ಗಜಾನನ ಮಂಡಳಿಗಳಿಗೆ ಗಣೇಶ ಪೂಜೆ ಹೊಣೆ

KannadaprabhaNewsNetwork |  
Published : Aug 25, 2025, 01:00 AM IST
ಗಜಾನನ ಮಹಾಮಂಡಳದ ಪೂರ್ವಭಾವಿ ಸಭೆ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಗಜಾನನ ಉತ್ಸವ ಮಹಾಮಂಡಲವು ನಗರದಲ್ಲಿ ಪ್ರತಿಷ್ಠಾಪನೆ ಆಗುವ ಎಲ್ಲ ಗಜಾನನ ಮಂಡಳಿಗಳು ಹಿಂದೂ ಸಂಪ್ರದಾಯದಂತೆ ಬೆಳಗ್ಗೆ ಮತ್ತು ಸಂಜೆ ಪೂಜೆ ನಡೆಸಬೇಕು. ಪೆಂಡಾಲ್‌ಗಳಲ್ಲಿ ಭಕ್ತಿಗೀತೆಗಳನ್ನು ಹಾಕಬೇಕು, ಪ್ರಸಾದ ವ್ಯವಸ್ಥೆ ಮಾಡಬೇಕು. ಗಣೇಶ ಉತ್ಸವವನ್ನು ನೋಡಲು ಜಿಲ್ಲೆಯಿಂದ ಮತ್ತು ಹೊರ ಜಿಲ್ಲೆಯಿಂದ ಸಾಕಷ್ಟು ಜನ ಬರುತ್ತಿದ್ದು, ಬೆಳಗಿನ ಜಾವ ಗಣೇಶ ವಿಸರ್ಜನಾ ಮೆರವಣಿಗೆಯನ್ನ ಪ್ರಾರಂಭ ಮಾಡಿ ನೋಡಲು ಬಂದಂತಹ ಭಕ್ತರಿಗೆ ಅನುವು ಮಾಡಿಕೊಡಬೇಕು ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಗಜಾನನ ಉತ್ಸವ ಮಹಾಮಂಡಲವು ನಗರದಲ್ಲಿ ಪ್ರತಿಷ್ಠಾಪನೆ ಆಗುವ ಎಲ್ಲ ಗಜಾನನ ಮಂಡಳಿಗಳು ಹಿಂದೂ ಸಂಪ್ರದಾಯದಂತೆ ಬೆಳಗ್ಗೆ ಮತ್ತು ಸಂಜೆ ಪೂಜೆ ನಡೆಸಬೇಕು. ಪೆಂಡಾಲ್‌ಗಳಲ್ಲಿ ಭಕ್ತಿಗೀತೆಗಳನ್ನು ಹಾಕಬೇಕು, ಪ್ರಸಾದ ವ್ಯವಸ್ಥೆ ಮಾಡಬೇಕು. ಗಣೇಶ ಉತ್ಸವವನ್ನು ನೋಡಲು ಜಿಲ್ಲೆಯಿಂದ ಮತ್ತು ಹೊರ ಜಿಲ್ಲೆಯಿಂದ ಸಾಕಷ್ಟು ಜನ ಬರುತ್ತಿದ್ದು, ಬೆಳಗಿನ ಜಾವ ಗಣೇಶ ವಿಸರ್ಜನಾ ಮೆರವಣಿಗೆಯನ್ನ ಪ್ರಾರಂಭ ಮಾಡಿ ನೋಡಲು ಬಂದಂತಹ ಭಕ್ತರಿಗೆ ಅನುವು ಮಾಡಿಕೊಡಬೇಕು ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹೇಳಿದರು.

ನಗರದ ಕಾಳಿಕಾ ದೇವಸ್ಥಾನದಲ್ಲಿ ಗಜಾನನ ಉತ್ಸವ ಮಾಹಾಮಂಡಲ, ಛತ್ರಪತಿ ಶಿವಾಜಿ ಮಹಾರಾಜ್ ವೃತ್ತ ವತಿಯಿಂದ ಗಜಾನನ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಫೈಬರ್ ಗಜಾನನ ಮೂರ್ತಿಯನ್ನು ಶಿವಾಜಿ ಮಹಾರಾಜ್ ವೃತ್ತದಲ್ಲಿ ಪ್ರತಿಷ್ಠಾಪನೆ ಮಾಡಿ ಎಲ್ಲರಿಗೆ ಮಾದರಿಯಾಗಿದೆ. ಇದೀಗ ನಗರದಲ್ಲಿ ಸುಮಾರು 11 ಫೈಬರ್ ಮೂರ್ತಿಗಳು ತಮಗೆ ಕಾಣಲು ಸಿಗುತ್ತವೆ. ಪರಿಸರ ಕಾಳಜಿಯನ್ನ ಗಮನದಲ್ಲಿಟ್ಟುಕೊಂಡು ಸುಮಾರು ಮೂರು ವರ್ಷ ಕಾಲ ಮಣ್ಣಿನ ಗಜಾನನ ಮೂರ್ತಿಗಳನ್ನು ಉಚಿತ ವಿತರಿಸಲಾಗಿದೆ. ಈಗ 96ನೇ ಸೋಮವಾರ ಯಶಸ್ವಿಯಾಗಿ ಈ ದಾಸೋಹ ನಡೆಯುತ್ತಿದೆ ಎಂದರು.

ಗಜಾನನ ಉತ್ಸವ ಮಹಾಮಂಡಲದ ಈ ವರ್ಷದ ಅಧ್ಯಕ್ಷರಾಗಿ ಆಯ್ಕೆಯಾದ ರಾಜು ಹೊನ್ನೂರ ಮಾತನಾಡಿ, ನನ್ನನ್ನು ಅಧ್ಯಕ್ಷರನ್ನಾಗಿ ಮಾಡಿದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹಾಗೂ ಗಜಾನನ ಮಂಡಳಿಯ ಎಲ್ಲ ಸದಸ್ಯರಿಗೂ ಧನ್ಯವಾದಗಳನ್ನು ತಿಳಿಸಿದರು. ನಗರದಲ್ಲಿ ಆಚರಿಸುವ ಗಜಾನನ ಉತ್ಸವ ಅತಿ ವಿಜೃಂಭಣೆಯಿಂದ ಆಚರಿಸಿ ಕರ್ನಾಟಕ ರಾಜ್ಯದಲ್ಲಿ ಮಾದರಿ ಗಜಾನೋತ್ಸವವನ್ನು ನಗರದಲ್ಲಿ ಆಚರಿಸೋಣ ಎಂದು ಎಲ್ಲರೂ ಮಂಡಳಿಗಳಿಗೆ ಕರೆ ನೀಡಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರ, ಮುಖಂಡರಾದ ಗೋಪಾಲ ಘಟಕಾಂಬಳೆ, ರವಿಕಾಂತ ಬಗಲಿ, ರಾಜು ಕರಭಂಟನಾಳ, ಶಿವಾನಂದ ಮಾನಕರ, ಮತ್ತು ಮಂಡಳಿಯ ಎಲ್ಲ ಸದಸ್ಯರು ಈ ಸಭೆಯಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ