ಹಾವೇರಿ: ತಾಲೂಕಿನ ಗಾಂಧಿಪುರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಅಭಿವೃದ್ಧಿ ಸಮಿತಿಯ ಸಭೆ ಸದಸ್ಯರೂ ಆಗಿರುವ ಶಿಕ್ಷಣ ಚಿಂತಕ ನಿಜಲಿಂಗಪ್ಪ ಬಸೇಗಣ್ಣಿ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.ಬೋಧಕ- ಬೋಧಕೇತರ ಸಿಬ್ಬಂದಿ ಕೊರತೆ, ಕಾಲೇಜಿನ ಪ್ರವೇಶ ದ್ವಾರ, ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸಲು ಪ್ರಚಾರ ಕಾರ್ಯ, ಮೂಲ ಸೌಕರ್ಯಗಳು, ಕಾಂಪೌಂಡ್ ನಿರ್ಮಾಣ, ಬಸ್ ಶೆಲ್ಟರ್, ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, ಕಾಲೇಜು ಸಮಯಕ್ಕೆ ಸರಿಯಾದ ಬಸ್ ವ್ಯವಸ್ಥೆ, ಕೆಲವು ವಾಹನಗಳು ನಿಲಗಡೆಯಾಗದಿರುವುದರಿಂದ ಬೋಧಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ಕುರಿತು, ವಿದ್ಯಾರ್ಥಿಗಳಲ್ಲಿ ಶಿಸ್ತು, ಸಭ್ಯತೆ, ಸ್ವಚ್ಛತೆ ಮುಂತಾದ ವಿಷಯಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು.ಸಮಿತಿಯ ನಿಜಲಿಂಗಪ್ಪ, ಹನುಮಂತಗೌಡ ಗೊಲ್ಲರ, ಪ್ರವೀಣ್ ಹೆಡಿಗೊಂಡ, ಸುರೇಶ್ ಪುಟ್ಟಪ್ಪನವರ, ಮಾಲತೇಶ ರಿತ್ತಿ, ನಿಂಗಪ್ಪ ಶಿವಣ್ಣನವರ, ಮಹದೇವಪ್ಪ ಜಂಗಳಿ, ಹಸನ್‌ಸಾಬ್ ಬಾಗಲಕೋಟಿ, ಪರಮೇಶಪ್ಪ ಮಣಿಗಾರ, ಪದ್ಮರಾಜ್ ಕಳಸೂರ, ನವೀನ್ ಅಳ್ಳಳ್ಳಿ, ಮೀನಾಕ್ಷಿ ಯಾದಗುಡಿ ಮಾತನಾಡಿ, ಈ ಎಲ್ಲ ಸಮಸ್ಯೆಗಳ ಬಗ್ಗೆ ಅಧ್ಯಕ್ಷರು ಆಗಿರುವ ಶಾಸಕರಾದ ರುದ್ರಪ್ಪ ಲಮಾಣಿ ಅವರ ಗಮನಕ್ಕೆ ತರುತ್ತೇವೆ. ಕಳೆದ ವರ್ಷಕ್ಕಿಂತ ಪ್ರಸಕ್ತ ವರ್ಷ ದಾಖಲಾತಿ ಕಡಿಮೆಯಾಗಿದ್ದು, ಕರಪತ್ರ, ಭಿತ್ತಿಪತ್ರಗಳ ಮೂಲಕ ವ್ಯಾಪಕ ಪ್ರಚಾರವಾಗಬೇಕು.ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗೆ ಆದ್ಯತೆ ನೀಡಬೇಕು. ಗ್ರೇಡ್ ಬಿ ಪ್ಲಸ್‌ನಿಂದ ಎ ಪ್ಲಸ್ ಕಾಲೇಜು ಆಗಬೇಕು. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಮಾನವೀಯತೆ ಜೀವನೋತ್ಸಾಹ ಮೌಲ್ಯಗಳನ್ನು ಬೆಳೆಸಬೇಕು, ಕಾಲ ಕಾಲಕ್ಕೆ ಪಾಲಕರ ಸಭೆ ನಡೆಸಿ ಅವರ ಮಕ್ಕಳ ಪ್ರಗತಿ ಕಾಳಜಿ ಬಗ್ಗೆ ತಿಳಿಸಬೇಕು ಎಂದು ಸಲಹೆ ನೀಡಿದರು.ಪ್ರಾಚಾರ್ಯ ಡಾ. ಫರ್ಜಾನಾ ಪಠಾಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ವೈ. ಮುದ್ದಾನಸ್ವಾಮಿ ಸ್ವಾಗತಿಸಿದರು. ಡಾ. ಚಂದ್ರಪ್ರಭಾ ಪಟಗಾರ ವಂದಿಸಿದರು.ಜ್ಞಾನ ವಿಜ್ಞಾನ ಸಮಿತಿಗೆ ಅವಿರೋಧ ಆಯ್ಕೆ
ಇಲ್ಲಿನ ಗುರುಭವನದಲ್ಲಿ ಭಾರತ ಜ್ಞಾನವಿಜ್ಞಾನ ಸಮಿತಿ ಆಯೋಜಿಸಿದ್ದ ತಾಲೂಕು ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಹಿರಿಯ ರಂಗ ಕಲಾವಿದ ಪ್ರಭು ಗುರುಪ್ಪನವರ ಅವರನ್ನು ತಾಲೂಕು ಗೌರವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.ಉಪಾಧ್ಯಕ್ಷರಾಗಿ ಗಿರೀಶ ದೊಡ್ಡಮನಿ, ಎಸ್.ಎಫ್. ಕಠಾರಿ, ರಂಜಿತಾ ಶೇಟ್ ಕಾಯದರ್ಶಿ, ಎಂ.ಎಸ್. ಅಮರದ ಖಜಾಂಚಿ, ರಮೇಶ ಅರಬಾಳ, ರಾಮು ಗೂರನವರ ಸಂಘಟನಾ ಕಾರ್ಯದರ್ಶಿ, ಹಾಲೇಶ್ ಎಸ್., ಕುಮಾರ ಬಡಿಗೇರ ಸಂಚಾಲಕರು, ಸಾಂಸ್ಕೃತಿಕ ಕಾರ್ಯದರ್ಶಿ ಸುನಿತಾ ಉಪ್ಪಿನ, ಎಚ್. ಸುಧಾ, ನಿರ್ದೇಶಕರು ಎಂ.ಎಂ. ಹೋತನಹಳ್ಳಿ, ರೇಖಾ ತಿರುಮಲೆ, ಮಧು ಅಪ್ಪಣ್ಣನವರ, ಜ್ಯೋತಿ ಸುರಳೇಶ್ವರ ಆಯ್ಕೆಯಾದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ, ಮಾರುತಿ ಶಿಡ್ಲಾಪೂರ, ಮಂಜುನಾಥ ಸಿ., ಅಶೋಕ ದಾಸರ, ದೀಪಾ ಗೋನಾಳ, ಎಂ. ಪ್ರಸನ್ನಕುಮಾರ, ಶೀಲಾ ಗಾಣಿಗೇರ, ಮಹೇಶ ಹೊನಕೇರಿ ಅವರು ಗೌರವ ಸಲಹೆಗಾರರಾಗಿ ಆಯ್ಕೆಯಾದರು.