ಹರಿಹರದಲ್ಲಿ ಮೈದುಂಬಿ ಹರಿಯುತ್ತಿರುವ ತುಂಗಭದ್ರಾ ನದಿಗೆ ಮಹಿಳೆಯರಿಂದ ಗಂಗಾಪೂಜೆ

KannadaprabhaNewsNetwork |  
Published : Jul 17, 2024, 12:57 AM IST
ಹರಿಹರದಲ್ಲಿ ಮೈದುಂಬಿ ಹರಿಯುತ್ತಿರುವ ತುಂಗಭದ್ರೆಗೆ ಭಾಗೀರಥಿ ಹಬ್ಬದ ನಿಮಿತ್ತ ಮಹಿಳೆಯರು ಮಂಗಳವಾರ ಗಂಗಾಪೂಜೆ ನೆರೆವೇರಿಸಿದರು. | Kannada Prabha

ಸಾರಾಂಶ

ಕಳೆದೊಂದು ವಾರದಿಂದ ಮಲೆನಾಡಿನ ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗುತಿರುವ ಪರಿಣಾಮ ಹರಿಹರದಲ್ಲಿ ಮೈದುಂಬಿ ಹರಿಯುತ್ತಿರುವ ಜೀವನದಿ ತುಂಗಭದ್ರೆಗೆ ಭಾಗೀರಥಿ ಹಬ್ಬದ ನಿಮಿತ್ತ ಮಹಿಳೆಯರು ಮಂಗಳವಾರ ಗಂಗಾಪೂಜೆ ನೆರೆವೇರಿಸಿದರು.

ಕನ್ನಡಪ್ರಭ ವಾರ್ತೆ ಹರಿಹರ

ಕಳೆದೊಂದು ವಾರದಿಂದ ಮಲೆನಾಡಿನ ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗುತಿರುವ ಪರಿಣಾಮ ಹರಿಹರದಲ್ಲಿ ಮೈದುಂಬಿ ಹರಿಯುತ್ತಿರುವ ಜೀವನದಿ ತುಂಗಭದ್ರೆಗೆ ಭಾಗೀರಥಿ ಹಬ್ಬದ ನಿಮಿತ್ತ ಮಹಿಳೆಯರು ಮಂಗಳವಾರ ಗಂಗಾಪೂಜೆ ನೆರೆವೇರಿಸಿದರು.

ಪ್ರತಿ ವರ್ಷ ಆಷಾಢ ಮಾಸದಲ್ಲಿ ಆಚರಿಸುವ ಭಾಗೀರಥಿ ಹಬ್ಬವನ್ನು ನಗರದ ಜನ ನದಿ ದಡದಲ್ಲಿ ಆಚರಿಸಿದರೆ, ಗ್ರಾಮೀಣ ಭಾಗದ ಜನ ಕೆರೆ, ಕಟ್ಟೆಗೆ ತೆರಳಿ ಗಂಗಾಪೂಜೆ ಸಲ್ಲಿಸಿದರು. ನದಿ ದಡದ ರಾಘವೇಂದ್ರ ಸ್ವಾಮಿ ಮಠ, ಮೆಟ್ಟಿಲು ಹೊಳೆ, ಹರಿಹರೇಶ್ವರ ದೇವಸ್ಥಾನ, ಅಯ್ಯಪ್ಪ ಸ್ವಾಮಿ ದೇವಸ್ಥಾನ ಬಳಿ ಜನರು ಪೂಜೆ ನೆರೆವೇರಿಸಿ, ಬಾಗಿನ ಅರ್ಪಿಸಿದರು.

ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯಲ್ಲಿ ಕೆಲ ದಿನಗಳಿಂದ ಮಳೆ ಆಗುತ್ತಿರುವುದರಿಂದ ನದಿ ಮೈದುಂಬಿ ಹರಿಯುತ್ತಿದೆ. ನಗರದ ಮಹಿಳೆಯರು, ಮಕ್ಕಳು ಸಮೇತರಾಗಿ ಜಿಟಿಜಿಟಿ ಮಳೆಯಲ್ಲಿ ಆಗಮಿಸಿದ್ದ ಜನರು ನದಿಯ ಸೊಬಗನ್ನು ಕಣ್ತುಂಬಿಕೊಂಡರು.

- - - -೧೬ಎಚ್‌ಆರ್‌ಆರ್೬:

ಹರಿಹರದಲ್ಲಿ ಮೈದುಂಬಿ ಹರಿಯುತ್ತಿರುವ ತುಂಗಭದ್ರೆಗೆ ಭಾಗೀರಥಿ ಹಬ್ಬದ ನಿಮಿತ್ತ ಮಹಿಳೆಯರು ಮಂಗಳವಾರ ಗಂಗಾಪೂಜೆ ನೆರೆವೇರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆಆರ್‌ಎಸ್‌ನಿಂದಲೇ ನಗರಕ್ಕೆ ನೀರು ತರಲು ಸ್ಕೀಂ
ತರಕಾರಿಯಲ್ಲಿನ ಅಪಾಯಕಾರಿ ಅಂಶ ದೇಹಕ್ಕೆ ಸೇರದಿರಲು ಈ ಕ್ರಮ ಅನುಸರಿಸಿ ಸೇವಿಸಿ