ಟ್ರಕ್‌ ಟರ್ಮಿನಲ್‌ ಬರಲು ಗಣೇಶ್‌ ಕಾರಣ: ರಾಮಲಿಂಗಾರೆಡ್ಡಿ

KannadaprabhaNewsNetwork |  
Published : Dec 25, 2025, 01:30 AM IST
ಟ್ರಕ್‌ ಟರ್ಮಿನಲ್‌ ಬರಲು ಗಣೇಶ್‌ ಪ್ರಸಾದ್‌ ಕಾರಣ | Kannada Prabha

ಸಾರಾಂಶ

ರಾಜ್ಯದಲ್ಲಿ ಸಾವಿರಾರು ಟ್ರಕ್‌ ಟರ್ಮಿನಲ್‌ಗಳಿವೆ ಜೊತೆಗೆ ನೆರೆ ರಾಜ್ಯದ ಟ್ರಕ್‌ ಟರ್ಮಿನಗಳಿದ್ದು, ವಾಹನಗಳ ನಿಲುಗಡೆಗೆ ಜಾಗ ಒದಗಿಸಿ ಮೂಲ ಸೌಕರ್ಯ ಒದಗಿಸುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಇಲ್ಲಿಗೆ ಜಾಗ ಒದಗಿಸುವ ಮೂಲಕ ಟ್ರಕ್‌ ಟರ್ಮಿನಲ್‌ ಗುಂಡ್ಲುಪೇಟೆಗೆ ಬರಲು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಕಾರಣ ಎಂದು ಸಾರಿಗೆ ಮತ್ತು ಮುಜರಾಯಿ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.ಗುಂಡ್ಲುಪೇಟೆ-ಚಾಮರಾಜನಗರ ರಸ್ತೆಯ ಚಿಕ್ಕತುಪ್ಪೂರು ಬಳಿ ನಿರ್ಮಾಣ ಹಂತದ ಟ್ರಕ್‌ ಟರ್ಮಿನಲ್‌ ಪರಿವೀಕ್ಷಣೆ ಬಳಿಕ ಮಾತನಾಡಿದ ಅವರು 13 ಎಕರೆ ಪ್ರದೇಶದಲ್ಲಿ ಟ್ರಕ್‌ ಟರ್ಮಿನಲ್‌ ಗುಂಡ್ಲುಪೇಟೆ ಬಳಿ ಆರಂಭವಾಗುತ್ತಿದೆ ಎಂದರು.

ರಾಜ್ಯದಲ್ಲಿ ಸಾವಿರಾರು ಟ್ರಕ್‌ ಟರ್ಮಿನಲ್‌ಗಳಿವೆ ಜೊತೆಗೆ ನೆರೆ ರಾಜ್ಯದ ಟ್ರಕ್‌ ಟರ್ಮಿನಗಳಿದ್ದು, ವಾಹನಗಳ ನಿಲುಗಡೆಗೆ ಜಾಗ ಒದಗಿಸಿ ಮೂಲ ಸೌಕರ್ಯ ಒದಗಿಸುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ ಇದರಿಂದ ಚಾಲಕರು, ಕ್ಲೀನರ್‌ ಹಾಗೂ ಕೂಲಿ ಕಾರ್ಮಿಕರಿಗೂ ಅನುಕೂಲವಾಗಲಿದೆ ಎಂದರು.

ಉಚಿತವಾಗಿ ನಿಲ್ಲಿಸಿ:ಗುಂಡ್ಲುಪೇಟೆ ಟ್ರಕ್‌ ಟರ್ಮಿನಲ್‌ ಇರುವ ಜಾಗ ಕಪ್ಪು ಮಣ್ಣಿನಿಂದ ಕೂಡಿದೆ. ಸದರಿ ಜಾಗದಲ್ಲಿ ಲಾರಿಗಳು ಉಚಿತವಾಗಿ ನಿಲ್ಲಿಸಲಿ, ದುಡ್ಡೇನು ಕಟ್ಟಬೇಕಿಲ್ಲ. ಲಾರಿಗಳ ಸಂಚಾರದಿಂದ ಭೂಮಿ ಗಟ್ಟಿಯಾದ ಬಳಿಕ ಕಾಂಕ್ರೀಟ್‌ ಹಾಕಲಾಗುವುದು. ಅಲ್ಲಿಯ ತನಕ ಯಾವುದೇ ಶುಲ್ಕ ಇಲ್ಲದೆ ಲಾರಿ ಚಾಲಕರು ಹಾಗೂ ಮಾಲೀಕರು ಬಳಕೆ ಮಾಡಿಕೊಳ್ಳಲಿ ಎಂದರು.

ಟ್ರಕ್‌ ಟರ್ಮಿನಲ್‌ ಸ್ಥಾಪನೆ ಹಾಗೂ ಮೂಲ ಸೌಕರ್ಯಗಳಿಗೆ ಮುಂದಿನ ಬಜೆಟ್‌ನಲ್ಲಿ ಅನುದಾನ ಬಂದ ಬಳಿಕ ಗುಂಡ್ಲುಪೇಟೆ ಟ್ರಕ್‌ ಟರ್ಮಿನಲ್‌ಗೆ ಪ್ರಥಮ ಆದ್ಯತೆ ಮೇರೆಗೆ ಅನುದಾನ ನೀಡಲಾಗುವುದು ಎಂದರು.

ಪೇಟೆಗೆ ಬಸ್‌ ಕೊಡುವೆ:

ಗುಂಡ್ಲುಪೇಟೆ ಘಟಕದಲ್ಲಿ ಬಸ್‌ ಗಳ ಕೊರತೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ಇದೀಗ 900 ಬಸ್‌ಗಳ ಖರೀದಿ ಮಾಡಲು ಆದೇಶ ಹೊರಡಿಸಿದ್ದೇನೆ. ಮೈಸೂರು ನಗರಕ್ಕೆ 100 ಎಲೆಕ್ಟ್ರಿಕ್‌ ಬಸ್‌ ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶಕ್ಕೂ ಬಸ್‌ ಒದಗಿಸುವಾಗ ಗುಂಡ್ಲುಪೇಟೆಗೂ ಬಸ್‌ ನೀಡುತ್ತೇನೆ ಎಂದು ಭರವಸೆ ನೀಡಿದರು.

2019 ರಿಂದ 23ರ ತನಕ ಬಸ್‌ ಖರೀದಿಸಿರಲಿಲ್ಲ. ಹಾಗಾಗಿ ಬಸ್‌ಗಳ ಕೊರತೆ ಎದುರಾಗಿದೆ ಎಂದು ಸ್ಪಷ್ಟಪಡಿಸಿದ ಅವರು, ಮುಂದಿನ ದಿನಗಳಲ್ಲಿ ಬಸ್ ಗಳ ಸಮಸ್ಯೆ ನೀಗಲಿದೆ ಎಂದರು.

ಡಿ.ದೇವರಾಜ ಅರಸ್‌ ಟ್ರಕ್‌ ಟರ್ಮಿನಲ್‌ ಅಧ್ಯಕ್ಷ ಸಯ್ಯದ್‌ ಅಹಮದ್‌ ಮಾತನಾಡಿ, ಇತ್ತೀಚಗೆ ನಾನು ಅಧ್ಯಕ್ಷನಾಗಿದ್ದು, ಲಾರಿ ಚಾಲಕರು, ಕಾರ್ಮಿಕರು ವಾಸ್ತವ್ಯ ಹೂಡಲು ಟರ್ಮಿನಲ್‌ ಉಪಯೋಗವಾಗಲಿದೆ. ಹಾಗಾಗಿ ವೀಕ್ಷಣೆಗೆ ಬಂದಿದ್ದು, ಗುಂಡ್ಲುಪೇಟೆ ಟ್ರಕ್‌ ಟರ್ಮಿನಲ್‌ ಆದಷ್ಟು ಬೇಗ ಆರಂಭವಾಗಲಿ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಮಾತನಾಡಿ, ಗುಂಡ್ಲುಪೇಟೆಯಲ್ಲಿ ಟ್ರಕ್‌ ಟರ್ಮಿನಲ್‌ ಆರಂಭಕ್ಕೆ ಮೂಲ ಸೌಕರ್ಯಗಳನ್ನು ಒಗಿಸಿದ ಬಳಿಕ ಅಧಿಕೃತವಾಗಿ ಟರ್ಮಿನಲ್‌ ಆರಂಭವಾಗಲಿದೆ ಎಂದರು.

ಸಭೆಯಲ್ಲಿ ಕಾಡ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಗ್ರಾಪಂ ಅಧ್ಯಕ್ಷೆ ಮೀನಾ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್‌, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ್‌, ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ನಿರ್ದೇಶಕ ಆಲತ್ತೂರು ಜಯರಾಂ, ಟಿಎಪಿಸಿಎಂಎಸ್‌ ಅಧ್ಯಕ್ಷ ಜಿ.ಮಡಿವಾಳಪ್ಪ, ಹಾಪ್‌ ಕಾಮ್ಸ್‌ ಅಧ್ಯಕ್ಷ ಎಂ.ನಾಗೇಶ್‌, ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ.ಬಿ.ರಾಜಶೇಖರ್‌, ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಉಮಾಪತಿ, ಎಪಿಎಂಸಿ ಮಾಜಿ ಅಧ್ಯಕ್ಷ ಕರಕಲಮಾದಹಳ್ಳಿ ಪ್ರಭುಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ಕಿಲಗೆರೆ ಪ್ರಸಾದ್, ಪುರಸಭೆ ಮಾಜಿ ಸದಸ್ಯರಾದ ಬಿ.ಕುಮಾರಸ್ವಾಮಿ, ಎನ್.ಕುಮಾರ್, ಪುರಸಭೆ ಮಾಜಿ ಅಧ್ಯಕ್ಷ ಮಧು, ಮುಖಂಡರಾದ ಅಭಿಷೇಕ್‌, ಆದರ್ಶ, ಮಣಿ ಮಡಹಳ್ಳಿ, ಅರುಣ್‌ ಚಿಟ್ಟೆ ಸೇರಿದಂತೆ ಹಲವರಿದ್ದರು.

><

ಸಚಿವರ ಸೂಚನೆ, ಅಭಿವೃದ್ಧಿಗೆ ಒತ್ತುಗುಂಡ್ಲುಪೇಟೆ: ಟ್ರಕ್‌ ಟರ್ಮಿನಲ್‌ಗೆ ಅನುದಾನ ಕೊರತೆ ನಡುವೆಯೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ ಮೇರೆಗೆ ಅಭಿವೃದ್ಧಿಗೆ ಟ್ರಕ್‌ ಟರ್ಮಿನಲ್‌ ವ್ಯವಸ್ಥಾಪಕ ನಿರ್ದೇಶಕ ಶಿವಪ್ರಸಾದ್‌ ಮುಂದಾಗಿದೆ ಎಂದರು.

ಸಚಿವ ರಾಮಲಿಂಗರೆಡ್ಡಿ, ಟ್ರಕ್‌ ಟರ್ಮಿನಲ್‌ ಅಧ್ಯಕ್ಷ ಸಯ್ಯದ್‌ ಅಹಮದ್‌ ಹಾಗೂ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಟರ್ಮಿನಲ್‌ ಪರಿವೀಕ್ಷಣೆ ಬಳಿಕ ನಡೆದ ಸರಳ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಗುಂಡ್ಲುಪೇಟೆ ಟ್ರಕ್‌ ಟರ್ಮಿನಲ್‌ 13 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದ್ದು, 293 ಟ್ರಕ್‌ ನಿಲ್ಲಲು ಅವಕಾಶವಿದೆ. ಪ್ರತ್ಯೇಕ ಕಾರು ಪಾರ್ಕಿಂಗ್‌, 34 ಏಜೆಂಟರ ಕಚೇರಿ, 18 ಗೋಡೌನ್‌, ಕಮರ್ಷಿಯಲ್‌ ನಿವೇಶನ, ವಸತಿ ಗೃಹ, ವೇ ಬ್ರಿಡ್ಜ್, ಎರಡು ಶೌಚಾಲಯ, ವಾಹನಗಳ ಸರ್ವೀಸ್‌ ಸ್ಟೇಷನ್‌ ಹಾಗೂ ಪೆಟ್ರೋಲ್‌ ಬಂಕ್‌ ಜೊತೆಗೆ 9 ಗ್ರೀನ್‌ ಪಾರ್ಕ್‌ ಕೂಡ ಮಾಡಲಾಗುತ್ತದೆ ಎಂದರು.

13 ಎಕರೆ ಪ್ರದೇಶದ ಟರ್ಮಿನಲ್‌ಗೆ ಸುತ್ತು ಗೋಡೆ ಹಾಗೂ ಗೇಟ್‌ ಕೂಡ ಹಾಕಲಾಗಿದೆ. ಟರ್ಮಿನಲ್‌ ಜಾಗ ಕಪ್ಪು ಮಣ್ಣಾಗಿರುವ ಕಾರಣ ವರ್ಷದ ಬಳಿಕ ಕಾಂಕ್ರೀಟ್‌ ಮಾಡಲಾಗುವುದು ಎಂದರು.

೨೪ಜಿಪಿಟಿ೧ಗುಂಡ್ಲುಪೇಟೆ ಟ್ರಕ್‌ ಟರ್ಮಿನಲ್‌ನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ,ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌,ಟ್ರಕ್‌ ಟರ್ಮಿನಲ್‌ ಅಧ್ಯಕ್ಷ ಸಯ್ಯದ್‌ ಅಹಮದ್‌ ಪರಿವೀಕ್ಷಣೆ ನಡೆಸಿದರು.

-------೨೪ಜಿಪಿಟಿ೨

ಗುಂಡ್ಲುಪೇಟೆ ಟ್ರಕ್‌ ಟರ್ಮಿನಲ್‌ ಪರಿವೀಕ್ಷಣೆ ಸಮಯದಲ್ಲಿ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಮಾತನಾಡಿದರು.

----------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದು 2028ರವರೆಗೂ ಸಿಎಂ, ಇಳಿಸಲು ಆಗೋಲ್ಲ: ಜಮೀರ್‌
ಫೆ.೮ರಂದು ಶ್ರೀ ರಾಮಲಿಂಗೇಶ್ವರ ಮಠ ಲೋಕಾರ್ಪಣೆ