ದಾಬಸ್‍ಪೇಟೆ: ಗ್ರಾಮೀಣ ಪ್ರದೇಶದ ರೈತರು ಕೃಷಿ ಚಟುವಟಿಕೆಗಳಿಗೆ ಕೊಳವೆಬಾವಿಗಳನ್ನು ಹಾಕಿಸಲು ಆರ್ಥಿಕವಾಗಿ ಸಬಲರಲ್ಲದ ಕುಟುಂಬಗಳಿಗೆ ಗಂಗಾ ಕಲ್ಯಾಣ ಯೋಜನೆ ವರದಾನವಾಗಿದೆ ಎಂದು ತ್ಯಾಮಗೊಂಡ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಕೀಲ ಹನುಮಂತೇಗೌಡ ತಿಳಿಸಿದರು.
ಮುಂದಿನ ದಿನಗಳಲ್ಲಿ ಉಳಿದ ಸಮುದಾಯದ ನಿಗಮಗಳ ಮೂಲಕ ಆಯ್ಕೆಯಾದ ರೈತರಿಗೂ ಗಂಗಾ ಕಲ್ಯಾಣ ಯೋಜನೆಯ ಮೂಲಕ ಕೊಳವೆ ಬಾವಿಯನ್ನು ಹಾಕಿಸಲಾಗುತ್ತದೆ, ಕ್ಷೇತ್ರದಲ್ಲಿ ಜನಪರವಾದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ, ರೈತರಿಗೆ ನೇರವಾಗಿ ಯೋಜನೆಗಳಿಂದ ಅನುಕೂಲವಾಗುವಂತೆ ಅಧಿಕಾರಿಗಳು ಹಾಗೂ ಶಾಸಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ತ್ಯಾಮಗೊಂಡ್ಲು ಗ್ರಾಪಂ ಮಾಜಿ ಅಧ್ಯಕ್ಷ ಜಗದೀಶ್, ಎನ್‍ಪಿಎ ಸದಸ್ಯ ಆಂಜನಮೂರ್ತಿ, ಕೆಪಿಸಿಸಿ ಸದಸ್ಯ ಪ್ರಕಾಶ್ ಬಾಬು, ಕಳಲುಘಟ್ಟ ಗ್ರಾಪಂ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಮುಖಂಡರಾದ ರಬ್ ನವಾಜ್, ರುದ್ರೇಶ್, ಆಂಜನಮೂರ್ತಿ, ಧರಣೇಶ್, ಗಂಗಪ್ಪ, ಗಿರೀಶ್, ರಾಜಣ್ಣ, ಚಂದ್ರಣ್ಣ, ಪ್ರಕಾಶ್, ಭೂಮತ್ತು ಗಣಿ ಇಲಾಖೆಯ ಅಧಿಕಾರಿ ನೀಲಕಂಠ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.