ಸೂಲಿಬೆಲೆ: ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಧಾರ್ಮಿಕ ಸಂಘರ್ಷಗಳಿಗೆ ಜಾಗವಿಲ್ಲ, ಹಿಂದು-ಮುಸ್ಲಿಮರು ಒಂದೇ ತಾಯಿ ಮಕ್ಕಳ ರೀತಿಯಲ್ಲಿ ಜೀವಿಸುತ್ತಿದ್ದೇವೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.

ಹೋಬಳಿಯ ಇ-ಮುತ್ಸಂದ್ರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಇಪ್ತಾರ್ ಕೂಟ ಹಾಗೂ ಮಸೀದಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಂಜಾನ್ ಹಬ್ಬದಲ್ಲಿ ಮುಸ್ಲಿಂ ಸಮುದಾಯ ಆತ್ಮಪರಿಶೀಲನೆಯಲ್ಲಿ ಪಾಪ ಪುಣ್ಯಗಳ ಮನನ ಮಾಡಿಕೊಂಡು ೧ ತಿಂಗಳ ಉಪವಾಸ ಆಚರಣೆ ಮಾಡಿ ಆತ್ಮಶುದ್ದಿ ಮಾಡಿಕೊಳ್ಳುತ್ತದೆ ಎಂದು ಹೇಳಿದರು.

ಗ್ರಾಮೀಣ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉಪವಾಸ(ರೋಜಾ) ಹಾಗೂ ೫ ಬಾರಿ ನಮಾಜ್ ಮಾಡುವ ಆಚರಣೆ ಮಾಡುತ್ತಾರೆ. ಅಲ್ಪಸಂಖ್ಯಾತರು ರಂಜಾನ್ ಮಾಸವನ್ನು ಪವಿತ್ರ ಮಾಸವೆಂದು ಭಾವಿಸಿ ಕಾಯಾ, ವಾಚಾ, ಮನಸಾ ಶುದ್ದವಾಗಿ ಆಚರಿಸುವುದು ಸಂಪ್ರದಾಯವಾಗಿದೆ ಎಂದರು.

ಬಮೂಲ್ ನಿರ್ದೇಶಕ ಬಿ.ವಿ.ಸತೀಶಗೌಡ ಮಾತನಾಡಿ, ಹೊಸಕೋಟೆ ತಾಲೂಕಿನಲ್ಲಿ ಹಿಂದು ಮುಸ್ಲಿಂ ಸಮುದಾಯ ಎಲ್ಲಾ ಹಬ್ಬಗಳ ಜೊತೆಯಾಗಿ ಸೌಹಾರ್ದಯುತವಾಗಿ ಆಚರಿಸುತ್ತಾರೆ. ಮಾಜಿ ಸಚಿವರಾದ ಬಿ.ಎನ್.ಬಚ್ಚೇಗೌಡರು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಾವುಗಳು ಸಾಗುತ್ತಿದ್ದೇವೆ. ಯಾವುದೇ ರಾಗದ್ವೇಷ ಅಸೂಯೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.ಈ ವೇಳೆ ಬಮೂಲ್ ನಿರ್ದೇಶಕ ಬಿ.ವಿ.ಸತೀಶಗೌಡ, ರಾಜ್ಯ ಒಕ್ಕಲಿಗ ಸಂಘದ ಕಾರ್ಯಾಧ್ಯಕ್ಷ ಬಿ.ವಿ.ರಾಜಶೇಖರಗೌಡ, ಯುವ ಮುಖಂಡ ನಾರಾಯಣಗೌಡ, ಕಂಬಳಿಪುರ ಗ್ರಾಪಂ ಮಾಜಿ ಅಧ್ಯಕ್ಷ ಆನಂದಪ್ಪ, ಗಿಡ್ಡಪ್ಪನಹಳ್ಳಿ ಬಾಜಿ, ಟಿಎಪಿಸಿಎಂಎಸ್ ನಿರ್ದೇಶಕ ನಗರೇನಹಳ್ಳಿ ನಾಗರಾಜಪ್ಪ, ಯನಗುಂಟೆ ರಮೇಶ್, ತಮ್ಮರಸನಹಳ್ಳಿ ಯಾರಬ್, ಮುತ್ಸಂದ್ರ ಸಂತೋಷ್‌ ಇತರರಿದ್ದರು.

(ಒಂದು ಫೋಟೋ ಸುದ್ದಿ ಜೊತೆಗೆ ಒಂದು ಫೋಟೋ ಮುಂದಿನ ಪುಟದ ಪ್ಯಾನಲ್‌ನಲ್ಲಿ)


ಚಿತ್ರ; ೧೪ ಸೂಲಿಬೆಲೆ ೧ ಜೆಪಿಜೆ ನಲ್ಲಿದೆ

ಚಿತ್ರ; ೧೪ ಸೂಲಿಬೆಲೆ ೨ ಜೆಪಿಜೆ ನಲ್ಲಿದೆ