ಗಾಂಧೀಜಿಯವರ ತತ್ವಾದರ್ಶ ದೇಶದ ಹಿರಿಮೆ: ಮಂಜುನಾಥ್

KannadaprabhaNewsNetwork |  
Published : Oct 03, 2024, 01:24 AM IST
2ಕೆಎಂಎನ್ ಡಿ11 | Kannada Prabha

ಸಾರಾಂಶ

ಮೋಹನ ದಾಸ ಕರಮಚಂದ ಗಾಂಧಿ ಮಹಾತ್ಮರಾಗಲು ಅವರ ದೂರ ದೃಷ್ಟಿ, ಆಲೋಚನೆಗಳು, ಸಿದ್ಧಾಂತಗಳು, ಶೋಷಿತರ ಪರವಾಗಿ ಅವರಿಗಿದ್ದ ಕಾಳಜಿ, ದೇಶದ ಸ್ವಾತಂತ್ರ್ಯಕ್ಕಾಗಿ ಅವರು ತೆಗೆದುಕೊಂಡ ಪ್ರಯತ್ನಗಳು, ಅವರ ಸರಳ ಜೀವನ, ಆದರ್ಶ, ತ್ಯಾಗ ಎಲ್ಲಾ ಸೈದ್ಧಾಂತಿಕ ಅಂಶಗಳ ಹಿನ್ನೆಲೆಯ ಮೂಲಕ ಮಹಾತ್ಮರಾಗಲು ಸಾಧ್ಯವಾಯಿತು.

ಕನ್ನಡಪ್ರಭ ವಾರ್ತೆ ಹಲಗೂರು

ಮಹಾತ್ಮ ಗಾಂಧೀಜಿಯವರ ತತ್ವಾದರ್ಶಗಳನ್ನು ಜಗತ್ತಿನಾದ್ಯಂತ ಪಾಲಿಸುತ್ತ ಜಗನ್ಮಾನ್ಯವಾಗಿರುವುದು ಭಾರತ ದೇಶದ ಹಿರಿಮೆಯಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಆಲಂಗೂರ್ ಮಂಜುನಾಥ್ ತಿಳಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಮಹಾತ್ಮ ಗಾಂಧೀಜಿಯವರ 155ನೇ ಜಯಂತಿ ಅಂಗವಾಗಿ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸಿ ಮಾತನಾಡಿದರು.

ಮೋಹನ ದಾಸ ಕರಮಚಂದ ಗಾಂಧಿ ಮಹಾತ್ಮರಾಗಲು ಅವರ ದೂರ ದೃಷ್ಟಿ, ಆಲೋಚನೆಗಳು, ಸಿದ್ಧಾಂತಗಳು, ಶೋಷಿತರ ಪರವಾಗಿ ಅವರಿಗಿದ್ದ ಕಾಳಜಿ, ದೇಶದ ಸ್ವಾತಂತ್ರ್ಯಕ್ಕಾಗಿ ಅವರು ತೆಗೆದುಕೊಂಡ ಪ್ರಯತ್ನಗಳು, ಅವರ ಸರಳ ಜೀವನ, ಆದರ್ಶ, ತ್ಯಾಗ ಎಲ್ಲಾ ಸೈದ್ಧಾಂತಿಕ ಅಂಶಗಳ ಹಿನ್ನೆಲೆಯ ಮೂಲಕ ಮಹಾತ್ಮರಾಗಲು ಸಾಧ್ಯವಾಯಿತು ಎಂದರು.

ಸ್ವಚ್ಛ ಭಾರತ ನಿರ್ಮಾಣ, ರಾಮರಾಜ್ಯ ಕಟ್ಟಬೇಕು ಎಂಬ ಗಾಂಧೀಜಿಯವರ ಸಿದ್ಧಾಂತದ ಪ್ರಕಾರ ಇಂದು ಸರ್ಕಾರ ಗಾಂಧಿ ಜಯಂತಿ ಆಚರಣೆ ಜೊತೆಗೆ ಶ್ರಮದಾನವನ್ನು ಹಮ್ಮಿಕೊಂಡು ವಿದ್ಯಾರ್ಥಿಗಳ ಸಮುದಾಯದಲ್ಲಿ ಸೇವಾ ಮನೋಭಾವದ ಬಗ್ಗೆ ಜಾಗೃತಿಯನ್ನು ಮೂಡಿಸುವಂತಾಗಬೇಕು ಎಂದರು .

ಕಾರ್ಯಕ್ರಮದಲ್ಲಿ ಪ್ರೊ.ಸುಧಾ ಬಿದರಿ ಮಾತನಾಡಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಆದರ್ಶ ತತ್ವಗಳು ನಿರಂತರ ಸರ್ವದ ಪಾಲಿಸುವಂತಹ ಮೌಲ್ಯಗಳು ಎಂದರು.

ಕಾಲೇಜಿನ ಸೂಪರಿಡೆಂಟ್ ಕುಮಾರಸ್ವಾಮಿ ಮಾತನಾಡಿದರು. ವಿದ್ಯಾರ್ಥಿ ನಾಯಕ ಪ್ರಜ್ವಲ್ ಕುಮಾರ್ , ಹರ್ಷಿತ್ ಗೌಡ, ಆಕಾಶ್, ಸಂಜಯ್, ವಿಕಾಸ್ ಮತ್ತು ಇತರ ವಿದ್ಯಾರ್ಥಿಗಳು ಶ್ರಮದಾನದಲ್ಲಿ ಭಾಗವಹಿಸಿದ್ದರು. ಶ್ರೀಧರ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ