ಗಾಂಧಿನಗರದಲ್ಲಿ ಭೀಮೋತ್ಸವ- ಅಂಬೇಡ್ಕರ್ ಪ್ರತಿಮೆ ಅದ್ಧೂರಿ ಮೆರವಣಿಗೆ

KannadaprabhaNewsNetwork | Published : Apr 15, 2025 12:50 AM

ಸಾರಾಂಶ

ದೇಶದಲ್ಲಿ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸಿದ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ನಾವೆಲ್ಲರೂ ಸ್ಮರಿಸಿಕೊಳ್ಳಬೇಕು

ಕನ್ನಡಪ್ರಭ ವಾರ್ತೆ ಮೈಸೂರುವಿಶ್ವಜ್ಞಾನಿ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ 134ನೇ ಜಯಂತಿ ಪ್ರಯುಕ್ತ ಅವರ ಪ್ರತಿಮೆ ಅದ್ಧೂರಿ ಮೆರವಣಿಗೆಯನ್ನು ಗಾಂಧಿನಗರದಲ್ಲಿ ಸೋಮವಾರ ಆಯೋಜಿಸಲಾಗಿತ್ತು.ಡಾ.ಬಿ.ಆರ್. ಅಂಬೇಡ್ಕರ್ ಗಾಂಧಿನಗರ ನಾಗರಿಕರ ಹಿತರಕ್ಷಣಾ ಸಮಿತಿಯು ಭೀಮೋತ್ಸವ ಹೆಸರಿನಲ್ಲಿ ಗಾಂಧಿನಗರದ ಬಸ್ ನಿಲ್ದಾಣದಿಂದ ಆಯೋಜಿಸಿದ್ದ ಈ ಮೆರವಣಿಗೆಗೆ ಮಾಜಿ ಸಂಸದ ಪ್ರತಾಪ್ ಸಿಂಹ ಚಾಲನೆ ನೀಡಿದರು. ವಿವಿಧ ಜಾನಪದ ಕಲಾತಂಡಗಳು, ವಾದ್ಯ, ಕುಣಿತ, ತಮಟೆಯ ಸದ್ದಿಗೆ ಯುವಜನತೆ ಕುಣಿದ ಸಂಭ್ರಮಿಸಿದರು.ಬಳಿಕ ಡಾ.ಬಿ.ಆರ್. ಅಂಬೇಡ್ಕರ್ (ಎಫ್ ಟಿಎಸ್) ವೃತ್ತದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ದೇಶದಲ್ಲಿ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸಿದ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ನಾವೆಲ್ಲರೂ ಸ್ಮರಿಸಿಕೊಳ್ಳಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕು ಎಂಬುದು ಅವರ ಆಶಯವಾಗಿತ್ತು. ಅಸ್ಪೃಶ್ಯತೆ ತೊಲಗಿಸಲು ಹೋರಾಟ ನಡೆಸಿದ ಅಂಬೇಡ್ಕರ್ ದಲಿತರ ಧ್ವನಿಯಾಗಿದ್ದರು ಎಂದು ತಿಳಿಸಿದರು.ಶಿಕ್ಷಣ ಮತ್ತು ಸಬಲೀಕರಣದಿಂದ ಅಸಮಾನತೆ ಎಂಬುದು ಸಂಪೂರ್ಣವಾಗಿ ಹೋಗಲಾಡಿಸಬೇಕು. ಅದರ ಜತೆಯಲ್ಲಿ ಈ ಸಮುದಾಯಗಳು ಅಭಿವೃದ್ಧಿಯಾಗಬೇಕು ಎಂಬುದು ಅಂಬೇಡ್ಕರ್ ಅವರ ಆಶಯವಾಗಿತ್ತು. ದೇಶದಲ್ಲಿ ಸಂಪೂರ್ಣ ಸಮಾನತೆ ಕಂಡಾಗ ಬಾಬಾ ಸಾಹೇಬರ ಕನಸು ನನಸಾಗುತ್ತದೆ ಎಂದು ಅವರು ಹೇಳಿದರು.ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕರಾದ ತನ್ವೀರ್ ಸೇಠ್, ದರ್ಶನ್ ಧ್ರುವನಾರಾಯಣ, ಡಿಸಿಪಿ ಸುಂದರ್ ರಾಜ್, ಎಸ್ಸಿ, ಎಸ್ಟಿ ಉದ್ದಿಮೆದಾರರ ಸಂಘದ ಆರ್. ಮಂಜುನಾಥ್, ಪಾಲಿಕೆ ಮಾಜಿ ಸದಸ್ಯೆ ಡಾ. ಅಶ್ವಿನಿ ಶರತ್, ಸಮಿತಿ ಅಧ್ಯಕ್ಷ ಶರತ್ ಸತೀಶ್, ಮುಖಂಡರಾದ ದೇವರಾಜು, ಪರಮಾನಂದ, ಪ್ರೀತಮ್, ಚರಣ್, ಸುರೇಶ್, ವಿಜಯ್, ದೇವರಾಜು, ರಂಗಸ್ವಾಮಿ, ಪಾಪಣ್ಣ, ಮಂಜುನಾಥ್, ಅಜಯ್, ರೂಪೇಶ್, ರಾಹುಲ್ ಮೊದಲಾದವರು ಇದ್ದರು.

Share this article