ಭೀಮಣ್ಣ ಗಜಾಪುರ
ಕೂಡ್ಲಿಗಿಯ ಹಿಂದಿನ ಶಾಸಕರಾದ ಎನ್.ವೈ. ಗೋಪಾಲಕೖಷ್ಣ ಅವರು ₹640 ಕೋಟಿ ವೆಚ್ಚದಲ್ಲಿ 80 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೆ ತಂದು ಕಾಮಗಾರಿ ಮಾಡಿಸಿದ್ದರು. ಉಳಿದ ಕಾಮಗಾರಿಯನ್ನು ಈಗಿನ ಶಾಸಕರಾದ ಡಾ. ಎನ್.ಟಿ. ಶ್ರೀನಿವಾಸ್ ಅವರು ಪೂರ್ಣಗೊಳಿಸಿ ತಮ್ಮ ಅವಧಿಯಲ್ಲಿಯೇ ಕೆರೆಗಳಿಗೆ ನೀರು ತುಂಬಿಸುವ ಮೂಲಕ ಕೂಡ್ಲಿಗಿ ತಾಲೂಕಿನಲ್ಲಿ ಇತಿಹಾಸ ಬರೆದಿದ್ದಾರೆ. ಕೂಡ್ಲಿಗಿ ತಾಲೂಕಿನಲ್ಲಿ ಮಳೆಗಾಲದಲ್ಲಿಯೇ ಬಣಗುಡುತ್ತಿರುವ ಕೆರೆಗಳನ್ನು ನೋಡಿ ಪ್ರತಿವರ್ಷ ಹತಾಶರಾಗುತ್ತಿದ್ದ ಇಲ್ಲಿಯ ರೈತರು ಇದೀಗ ಕೆರೆಯಲ್ಲಿ ಗಂಗೆಯನ್ನು ನೋಡಿ ಸಂತಸದ ನಗೆ ಬೀರುತ್ತಿದ್ದಾರೆ.
ಕೆರೆಗೆ ನೀರು ತುಂಬಿಸುವ ಯೋಜನೆಗೆ ಕೊನೆಯ ಕ್ಷಣದಲ್ಲಿ ಬಹಳ ಎಡರು ತೊಡರುಗಳು ಎದುರಾಗಿದ್ದವು. ಅವುಗಳನ್ನು ಈಗಿನ ಕೂಡ್ಲಿಗಿ ಶಾಸಕರಾದ ಡಾ. ಎನ್.ಟಿ. ಶ್ರೀನಿವಾಸ್ ಅವರು ನಿರಂತರ ಶ್ರಮ, ಕಾಳಜಿಯಿಂದ ಬಗೆಹರಿಸಿದ್ದಾರೆ. ಎಲ್ಲ ತೊಂದರೆಗಳು ಮುಗಿಯಿತು ಎಂದು ನೀರು ಸರಬರಾಜು ಮಾಡಲು ಮುಂದಾದಾಗ ಹರಪನಹಳ್ಳಿ ಸಮೀಪದ ಹಾಳು ತಿಮ್ಮಲಾಪುರದ ಹತ್ತಿರ ಪೈಪ್ ಲೈನ್ ಒಡೆದು ನೀರು ಪೋಲಾಗುತ್ತಿತ್ತು. ಯುದ್ಧೋಪಾದಿಯಲ್ಲಿ ತಂತ್ರಜ್ಞರು ಪೈಪ್ ಲೀಕೇಜ್ ಮುಚ್ಚಲು ಹರಸಾಹಸಪಟ್ಟು ಸರಿಪಡಿಸಿದ್ದಾರೆ. ಹೀಗಾಗಿ, ಗುರುವಾರ ತಾಲೂಕಿನ ಕೆಲವು ಕೆರೆಗಳಿಗೆ ನೀರು ಹರಿದು ಬರಲು ಶುರುವಾಗಿದೆ. ಬರದಲ್ಲಿ ಬೆಂದ ರೈತರು ಕೆರೆಗಳಿಗೆ ನೀರು ಬರುತ್ತಿರುವುದನ್ನು ನೋಡಿ ಸಂಭ್ರಮಿಸುತ್ತಿದ್ದಾರೆ.ನಿರಂತರ ತುಂಬಿಸಲು ಸಾಧ್ಯವೇ?
ತಾಲೂಕಿನ ನೂರಾರು ವರ್ಷಗಳ ಕನಸು ನನಸಾಗಿದೆ. ಕೂಡ್ಲಿಗಿ ತಾಲೂಕಿನ ಕೆರೆಗಳಿಗೆ ನೀರು ಹರಿದು ಬರುತ್ತಿದೆ. ಕೆಲ ತಾಂತ್ರಿಕ ದೋಷಗಳನ್ನು ಈಗಾಗಲೇ ಸರಿಪಡಿಸಲಾಗಿದೆ. ನಿರಂತರ ಕೆರೆ ನೀರು ತುಂಬಿಸುವ ಯೋಜನೆಯ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೇನೆ. ತುಂಗಾಭದ್ರಾ ನದಿಯಲ್ಲಿ ನೀರು ಹರಿಯುತ್ತಿದೆ. ಹೀಗಾಗಿ, ಕೂಡ್ಲಿಗಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳು ಕಾರ್ಯಪ್ರವೖತ್ತರಾಗಿದ್ದಾರೆ. ಬರದಲ್ಲಿ ಕೆರೆಗಳಿಗೆ ನೀರು ಬರುತ್ತಿರುವುದರಿಂದ ಅಂತರ್ಜಲ ವೖದ್ಧಿಯಾಗಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಕಡಿಮೆಯಾಗುತ್ತದೆ ಎನ್ನುತ್ತಾರೆ ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್.