ತುಳು ಸಾಹಿತ್ಯ ಜಗತ್ತಿಗೆ ತಲುಪಲಿ: ಗಣೇಶ್ ರಾವ್

KannadaprabhaNewsNetwork |  
Published : Nov 19, 2026, 02:45 AM IST
ತುಳುನಾಡಿನ ಜನಪದ ಕಥೆಗಳ ಸರಣಿಯ ಐದು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ನಡೆಯಿತು | Kannada Prabha

ಸಾರಾಂಶ

ಪ್ರಾದೇಶಿಕ ಭಾಷೆಯ ಸಾಹಿತ್ಯ ಜಾಗತಿಕ ಭಾಷೆಗೆ ಅನುವಾದಗೊಂಡರೆ ದೇಶೀಯ ಸಾಂಸ್ಕೃತಿಕ ಮೌಲ್ಯಗಳು, ಭಾಷೆಯ ಸಾಹಿತ್ಯಿಕ ಸಂಪತ್ತು ಜಗದಗಲ ಪರಿಚಯವಾಗುವುದು ಎಂದು ಕರಾವಳಿ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷ ಗಣೇಶ್ ಎಸ್.ರಾವ್ ಹೇಳಿದರು.

ಮಂಗಳೂರು: ಪ್ರಾದೇಶಿಕ ಭಾಷೆಯ ಸಾಹಿತ್ಯ ಜಾಗತಿಕ ಭಾಷೆಗೆ ಅನುವಾದಗೊಂಡರೆ ದೇಶೀಯ ಸಾಂಸ್ಕೃತಿಕ ಮೌಲ್ಯಗಳು, ಭಾಷೆಯ ಸಾಹಿತ್ಯಿಕ ಸಂಪತ್ತು ಜಗದಗಲ ಪರಿಚಯವಾಗುವುದು ಎಂದು ಕರಾವಳಿ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷ ಗಣೇಶ್ ಎಸ್.ರಾವ್ ಹೇಳಿದರು.

ನಗರದ ಪಾದುವ ಪ್ರೌಢಶಾಲೆಯಲ್ಲಿ ಹಮ್ಮಿಕೊಳಲಾದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ತುಳುವಿನಿಂದ ಇಂಗ್ಲೀಷ್‌ಗೆ ಅನುವಾದಿಸಿದ ಮಕ್ಕಳಿಗಾಗಿ ತುಳುನಾಡಿನ ಜನಪದ ಕಥೆಗಳ ಸರಣಿಯ ಐದು ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಮಾತನಾಡಿ, ತುಳುನಾಡಿನ ಕಥೆಗಳನ್ನು ಹೊರ ಜಿಲ್ಲೆ, ರಾಜ್ಯ ಹೊರ ಜಗತ್ತಿಗೆ ತಲುಪಿಸುವುದು ಹಾಗೂ ಅವುಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವ ಉದ್ದೇಶದಿಂದ ಆಂಗ್ಲ ಆವೃತ್ತಿಗಳನ್ನು ಪ್ರಕಟಿಸಲಾಗಿದೆ ಎಂದರು.

ಪಾದುವ ಕಾಲೇಜಿನ ಪ್ರಾಂಶುಪಾಲ ಅರುಣ್ ವಿಲ್ಸನ್ ಲೋಬೊ ಅಧ್ಯಕ್ಷತೆ ವಹಿಸಿದ್ದರು. ಪಾದುವ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ರೋಸಿನ ಫ್ಲಾರೆನ್ಸ್ ಡಿಸೋಜಾ, ಪೋಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಮಮತಾ, ವಿದ್ಯಾರ್ಥಿ ಪ್ರತಿನಿಧಿ ವೈಷ್ಣವಿ ಇದ್ದರು.

ತುಳು ಅಕಾಡೆಮಿ ಸದಸ್ಯೆ ಅಕ್ಷಯ ಆರ್.ಶೆಟ್ಟಿ ಸ್ವಾಗತಿಸಿದರು. ಐಶ್ವರ್ಯ ವಂದಿಸಿದರು. ಜಯಂತ್ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಪಿಆರ್ ಸಿದ್ಧಪಡಿಸಲು ತ್ವರಿತ ಅನುಮೋದನೆ ನೀಡಿ
ಆರ್‌ಎಸ್‌ಎಸ್‌ ಆಕರ್ಷಕ ಪಥ ಸಂಚಲನ