ಹತ್ತಿ ಮಾರುಕಟ್ಟೆಗೆ ಗಣೇಶ್‌ ಪ್ರಸಾದ್ ಭೇಟಿ

KannadaprabhaNewsNetwork |  
Published : Aug 27, 2025, 01:00 AM IST
ಕನ್ನಡಪ್ರಭ ವರದಿ ಪರಿಣಾಮ | Kannada Prabha

ಸಾರಾಂಶ

ಉದ್ಘಾಟನೆಗೆ ಸಿದ್ಧವಾದ ಬೇಗೂರು ಹತ್ತಿ ಮಾರುಕಟ್ಟೆ ಎಂದು ಕನ್ನಡಪ್ರಭ ವರದಿ ಬೆನ್ನಲ್ಲೇ ಸ್ಥಳೀಯ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ನಿರ್ಮಾಣಗೊಂಡ ಬೇಗೂರು ಹತ್ತಿ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಉದ್ಘಾಟನೆಗೆ ಸಿದ್ಧವಾದ ಬೇಗೂರು ಹತ್ತಿ ಮಾರುಕಟ್ಟೆ ಎಂದು ಕನ್ನಡಪ್ರಭ ವರದಿ ಬೆನ್ನಲ್ಲೇ ಸ್ಥಳೀಯ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ನಿರ್ಮಾಣಗೊಂಡ ಬೇಗೂರು ಹತ್ತಿ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೇಗೂರು ಹತ್ತಿ ಮಾರುಕಟ್ಟೆ ಎಲ್ಲಾ ಕಾಮಗಾರಿ ಪೂರ್ಣಗೊಂಡಿದೆಯಾ? ಬಾಕಿ ಏನಾದರೂ ಕೆಲಸ ಉಳಿದುಕೊಂಡಿದೆಯಾ ಎಂದು ಎಪಿಎಂಸಿ ಅಧ್ಯಕ್ಷ ಆರ್.ಎಸ್.ನಾಗರಾಜು, ಕಾರ್ಯದರ್ಶಿ ಎಸ್.ಶ್ರೀಧರ್‌ರಿಂದ ಶಾಸಕರು ಮಾಹಿತಿ ಪಡೆದರು.

ಬಳಿಕ ಪ್ರಾಂಗಣದ ಒಂದು ಸುತ್ತು ಪ್ರದಕ್ಷಿಣೆ ನಡೆಸಿದ ನಂತರ ಮಾತನಾಡಿ, ಹತ್ತಿ ಮಾರುಕಟ್ಟೆ ಉದ್ಘಾಟನೆಗೆ ಮುಖ್ಯಮಂತ್ರಿಗಳ ಆಹ್ವಾನಿಸಲಾಗುವುದು ಎಂದರು.

ಕೆಲ ವರ್ತಕರು ಹತ್ತಿ ಮಾರುಕಟ್ಟೆಯಲ್ಲಿ ಹತ್ತಿ ಜೊತೆಗೆ ಇನ್ನಿತರ ರೈತರ ಬೆಳೆದ ಫಸಲು ಮಾರಾಟಕ್ಕೆ ಅವಕಾಶ ಮಾಡಿಕೊಡಿ ಎಂದು ಶಾಸಕರಲ್ಲಿ ಮನವಿ ಮಾಡಿದಾಗ ಪ್ರತಿಕಿಯಿಸಿದ ಶಾಸಕರು, ಎಪಿಎಂಸಿ ನಿಯಮದಂತೆ ಅವಕಾಶ ಮಾಡಿಕೊಡಿ ಎಂದು ಎಪಿಎಂಸಿ ಕಾರ್ಯದರ್ಶಿ ಎಸ್.ಶ್ರೀಧರ್‌ಗೆ ಸೂಚನೆ ನೀಡಿದರು.

ನೂತನ ಹತ್ತಿ ಮಾರುಕಟ್ಟೆ ಉದ್ಘಾಟನೆಯ ಬಳಿಕ ಎಪಿಎಂಸಿ ನಿಯಮದಂತೆ ಹತ್ತಿ ಸೇರಿದಂತೆ ಇನ್ನಿತರ ಬೆಳೆಗಳ ಖರೀದಿಗೂ ಅವಕಾಶ ಮಾಡಿ ಕೊಡಲು ಸಾಧ್ಯ ಎಂದು ಎಪಿಎಂಸಿ ಕಾರ್ಯದರ್ಶಿ ಎಸ್.ಶ್ರೀಧರ್‌ ಹೇಳಿದರು.

ಶಾಸಕರೊಂದಿಗೆ ಎಪಿಎಂಸಿ ಅಧ್ಯಕ್ಷ ಆರ್.ಎಸ್.ನಾಗರಾಜು, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್‌,ಎಪಿಎಂಸಿ ಮಾಜಿ ಅಧ್ಯಕ್ಷರಾದ ಬಸವರಾಜು,ಕೆ.ಎಸ್.ಶಿವಪ್ರಕಾಶ್‌,ಜಿಪಂ ಮಾಜಿ ಸದಸ್ಯ ಕೆ.ಶಿವಸ್ವಾಮಿ,ತಾಪಂ ಮಾಜಿ ಅಧ್ಯಕ್ಷರಾದ ಎಚ್.ಎನ್.ಬಸವರಾಜು,ಮಧುಶಂಕರ್‌,ಮಾಜಿ ಉಪಾಧ್ಯಕ್ಷ ಬಂಗಾರನಾಯಕ,ಎಪಿಎಂಸಿ ಸದಸ್ಯ ಅರಸಶೆಟ್ಟಿ,ವಿರೂಪಾಕ್ಷ,ಗ್ರಾಪಂ ಸದಸ್ಯ ಬಿ.ಎನ್.ಪುನೀತ್‌,ಮುಖಂಡರಾದ ಕಮರಹಳ್ಳಿ ರಾಜೇಶ್‌, ಚಂದ್ರು,ರಾಜಶೆಟ್ಟಿ,ಮಡಹಳ್ಳಿ ಮಣಿ,ಸೋಮಹಳ್ಳಿ ರವಿ,ಹೊರೆಯಾಲ ಶರತ್‌,ರಾಜೇಶ್‌ ಅಗತಗೌಡನಹಳ್ಳಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ