ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ ಭಾರತೀಯ ಸಂಸ್ಕೃತಿ, ಪರಂಪರೆ ಹಾಗೂ ಧಾರ್ಮಿಕ ಮೌಲ್ಯಗಳನ್ನು ಉಳಿಸಿ ಬೆಳೆಸುವಲ್ಲಿ ಗಣೇಶೋತ್ಸವದ ಆಚರಣೆ ಮಹತ್ವದ್ದು, ಯುವಜನತೆ ನಮ್ಮ ಸಂಸ್ಕೃತಿ ಹಾಗೂ ಪರಂಪರೆಯೊಂದಿಗೆ ಬೆಸೆಯಲು ಗಣೇಶೋತ್ಸವ ಅವಶ್ಯವಾಗಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಭಾರತೀಯ ಸಂಸ್ಕೃತಿ, ಪರಂಪರೆ ಹಾಗೂ ಧಾರ್ಮಿಕ ಮೌಲ್ಯಗಳನ್ನು ಉಳಿಸಿ ಬೆಳೆಸುವಲ್ಲಿ ಗಣೇಶೋತ್ಸವದ ಆಚರಣೆ ಮಹತ್ವದ್ದು, ಯುವಜನತೆ ನಮ್ಮ ಸಂಸ್ಕೃತಿ ಹಾಗೂ ಪರಂಪರೆಯೊಂದಿಗೆ ಬೆಸೆಯಲು ಗಣೇಶೋತ್ಸವ ಅವಶ್ಯವಾಗಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಭಿಪ್ರಾಯಪಟ್ಟರು.ತಾಲೂಕಿನ ಕೋರವಾರ ಗ್ರಾಮದಲ್ಲಿ ಸೋಮವಾರ ನಡೆದ 7ನೇ ವರ್ಷದ ಹಿಂದೂ ಮಹಾಗಣಪತಿ ವಿಸರ್ಜನಾ ಶೋಭಾಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಣೇಶೋತ್ಸವದಿಂದ ಯುವಕರಲ್ಲಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿತು. ಕಾಂಗ್ರೆಸ್ ಸರ್ಕಾರ ಆಚರಣೆಗೆ ಇಂದು ನಿಯಮಗಳನ್ನು ವಿಧಿಸಿದೆ. ಹಿಂದುತ್ವ ಉಳಿಸಲು ನಾವೆಲ್ಲರೂ ಜಾಗೃತರಾಗಬೇಕಾಗಿದೆ. ನಮ್ಮ ಧರ್ಮ ಎಲ್ಲರನ್ನು ಅಪ್ಪಿಕೊಳ್ಳುತ್ತದೆ. ಇದಕ್ಕೆ ಉದಾಹರಣೆ ಪೈಲೆಟ್ ಮಚ್ಚಾರ ಹನುಮಾನ್ ಚಾಲೀಸ್ ಪಠಣದಿಂದ ಸುಮಾರು 187 ಜನರ ಪ್ರಾಣ ಕಾಪಾಡಿದ್ದಾನೆ. ಇದು ವಿಶ್ವಕ್ಕೆ ಮಾದರಿ. ಸರ್ಕಾರ ರೈತರಿಗೆ ಬರ ಪರಿಹಾರ ಒದಗಿಸದೆ ಭಿಕಾರಿಗಳಂತೆ ಕಾಣುತ್ತಿದೆ. ಎಲ್ಲರೂ ಪರಿಹಾರ ಒಪ್ಪಬಾರದು. ಪ್ರಧಾನಿ ಮೋದಿ ಅಗ್ನಿ ವೀರರನ್ನು ನೇಮಕ ಮಾಡಿ ಯುವಕರಿಗೆ ಉದ್ಯೋಗ ಕೊಡುತ್ತಿದ್ದಾರೆ. ಕೋರವಾರ ಗ್ರಾಮದ ಗಣೇಶೋತ್ಸವ ಸಮಾಜದಲ್ಲಿ ಒಗ್ಗಟ್ಟು, ಜಾಗೃತಿ ಹಾಗೂ ರಾಷ್ಟ್ರಭಕ್ತಿಯ ಭಾವನೆ ಮೂಡಿಸಲು ಯುವಕರು ಇತರರಿಗೆ ಪ್ರೇರಣೆಯ ಕೆಲಸ ಮಾಡಿದ್ದಾರೆ ಎಂದು ಹೇಳಿದರು. ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಮಾತನಾಡಿ, ಗಣೇಶೋತ್ಸವದ ಮೂಲಕ ಜನರಲ್ಲಿ ರಾಷ್ಟ್ರೀಯತೆ ಹಾಗೂ ಸಂಘಟನೆಯ ಭಾವನೆ ಮೂಡಿಸಲು ಹಾಗೂ ಯುವಕರು ಒಂದೆಡೆ ಸೇರಿಸುವ ಮೂಲಕ ಸಮಾಜದಲ್ಲಿ ಏಕತೆ ಮತ್ತು ಸಹೋದರತ್ವ ಬೆಳೆಸಲು ಸಹಕಾರಿಯಾಗಿದೆ ಎಂದರು.ಕಾರ್ಯಕ್ರಮದ ಸಾನಿಧ್ಯವನ್ನು ಆಲಮೇಲ ವಿರಕ್ತಮಠದ ಜಗದೇವ ಮಲ್ಲಿ ಬೊಮ್ಮಯ್ಯ ಸ್ವಾಮಿಗಳು ಮಾತನಾಡಿ, ಭಾರತದ ಸಂಸ್ಕೃತಿ ಹಾಗೂ ಪರಂಪರೆ ಇಡೀ ಜಗತ್ತಿಗೆ ಮಾದರಿಯಾಗಿದೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ನಮ್ಮ ಸಂಸ್ಕೃತಿಯ ಮೌಲ್ಯಗಳನ್ನು ಪ್ರತಿಯೊಬ್ಬರೂ ಅರಿತುಕೊಂಡು ಮುಂದಿನ ಪೀಳಿಗೆಗೆ ತಲುಪಿಸಬೇಕು ಎಂದು ಹೇಳಿದರು.ಬಿಜೆಪಿ ಮುಖಂಡರಾದ ಆರ್.ಎಸ್.ಪಾಟೀಲ ಕೂಚಬಾಳ, ಡಾ.ಬಿ.ಎಸ್.ಪಾಟೀಲ ನಾಗರಾಳ ಹುಲಿ, ಬಸನಗೌಡ ಪಾಟೀಲ ಯಡಿಯಾಪೂರ ಮಾತನಾಡಿ, ಹಿಂದುತ್ವ ಸದೃಢವಾದರೆ ಜಗತ್ತು ಶಾಂತಿಯಿಂದ ಇರುತ್ತದೆ. ದೇಶಕ್ಕಾಗಿ ಮೊದಲು ಎನ್ನುವ ಭಾವನೆ ಯುವಕರಲ್ಲಿ ಬರಬೇಕಾಗಿದೆ. ಹಿಂದುತ್ವವನ್ನು ಜಾಗೃತಗೊಳಿಸುವ ಸಲುವಾಗಿ ವಿಜಯಪುರ ನಗರದ ಶಾಸಕರಾದ ಯತ್ನಾಳರು ಶ್ರಮವಹಿಸುತ್ತಿದ್ದಾರೆ ಎಂದು ಹೇಳಿದರು.ಕಾರ್ಯಕ್ರಮದ ಸಾನಿಧ್ಯವನ್ನು ಸ್ಥಳೀಯ ಚೌಕಿಮಠದ ಶ್ರೀಗಳು ವಹಿಸಿದ್ದರು. ಈ ಸಂದರ್ಭದಲ್ಲಿ ಮುಖಂಡರುರಾದ ಸಿದ್ದು ಬುಳ್ಳಾ, ರಮೇಶ ಮಸಿಬಿನಾಳ, ರಾಜಶೇಖರ ಛಾಯಗೋಳ, ಶೇಖರಗೌಡ ಪೊಲೀಸ ಪಾಟೀಲ, ಭೀಮನಗೌಡ ಸಿದ್ದರೆಡ್ಡಿ, ಶ್ರೀನಾಥಗೌಡ ಪಾಟೀಲ, ಬಾಪುಗೌಡ ಬಿರಾದಾರ, ಮಾಂತಗೌಡ ಸುಂಬಡ, ಬಸನಗೌಡ ಬಿರಾದಾರ, ಮಲ್ಲನಗೌಡ ಬಿರಾದಾರ, ರಾಜು ಸಿದ್ದರೆಡ್ಡಿ, ವಿನಾಯಕ ಮಾಶ್ಯಾಳ, ಬಾಬು ಸಿದ್ದರೆಡ್ಡಿ, ನಿಂಗರಾಜ ಕೊಟಗಿ, ಸುನಿಲ್ ಬೋರಾವತ, ಸುರೇಶ ಉಪ್ಪಾರ, ಅನಿಲ್ ಸೋಲಂಕರ ಸೇರಿದಂತೆ ಗ್ರಾಮದ ಎಲ್ಲ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಗಣೇಶೋತ್ಸವ ಮಂಡಳಿ ಪದಾಧಿಕಾರಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.
-----ಕೋಟ್‌ಗಣೇಶೋತ್ಸವದಿಂದ ಯುವಕರಲ್ಲಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿತು. ಕಾಂಗ್ರೆಸ್ ಸರ್ಕಾರ ಆಚರಣೆಗೆ ಇಂದು ನಿಯಮಗಳನ್ನು ವಿಧಿಸಿದೆ. ಹಿಂದುತ್ವ ಉಳಿಸಲು ನಾವೆಲ್ಲರೂ ಜಾಗೃತರಾಗಬೇಕಾಗಿದೆ. ನಮ್ಮ ಧರ್ಮ ಎಲ್ಲರನ್ನು ಅಪ್ಪಿಕೊಳ್ಳುತ್ತದೆ. ಇದಕ್ಕೆ ಉದಾಹರಣೆ ಪೈಲೆಟ್ ಮಚ್ಚಾರ ಹನುಮಾನ್ ಚಾಲೀಸ್ ಪಠಣದಿಂದ ಸುಮಾರು 187 ಜನರ ಪ್ರಾಣ ಕಾಪಾಡಿದ್ದಾನೆ. ಇದು ವಿಶ್ವಕ್ಕೆ ಮಾದರಿ.ಬಸನಗೌಡ ಪಾಟೀಲ ಯತ್ನಾಳ, ವಿಜಯಪುರ ನಗರ ಶಾಸಕ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.