಗ್ರಾಮ ಪುರಸ್ಕಾರ ಸ್ವೀಕರಿಸಿದರು.