ಹಾವೇರಿ: ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿಯನ್ನು ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಆಚರಿಸಲಾಯಿತು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಂಜುಂಡೇಶ ಕಳ್ಳೇರ ಮಾತನಾಡಿ, ಖಾದಿ ವಸ್ತುಗಳನ್ನು ಖರೀದಿಸಿ ಖಾದಿ ಗ್ರಾಮೋದ್ಯೋಗವನ್ನು ಪ್ರೋತ್ಸಾಹಿಸಬೇಕು. ೨ನೇ ಹಂತದ ಸದಸ್ಯತ್ವ ಅಭಿಯಾನವನ್ನು ಹೆಚ್ಚಿನ ರೀತಿಯಲ್ಲಿ ಎಲ್ಲ ಕಾರ್ಯಕರ್ತರು ಪದಾಧಿಕಾರಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು. ನಂತರ ಮಾಜಿ ಸೈನಿಕರಿಗೆ ಸನ್ಮಾನ ಮಾಡಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಸುರೇಶ ಹೊಸಮನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಸಂತೋಷ ಆಲದಕಟ್ಟಿ, ಗವಿಸಿದ್ದಪ್ಪ ದ್ಯಾಮಣ್ಣನವರ, ಮಾಲತೇಶಗೌಡ, ಗಿರೀಶ ತುಪ್ಪದ, ಗುಡ್ಡಪ್ಪ ಭರಡಿ, ಪ್ರಕಾಶ ಉಜನಿಕೊಪ್ಪ, ವಿಜಯಕುಮಾರ ಚಿನ್ನಿಕಟ್ಟಿ, ಶಿವಯೋಗಿ ಹುಲಿಕಂತಿಮಠ, ಅಡಿವಯ್ಯ ಯಲವಿಗಿಮಠ, ನಾಗರಾಜ ಹರಿಗೋಲ, ಆನಂದ ಕಲಾಲ್, ಅಭಿಷೇಕ ಗುಡಗೂರ, ಲಲಿತಾ ಗುಂಡೇನಹಳ್ಳಿ, ಲತಾ ಬಡ್ನಿಮಠ, ಪುಷ್ಪಾಚಕ್ರಸಾಲಿ, ರೋಹಿಣಿ ಪಾಟೀಲ, ಚೆನ್ನಮ್ಮ ಪಾಟೀಲ, ಭಾಗ್ಯಶ್ರೀ ಮೋರೆ, ಸುಮಗಂಲಾ ಚನ್ನವೀರಗೌಡ, ವೆಂಕಟೇಶ ನಾರಾಯಣಿ, ಅಲ್ಲಭಕ್ಷ ತಿಮ್ಮಾಪುರ, ಚಿಕ್ಕಪ್ಪ ದೊಡ್ಡತಳವಾರ, ರಮೇಶ ಪಾಲನಕರ, ನಾಗರಾಜ ಬಸೇಗಣ್ಣಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.