ಮುಂಡಗೋಡ: ಟೌನ್ ಪ್ಲಾನಿಂಗ್ ಆಗಿ ಮೂಲ ಸೌಕರ್ಯ ಸಹಿತ ನಿವೇಶನಗಳನ್ನು ಹೊಂದಿರುವ ಗಾಂಧಿನಗರ ಬಡಾವಣೆಯನ್ನು ಕೊಳಚೆ ಪ್ರದೇಶ ಎಂದು ಘೋಷಿಸಿದ್ದನ್ನು ಡಿನೋಟಿಫಿಕೇಶನ್ ಮಾಡಬೇಕು ಹಾಗೂ ಕೊಳಚೆ ಪ್ರದೇಶ ಎಂದು ಅಧಿಸೂಚನೆ ಹೊರಡಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಗಾಂಧಿನಗರ ಅಭಿವೃದ್ಧಿ ಸಮಿತಿಯವರು ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಸ್ಲಂ ಬೋರ್ಡ್ ನಿಯಮಾವಳಿ ಪ್ರಕಾರ ಯಾವುದೇ ರಸ್ತೆ ಇರಬಾರದು. ಗಾಳಿ ಬೆಳಕು ಇರಬಾರದು. ಕೊಳಚೆ ಪ್ರದೇಶವಾಗಿರಬೇಕು. ಕಟ್ಟಡಗಳಿಲ್ಲದೇ ಗುಡಿಸಲುಗಳು ಮಾತ್ರ ಇದ್ದಾಗ ಸ್ಲಂ ಎಂದು ಪರಿಗಣಿಸಲಾಗುತ್ತದೆ. ಆದರೆ, ಮುಂಡಗೋಡ ಪಟ್ಟಣ ಪಂಚಾಯಿತಿಯ ಗಾಂಧಿನಗರದಲ್ಲಿರುವ ಸರ್ವೆ ನಂಬರ್ ೧೮೬ರ ೨೫ ಎಕರೆ ಜಾಗ ಸರ್ಕಾರದಿಂದ ೧೯೭೬ರಲ್ಲಿ ಮುಂಡಗೋಡ ಪಟ್ಟಣ ಪಂಚಾಯಿತಿಗೆ ಮಂಜೂರಾಗಿತ್ತು. ಈ ಜಾಗ ಡಿಸ್‌ಫಾರೆಸ್ಟ್, ಆಗಿದೆ. ಟೌನ್ ಪ್ಲಾನಿಂಗ್ ಆಗಿದೆ. ಟೌನ್ ಪ್ಲಾನಿಂಗ್ ಆಗಿ ಕೆಜೆಪಿ(ನಿವೇಶನ ರಚನೆ ಆಗಿದೆ) ಹಂತ- ಹಂತವಾಗಿ ರಸ್ತೆ, ಬೀದಿದೀಪ, ಗಟಾರ ಎಲ್ಲ ಮೂಲ ಸೌಲಭ್ಯ ಹೊಂದಿದೆ. ಫಲಾನುಭವಿಗಳಿಗೆ ಮನೆ ಕಟ್ಟಲು ಸಾಲ ನೀಡಲಾಗಿದೆ. ಸಬ್ ರಜಿಸ್ಟಾರ್‌ದಲ್ಲಿ ಮೌಲ್ಯ ಮಾಪನವಾಗಿದೆ.
ಈ ಸಂದರ್ಭದಲ್ಲಿ ಮುಂಡಗೋಡ ಗಾಂಧಿನಗರ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಾಗಪ್ಪ ಕಿತ್ತೂರ, ಗೌರವಾಧ್ಯಕ್ಷ ಸತ್ಯೇಂದ್ರ ಪಾಟೀಲ, ಆರ್‌ಟಿಐ ಕಾರ್ಯಕರ್ತ ವೆಂಕಟೇಶ ಶಿರಾಲಿ, ಕಾರ್ಯದರ್ಶಿ ರಮೇಶ ಮಳೇಕರ, ಶ್ರೀಮಂತ ಉಗ್ರಾಣ ಮುಂತಾದವರು ಉಪಸ್ಥಿತರಿದ್ದರು.ಸಾಹಿತ್ಯ ಸಮ್ಮೇಳನಾಧ್ಯಕ್ಷ ಪಾಟೀಲರಿಗೆ ಸನ್ಮಾನ
ದಾಂಡೇಲಿ: ತಾಲೂಕಿನ ಆಲೂರಿನಲ್ಲಿ ಫೆ. 28ರಂದು ನಡೆಯುವ ತಾಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ಪತ್ರಕರ್ತ, ಬರಹಗಾರ ಯು.ಎಸ್. ಪಾಟೀಲ್ ಹಾಗೂ ಅವರ ಪತ್ನಿ ಲತಾ ಪಾಟೀಲ ಅವರನ್ನು ದಾಂಡೇಲಿಯ ಕರ್ನಾಟಕ ಸಂಘದವರು ಶುಕ್ರವಾರ ಅವರ ಮನೆಯಲ್ಲಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಕೀರ್ತಿ ಗಾಂವಕರ, ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ಯು.ಎಸ್. ಪಾಟೀಲ್ ಅವರು ನಮ್ಮ ಕರ್ನಾಟಕ ಸಂಘದ ಅಧ್ಯಕ್ಷರು. ಜತೆಗೆ ಪತ್ರಕರ್ತರಾಗಿ ಹಾಗೂ ತಾಲೂಕಿನ ಹಲವಾರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ಜನಪರ ಕೆಲಸ ಮಾಡಿದವರು. ಇಂತಹ ಹಿರಿಯರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಕನ್ನಡ ಸಾಹಿತ್ಯ ಪರಿಷತ್ತಿಗೆ ಕರ್ನಾಟಕ ಸಂಘದ ವತಿಯಿಂದ ಅಭಿನಂದಿಸುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ, ಕರ್ನಾಟಕ ಸಂಘದ ಉಪಾಧ್ಯಕ್ಷರಾದ ರಾಜೇಶ್ ತಿವಾರಿ, ಮುರ್ತುಜಾ ಹುಸೇನ್ ಆನೆಹೊಸೂರ್, ಖಜಾಂಚಿ ರಾಜಶೇಖರ್ ಕುಂಬಾರ್, ಪದಾಧಿಕಾರಿಗಳಾದ ಮೋಹನ ಹಲವಾಯಿ, ಅನಿಲ್ ದಂಡಗಲ, ಆರ್.ಪಿ. ನಾಯ್ಕ, ಶ್ರೀಮಂತ ಮದರಿ, ಡಾ. ಬಿ.ಎಲ್. ಗುಂಡೂರ್, ಸುರೇಶ್ ಪಾಲನಕರ, ಪ್ರಮುಖರಾದ ದಿವಾಕರ್ ನಾಯ್ಕ್, ಹನುಮಂತ್ ಕುಂಬಾರ್, ಬಸಪ್ಪ ಮುಂತಾದವರು ಇದ್ದರು.