ಬಸವ ಪುತ್ಥಳಿಗೆ ಸೇವೆ ಸಲ್ಲಿಸಲು ಗಂಗಾ ಮಾತಾಜಿ ಮನವಿ

KannadaprabhaNewsNetwork | Published : Oct 21, 2024 12:41 AM

ಸಾರಾಂಶ

ಮೂರು ದಿನಗಳ ವರೆಗೆ ಬಸವಕಲ್ಯಾಣದ ಬಸವ ಮಹಾಮನೆಯ ಆವರಣದಲ್ಲಿ ನಡೆದ ಕಲ್ಯಾಣ ಪರ್ವದ ಸಮಾರೋಪ ಸಮಾರಂಭ ಭಾನುವಾರ ಜರುಗಿತು. ನಗರದ ಕೊಟೆಯಿಂದ ಬಸವ ಮಹಾಮನೆಯವೆರೆಗೂ 23ನೇ ಕಲ್ಯಾಣ ಪರ್ವದ ಭವ್ಯ ಮೆರವಣಿಗೆ ನಡೆಯಿತು

ಬಸವಕಲ್ಯಾಣ: ಬಸವತತ್ವವನ್ನು ಜತ್ತಿನ ತುಂಬ ಪ್ರಚಾರ ಮಾಡಿದ ಕಿರ್ತಿ ಲಿಂಗಾನದ ಸ್ವಾಮಿ ಹಾಗೂ ಮಾತಾಜಿಯವರಿಗೆ ಸಲ್ಲುತ್ತದೆ ಎಂದು ಹಾರಕೂಡದ ಡಾ: ಚೆನ್ನವೀರ ಶಿವಾಚಾರ್ಯರು ನುಡಿದರು ಅವರು ಬಸವ ಧರ್ಮ ಪೀಠದ ಬಸವ ಮಹಾಮನೆಯಲ್ಲಿ ಶನಿವಾರ ಸಂಜೆ ನಡೆದ 23ನೇ ಕಲ್ಯಾಣ ಪವ್ರದ ಧರ್ಮ ಚಿಂತನ ಗೋಷ್ಠಿಯ ಸಾನಿಧ್ಯ ವಹಿಸಿ ಮಾತನಾಡಿದ ಅವರು ಸೂರ್ಯ ಚಂದ್ರ ಇರುವವರೆಗೂ ಮಾತಾಜಿ ಮತ್ತು ಲಿಂಗಾನದ ಅಪ್ಪಾಜಿಯವರ ನೆನಪು ಇರುತ್ತದೆ. ಇವರಿಬ್ಬರು ಕನಸನ್ನು ಈಡೆರಿಸಲು ಜಗದ್ಗುರು ಮಾತೆ ಗಂಗಾದೇವಿಯರು ಹಗಲು ರಾತ್ರಿ ದುಡಿಯುತ್ತಿದ್ದಾರೆ. ವರ್ಷದ 365 ದಿವಸ ಬಸವತತ್ವ ಪ್ರಚಾರದಲ್ಲಿ ಕಳೆದ 40 ವರ್ಷದಿಂದ ಶ್ರಮಿಸುತ್ತಿದ್ದಾರೆ. ಈವಾಗ ಬೆಂಗಳೂರು-ಮೈಸುರ ಹೆದ್ದಾರಿಯಲ್ಲಿ 111 ಅಡಿ ಎತ್ತರದ ಬಸವ ಪುತ್ಥಳಿಯನ್ನು ಸ್ಥಾಪಿಸುತ್ತಿರುವುದು ಐತಿಹಾಸಿಕ ಕಾರ್ಯವಾಗಿದೆ ಇದಕ್ಕೆ ತಮ್ಮ ಮಠದಿಂದ ಒಂದು ಲಕ್ಷದ ರೂಪಾಯಿಗಳು ದೇಣಿಗೆ ನೀಡುವುದಾಗಿ ಘೋಷಿಸಿದರು. ವಿಶ್ವಕ್ಕೆ ವಚನ ಸಾಹಿತ್ಯ ನೀಡುವ ಮೂಲಕ ಶರಣರು ಮಾನವೀಯ ಮೌಲ್ಯಗಳು ನೀಡಿದ್ದಾರೆ. ಅಂತಹ ವಚನಗಳಲ್ಲಿ ಅಡಗಿರುವ ಮೌಲ್ಯಗಳು ಅರಿಯಬೇಕು ಎಂದು ಹಾರಕೂಡ ಶ್ರೀ ನುಡಿದರು. ಸಾನಿದ್ಯ ವಹಿಸಿದ ಜಗದ್ಗುರು ಗಂಗಾ ಮಾತಾಜಿ ಮಾತನಾಡಿ, ಬೆಂಗಳೂರಿನ ಕುಂಬಳಗೂಡನಲ್ಲಿ 111 ಅಡಿ ಬಸವ ಪುತ್ಥಳಿ ನಿರ್ಮಿಸಲು ಮಾತಾಜಿ ಸಂಕಲ್ಪ ಮಾಡಿದ್ದರು ಹೀಗಾಗಿ ಆ ಕಾರ್ಯ ಮುಂದೆ ಸಾಗಬೇಕಾದರೆ ಬಸವ ಭಕ್ತರು ತನು, ಮನ, ಧನದಿಂದ ಸಹಕಾರ ನೀಡಬೇಕು ಎಂದು ಮನವಿ ಮಾಡಿದ ಅವರು ಈ ಕಾರ್ಯ ಪೂರ್ಣಗೋಳ್ಳಲು ಸುಮಾರು 80 ಕೊಟಿ ರೂಪಾಯಿ ಬೇಕಾಗಿರುವುದು ಇದನ್ನು ಸಂಗ್ರಹಿಸುವ ಕೆಲಸ ಬಹು ದೊಡ್ಡದಾಗಿದೆ. ಇದಕ್ಕೆ ಸರ್ಕಾರ ಮತ್ತು ಸಮಾಜದ ಸಹಕಾರ ಪಡೆದು 2026 ರಲ್ಲಿ ಪೂರ್ಣಗೊಳಿಸುವ ಸಂಕಲ್ಪ ಮಾಡಿದ್ದೇವೆ. ಈ ಪುತ್ಥಳಿ ಉದ್ಘಾಟನೆಗೆ ಪ್ರಧಾನ ಮಂತ್ರಿ ಅಥವಾ ರಾಷ್ಟ್ರಪತಿಯವರನ್ನು ಅವ್ಹಾನಿಸಲಾಗಿವುದು ಎಂದರು.ವೇದಿಕೆಯಲ್ಲಿ ಬಸವಕುಮಾರ ಸ್ವಾಮಜಿ ಅಲ್ಲಮಗೀರಿ, ಗಂಗಶೇಟ್ಟಿ ಪಾಟೀಲ ಬೀದರ ಅಧ್ಯಕ್ಷತೆ ವಹಿಸಿದರು. ಡಾ. ಸೋಮನಾಥ ಯಳವಾರ, ಪ್ರೋ: ಶಿವಶರಣಪ್ಪಾ ಹುಗ್ಗೆ ಪಾಟೀಲ, ಡಾ: ಅಮರನಾಥ ಸೋಲಪೂರೆ ಮುಂತಾದವರು ಉಪಸ್ಥಿತರಿದ್ದರು.

ಬಸವಕಲ್ಯಾಣದಲ್ಲಿ ಕಲ್ಯಾಣ ಪರ್ವದ ಕೊನೆಯ ದಿನ ಭವ್ಯ ಮೆರವಣಿಗೆಬಸವಕಲ್ಯಾಣ: ಮೂರು ದಿನಗಳ ವರೆಗೆ ಬಸವಕಲ್ಯಾಣದ ಬಸವ ಮಹಾಮನೆಯ ಆವರಣದಲ್ಲಿ ನಡೆದ ಕಲ್ಯಾಣ ಪರ್ವದ ಸಮಾರೋಪ ಸಮಾರಂಭ ಭಾನುವಾರ ಜರುಗಿತು.ನಗರದ ಕೊಟೆಯಿಂದ ಬಸವ ಮಹಾಮನೆಯವೆರೆಗೂ 23ನೇ ಕಲ್ಯಾಣ ಪರ್ವದ ಭವ್ಯ ಮೆರವಣಿಗೆ ನಡೆಯಿತು. ಈ ಮೆರವಣಿಗೆಗೆ ಕೋಟೆ ಬಳಿ ಹುಲಸೂರ ತಹಸಿಲ್ದಾರ್ ಶಿವಾನಂದ ಮೇತ್ರೆ ಹಾಗೂ ಸಿ.ಪಿ.ಐ ಅಲಿಸಾಬ ಅವರು ವಚನ ಪಠಣ ಮಾಡುವ ಮೂಲಕ ಚಾಲನೆ ನೀಡಿದರು.ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯ ಭಕ್ತಾದಿಗಳು ಶರಣು ಶರಣಿಯರು ಪಾಲ್ಗೊಂಡಿದರು ಜಗದ್ಗುರು ಮಾತೆ ಗಂಗಾದೇವಿಯವರು ಹಾಗೂ ಜಗದ್ಗುರು ಸಿದ್ಧರಾಮೇಶ್ವರ ಸ್ವಾಮಿಜಿ ಮೆರವಣಿಗೆಯಲ್ಲಿ ವಚನಕ್ಕೆ ತಾಳ ಹಾಕಿ ಕುಣಿದರು ಅವರ ಜೊತೆಯಲ್ಲಿ ಸಾವಿರಾರು ಭಕ್ತರು ಸಹ ಕುಣಿದು ಕುಪ್ಪಳಿಸಿದರು. ವಚನಗಳ ಹಾಡು, ಜಾನಪದ ಹಾಡು, ಕುಣಿಯುವವರಿಗೆ ಪ್ರೋತ್ಸಾಹಿಸಿದವು. ಮೆರವಣಿಗೆಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ ಮಾಡಲಾಗಿತ್ತು.ಜಾನಪದ ಕಲಾ ತಂಡಗಳು, ಢೊಳ್ಳು ಕುಣಿತ, ಒಂಟೆ, ಕುದರೆ, ಜಗದ್ಗುರು ಮಾತಾ ಮಹಾದೇವಿ ಮತ್ತು ಜಗದ್ಗುರು ಲಿಂಗಾನಂದ ಸ್ವಾಮಿಜಿ ಭಾವಚಿತ್ರಗಳು ರಥಗಳಲ್ಲಿ ಅಲಂಕರಿಸಿ ಅದರಲ್ಲಿ ವಚನ ಸಹಿತ್ಯದ ಕಟ್ಟನ್ನು ಇಟ್ಟು ಮೆರವಣಿಗೆ ಕಳೆಯನ್ನು ಹೆಚ್ಚಿಸಿದವು.ಮತ್ತೊಂದು ಕಡೆ ದೊಡ್ಡ ಲಾರಿವೊಂದರಲ್ಲಿ ಬಸವಣನವರ ಕುಳಿತಿರುವ ದೊಡ್ಢ ಮೂರ್ತಿಯನ್ನು ಇಟ್ಟಿದ್ದು, ಜನರು ಕಣ್ಣು ತುಂಬ ನೋಡಿ ಆನಂದ ಪಟ್ಟರು. ಈ ಮೂರ್ತಿ ಮುಂದೆ ನಾ ಮುಂದೆ ತಾ ಮುಂದೆ ಎಂದು ಕುಣಿದು ಕುಪ್ಪಳಿಸಿ ಸೇಲ್ಫಿ ತೆಗೆದುಕೊಂಡರು.ಮೆರವಣಿಗೆಯ ಸಮಿತಿಯ ಪ್ರಮುಖ ಕಾರ್ಯಕರ್ತರು, ಗಣ್ಯರಾದ ಶಿವಾನಂದ ಗಂದಗೆ, ರವಿಂದ್ರ ಕೊಳಕೂರ, ಮಲ್ಲಿಕಾರ್ಜುನ ಚೀರಡೆ, ಅನೀಲ ರಗಟೆ, ಬಸವರಾಜ ತೋಂಡಾರೆ, ಶಿವಕುಮಾರ ಶೇಟಗಾರ, ನೀಲೇಶ ಖೂಬಾ, ಹಣಮಂತ ಧನಶೆಟ್ಟಿ, ವಿವೇಕಾನಂದ ಧನ್ನೂರ, ಕಂಟೆಪ್ಪಾ ಗಂದಿಗುಡೆ, ಕಂಟೆಪ್ಪ ಪಾಟೀಲ, ರಾಜೇಶ್ರೀ ಖುಬಾ, ವಿಜಯಲಕ್ಷ್ಮಿ ಗಡ್ಡೆ, ಸವೀತಾ ಬೇಲೂರೆ, ಸಿದ್ದಯ್ಯಾ ಕೌಡಿಮಠ, ಮುಂತಾದವರು ಭಾಗವಹಿಸಿ ಕುಣಿದು ಕುಪ್ಪಳಿಸಿದರು.--ಚಿತ್ರ 20ಬಿಡಿಆರ್58ಬಸವಕಲ್ಯಾಣದ ಬಸವ ಮಹಾಮನೆಯ ಆವರಣದಲ್ಲಿ ನಡೆದ ಮೂರು ದಿನಗಳ ಕಲ್ಯಾಣ ಪರ್ವವು ಭಾನುವಾರ ಮೆರವಣಿಗೆ ನಡೆಸುವ ಮೂಲಕ ಸಮಾರೋಪಗೊಂಡಿತು.

Share this article