ಕನ್ನಡಪ್ರಭ ವಾರ್ತೆ ವಡಗೇರಾ
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಬುಧವಾರ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜನ್ಮದಿನ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ದೇಶಕ್ಕೆ ಗಾಂಧೀಜಿ, ಶಾಸ್ತ್ರಿ ಅವರ ಸೇವೆ ಮತ್ತು ಕೊಡುಗೆ ಅಪಾರವಾದದ್ದು, ನಾವೆಲ್ಲರೂ ಅವರ ತತ್ವಾದರ್ಶ ಅಳವಡಿಸಿಕೊಳ್ಳಬೇಕು ಮತ್ತು ಸ್ವಚ್ಛತೆಗೆ ಪ್ರತಿಯೊಬ್ಬರು ಪಣತೊಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಪಟ್ಟಣದ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಸ್ವಚ್ಛತಾ ಸೇವಾ ಕಾರ್ಯಕ್ರಮ ಕೈಗೊಳ್ಳಲಾಯಿತು.
ಉಪ ತಹಸೀಲ್ದಾರ್ ಸಂಗಮೇಶ್ ದೇಸಾಯಿ, ಪ್ರೌಢಶಾಲಾ ಮುಖ್ಯ ಶಿಕ್ಷಕ ಅಯ್ಯಪ್ಪ, ಕಂದಾಯ ನಿರೀಕ್ಷಕ ಸಂಜೀವಕುಮಾರ್ ಕಾವಲಿ, ಕಂದಾಯ ಇಲಾಖೆಯ ಸಿಬ್ಬಂದಿಗಳಾದ ತಿಪ್ಪೇಸ್ವಾಮಿ, ಗುರುಸ್ವಾಮಿ, ಪ್ರವೀಣ್, ನಹೀಮ್ ಸಾಬ್, ರವಿ ನೀಲಹಳ್ಳಿ, ಚೆನ್ನಯ್ಯಸ್ವಾಮಿ, ಖಂಡಪ್ಪ ಮೈಲಾಪುರ, ದೇವು ನಾಯಕ್, ಮಂಜುನಾಥ, ಮಲ್ಲೇಶ್ ನಾಟೇಕಾರ್ ಸೇರಿದಂತೆ ಇತರರಿದ್ದರು.